ಜನವರಿ ಒಂದರಿಂದ ಶಾಲಾ-ಕಾಲೇಜ್ ಆರಂಭಕ್ಕೆ ಸಿಎಂ ಗ್ರೀನ್ ಸಿಗ್ನಲ್…!
ಕೊರೊನಾ ಕಾರಣದಿಂದಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಆದರೀಗ ಸಿಎಂ ಅವರೇ ಜನವರಿ 1ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹೌದು.. ಗೃಹ ಕಚೇರಿ ಕೃಷ್ನಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಇಷ್ಟು ದಿನ ಹಿಂದೇಟು ಹಾಕುತ್ತಿತ್ತು. ಆದರೀಗ ಮುಂಜಾಗೃತ ಕ್ರಮಗಳನ್ನು ಅನುಸರಿಸುವ ಮೂಲಕ ಈ ತೀರ್ಮಾನ ತೆಗೆದುಕೊಂಡಿದೆ. ಕೆಲವು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲು ಶಾಲೆಗಳಿಗೆ ಸೂಚಿನೆ ನೀಡಿದೆ.
ಸುಮಾರು ತಿಂಗಳುಗಳಿಂದ ಶಾಲಾ ಕಾಲೇಜುಗಳಿಲ್ಲದೇ ಇರುವುದು ಮುಂದಿನ ಮಕ್ಕಳ ಭವಿಷ್ಯಕ್ಕೆ ಭಾರೀ ಪರಿಣಾಮ ಬೀರುವ ಆತಂಕ ಎದುರಾಗಿತ್ತು. ಆದರೆ ಕೊರೊನಾ ಹರಡುವಿಕೆಯ ಭಯದಿಂದ ಅಧಿಕ ಸಂಖ್ಯೆಯಲ್ಲಿ ಪೋಷಕರು ಶಾಲಾ -ಕಾಲೇಜುಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸದ್ಯ ಕೊರೊನಾ ಹರಡುವಿಕೆಯ ಕೆಲ ನಿಯಮಗಳನ್ನು ಅನುಸರಿಸಲು ತೀರ್ಮಾನಿಸಲಾಗಿದೆ. ತಜ್ಞರ ವರದಿ ಮಾಹಿತಿ ಮೇರೆಗೆ ಸಿಎಂ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಜನವರಿಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಆರಂಭವಾಗಲಿದ್ದು, ಕೆಲ ದಿನಗಳ ಬಳಿಕ 9ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭಕ್ಕೆ ಸೂಚಿಸಲಾಗಿದೆ. ಜನವರಿ 1 ರಿಂದ 9ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಆರಂಭವಾಗಲಿದೆ. ಶಾಲೆಗೆ ಮಕ್ಕಳು ಬರುವಾಗ ಕೆಮ್ಮು, ನಗಡಿ, ಜ್ವರ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ದೃಢೀಕರಣ ಪತ್ರ ತರಬೇಕು. ಶಾಲೆಯಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಕೊರೊನಾ ನಿಯಮಗಳನ್ನು ಪಾಲಿಸಲು ತಿಳಿಸಲಾಗಿದೆ. ಸಾನಿಟೈಸರ್, ಸಮಾಜಿಕ ಅಂತರ ಕ್ಕೆ ಆದ್ಯತೆ ನೀಡಲಾಗುತ್ತದೆ.
ಆದರೆ ಪೋಷಕರು ಶಾಲೆಗೆ ಮಕ್ಕಳನ್ನು ಕಳುಹಿಸಲೇಬೇಕು ಎನ್ನುವ ಒತ್ತಾಯವಿಲ್ಲ. ಪರೀಕ್ಷೆ ಮತ್ತು ಪಠ್ಯಕ್ರಮದ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಸ್ಪರ್ಧಾತ್ಮಹ ಪರೀಕ್ಷೆಗಳಿಗೆ ಮಹತ್ವದ ಘಟ್ಟವಾದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳ ತರಗತಿಗಳನ್ನು ಆರಂಭಿಸಲು ತಜ್ಞರ ಸಮಿತಿ ಸಲಹೆಯನ್ನು ನೀಡಿದ ಬೆನ್ನಲ್ಲೇ ಇಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ‘ಶಾಲೆಗಳಿಗೆ ಬರುವಂತಹ ಒತ್ತಾಯವಿಲ್ಲ. ಆನ್ ಲೈನ ಶಿಕ್ಷಣವನ್ನೂ ಪಡೆಯಬಹುದು. ತರಗತಿಗಳ ಟೈಮ್ ಟೇಬಲ್ ಇಂದು ಸಂಜೆ ಬಿಡುಗಡೆ ಮಾಡಲಾಗುತ್ತದೆ’ ಎಂದಿದ್ದಾರೆ.

