ಪ್ರಧಾನಿ ಮೋದಿ ಕಚೇರಿಯನ್ನೇ OLXನಲ್ಲಿ ಮಾರಟಕ್ಕಿಟ್ಟ ಖತರ್ನಾಕ್‌ಗಳು; ನಾಲ್ವರ ಬಂಧನ

ಪ್ರಧಾನಿ ಮೋದಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಅವರ ಕಚೇರಿಯನ್ನು ಓಎಲ್‌ಎಕ್ಸ್‌ ಮಾರಾಟಕ್ಕಿಟ್ಟು, ಜಾಹೀರಾತು ನೀಡಿದ್ದಾರೆ ಎಂಬ ಆರೋಪದ ಮೇಲೆ ನಾಲ್ವರನ್ನು ವಾರಣಾಸಿಯ ಪೊಲೀಸರು ಬಂಧಿಸಿದ್ದಾರೆ.

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಪ್ರಧಾನಿಯಾಗಿರುವ ಮೋದಿಯವರು, ತಮ್ಮ ಕ್ಷೇತ್ರದ ಜನರ ಸಂಪರ್ಕಕ್ಕಾಗಿ ವಾರಣಾಸಿಯ ಜವಾಹರ್‌ ನಗರದಲ್ಲಿ “ಜನಸಂಪರ್ಕಕಾರ್ಯಲಯ”ವನ್ನು ತೆರೆದಿದ್ದಾರೆ. ಈ ಕಚೇರಿಯ ಚಿತ್ರಗಳನ್ನು ಓಎಲ್‌ಎಕ್ಸ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದ ಆರೋಪಿಗಳು ಕಚೇರಿ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದಾರೆ.

ಪ್ರಧಾನಿ ಮೋದಿಯವರ ಕಚೇರಿಯ ಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿ ಮಾರಟಕ್ಕಿಡಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂತು. ಕೂಡಲೇ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ಫೋಟೋಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದವನಾಗಿದ್ದಾನೆ ಎಂದು ವಾರಣಾಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಮಿತ್ ಪಾಠಕ್ ತಿಳಿಸಿದ್ದಾರೆ.


ಇದನ್ನೂ ಓದಿ: ಡಿ. 27ಕ್ಕೆ ಮೋದಿ ಮನ್‌-ಕೀ-ಬಾತ್: ‘ಅಂಬಾನಿ ಮೊಮ್ಮಗನಿಗೆ ಹೆಸರು ಸೂಚಿಸಿ’ ಪೋಸ್ಟ್‌ ವೈರಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights