ಯಶ್ ಅಭಿನಯದ “ಕೆಜಿಎಫ್-2” ಟೀಸರ್ ರಿಲೀಸ್: ಟ್ರೈಲರ್ ಇಲ್ಲಿದೆ ನೋಡಿ!
ಸ್ಯಾಂಡಲ್‌ವುಡ್ ಸ್ಟಾರ್ ನಟ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ಟೀಸರ್ ನಿಗದಿ ಮಾಡಲಾಗಿದ್ದ ದಿನಕ್ಕಿಂತ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ. ಜನವರಿ 08 ರಂದು ಯಶ್ ಬರ್ತಡೇ ಇದ್ದಿದ್ದರಿಂದ ಅಂದೇ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪೈರಸಿ ಚಾಣಾಕ್ಷರ ಕಾಟದಿಂದಾಗಿ ಒಂದು ದಿನ ಮುಂಚೆಯೇ ಜನವರಿ 07ರ ರಾತ್ರಿಯೇ ಟೀಸರ್ ಬಿಡುಗಡೆ ಮಾಡಲಾಗಿದ್ದು, ಇದೀಗ ಯೂಟ್ಯೂಬ್‌ನಲ್ಲಿ ಸಕ್ಕತ್ ಹಿಟ್ ಪಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಲೀಕ್ ಆದ ಕಾರಣ ಒಂದು ದಿನ ಮುಂಚೆಯೇ ಟೀಸರ್ ಬಿಡುಗಡೆ ಮಾಡಲಾಗಿದೆ.
ಟೀಸರ್‌ನಲ್ಲಿ ನರಾಚಿಯ ಏರಿಯಲ್ ಲುಕ್‌ಗಳು ಭೀತಿ ಹುಟ್ಟಿಸುವಂತಿದೆ. ಆಧುನಿಕ ಸ್ಟೆನ್ ಗನ್‌ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ಅಭಿಮಾನಿಗಳಿಗೆ ಹೊಸ ಕ್ರೇಜ್ ಸೃಷ್ಟಿಸುತ್ತಿದೆ. ಆದರೆ, ಸಿಗರೇಟ್ ಹೊತ್ತಿಸಿಕೊಳ್ಳುವ ದೃಶ್ಯವನ್ನು ಬೇರೆ ಯಾವುದೋ ಇಂಗ್ಲಿಷ್ ಸಿನಿಮಾದಿಂದ ಕಾಪಿ ಮಾಡಲಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಟೀಸರ್‌ನ ವೇಗಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಇದೆ. ಕೆಜಿಎಫ್-1 ನಲ್ಲಿ ‘ಪವರ್‌ಫುಲ್ ಪೀಪಲ್ಸ್ ಕಮ್ ಫ್ರಂ ಪವರ್‌ಫುಲ್ ಪ್ಲೇಸಸ್’ ಎಂದಿದ್ದ ಸ್ಲೋಗನ್ ಕೆಜಿಎಫ್ 2 ಬದಲಾಗಿದೆ. ‘ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್’ ಎಂದು ಬದಲು ಮಾಡಿರುವುದು ಈ ಟೀಸರ್‌ನಲ್ಲಿ ಗೊತ್ತಾಗುತ್ತಿದೆ.
ಇನ್ನು, ಪಾರ್ಲಿಮೆಂಟ್‌ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿರುವ ನಟಿ ರವೀನಾ ಟಂಡನ್, ಉದ್ದ ಜಡೆ ಬಿಟ್ಟು ಮಾರುದ್ದದ ಕತ್ತಿ ಹಿಡಿದು ನಿಂತಿರುವ ಸಂಜಯ್ ದತ್ ಲುಕ್‌ಗಳು ಹುಬ್ಬೇರಿಸುವಂತಿವೆ. ಟೀಸರ್‌ನ ಕೊನೆಯಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಲಾಗಿದೆ.
ಇದನ್ನೂ ಓದಿ: ಜನವರಿ 08ಕ್ಕೆ ಯಶ್ ಬರ್ತಡೇ: ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು ಗೊತ್ತೇ?

