ವಿಷ್ಣು ಪ್ರತಿಮೆ ಧ್ವಂಸ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಅಭಿಮಾನಿಗಳ ಪ್ರತಿಭಟನೆ…!

ಸಾಹಸ ಸಿಂಹ ನಟ ವಿಷ್ಣವರ್ಧನ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕೆ ಸಿಡಿದೆದ್ದ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.

ರಾತ್ರೋರಾತ್ರಿ ಮಾಗಡಿ ರೋಡ್ ಬಳಿ ಇದ್ದ ವಿಷ್ಣು ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ವಿಷ್ಣು ಪ್ರತಿಮೆ ಇಲ್ಲದಕ್ಕೆ ಎದೆ ಹೊಡೆದುಕೊಂಡು ಫ್ಯಾನ್ ಕಣ್ಣೀರು ಹಾಕಿದ್ದಾರೆ. ಶ್ರೇಷ್ಠ ದಿಗ್ಗಜನಿಗೆ ಮಾಡಿದ ಅವಮಾನಕ್ಕೆ ಅಭಿಮಾನಿಗಳು ಡಿಸಿಪಿ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷ್ಣು ಪ್ರತಿಮೆಯನ್ನು ಮರು ಪ್ರತಿಷ್ಠಾಪನೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತಿ ಶಿಕ್ಷೆ ಕೊಡಿ ಎಂದು ವಿಷ್ಣು ಅಳಿಯ ಅನಿರುದ್ಧ್ ಕೇಳಿಕೊಂಡಿದ್ದಾರೆ. ಸಚಿವ ವಿ. ಸೋಮಣ್ಣ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ, ‘ಘಟನೆ ನನಗೆ ಬೇಸರ ತಂದಿದೆ. ತಾವು ಸೂಕ್ತ ಪರಿಶೀಲನೆ ಮಾಡಿಸುವುದಾಗಿ ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights