ಚೀನಾದ ಶ್ರೀಮಂತ, ಅಲಿಬಾಬಾ ಸಂಸ್ಥೆಯ ಸಂಸ್ಥಾಪಕ ಜಾಕ್ ಮಾ ನಾಪತ್ತೆ!
ಚೀನಾದ ಮೂರನೇ ಅತಿದೊಡ್ಡ ಶ್ರೀಮಂತ, ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಉದ್ಯಮಿ ಜಾಕ್ ಮಾ ಎಲ್ಲಿದ್ದಾರೆ ಎಂಬ ಸುಳಿವಿಲ್ಲ. ಹೀಗಾಗಿ ಅವರು ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.
ಚೀನಾ ಸರ್ಕಾರ ಹಾಗೂ ಜಾಕ್ ಮಾ ನಡುವೆ ಉಂಟಾಗಿದ್ದ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕುತೂಹಲ ಕೆರಳಿಸಿದ್ದು, ಜಗತ್ತಿನ ಗಮನ ಸೆಳೆಯುತ್ತಿದೆ.
ಅವರದೇ ಸಂಸ್ಥೆಯೊಂದರಿಂದ ಆಯೋಜಿತ ಟಿವಿ ರಿಯಾಲಿಟಿ ಶೋನಲ್ಲಿ ಗಣ್ಯ ತೀರ್ಪುಗಾರರಾಗಿ ಜಾಕ್ ಮಾ ಭಾಗವಹಿಸಬೇಕಿತ್ತು. ಇದೀಗ ಹಾಗೆ ಕಾಣಿಸಿಕೊಳ್ಳುವುದರಿಂದ ಜಾಕ್ ಹಿಂದೆ ಸರಿದಿದ್ದು, ಆ ಕಾರ್ಯಕ್ರಮ ಕೂಡ ಮುಂದೂಡಲಾಗಿದೆ.
ಜಾಕ್ ಮಾ ಚೀನಾ ಸರ್ಕಾರ ನಿರ್ಧಾರಗಳನ್ನು ಹಾಗೂ ಅಲ್ಲಿನ ಬ್ಯಾಂಕ್ಗಳ ಹಿನ್ನಡೆಯನ್ನು ಟೀಕಿಸಿ ಬಹಿರಂಗವಾಗಿ ಮಾತನಾಡಿದ್ದರಿಂದ ಉಂಟಾದ ಸಂಘರ್ಷವೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಬಳಿಕ ಅಲ್ಲಿನ ಸರ್ಕಾರ ಜಾಕ್ ಮಾಗೆ ಸಂಬಂಧಿತ ಆಯಂಡ್ ಫೈನಾನ್ಷಿಯಲ್ನ ಐಪಿಒ ರದ್ದು ಮಾಡಿಸಿತ್ತು.
ಅಲ್ಲದೆ ಅಲಿಬಾಬಾ ಇ-ಕಾಮರ್ಸ್ ವಹಿವಾಟಿನ ಮೇಲೆ ವಿಶ್ವಾಸದ್ರೋಹದ ಆರೋಪ ಹೊರಿಸಿ ತನಿಖೆ ನಡೆಸಿತ್ತು. ಪರಿಣಾಮ ಅಲಿಬಾಬಾ ಷೇರು ಹಾಗೂ ಜಾಕ್ ಮಾ ವೈಯಕ್ತಿಕ ಶ್ರೀಮಂತಿಕೆ ಕೂಡ ಕುಸಿದಿತ್ತು. ಈ ನಡುವೆ ಜಾಕ್ ಮಾ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದು ಹಲವು ಊಹಾಪೋಹ ಹಾಗೂ ಕುತೂಹಲಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಪಾಕಿಸ್ಥಾನದಲ್ಲಿ ದೇವಾಲಯ ದ್ವಂಸ ಪ್ರಕರಣ; 08 ಪೊಲೀಸರ ಅಮಾನತು; 100 ಜನರ ಬಂಧನ!

