ದರ್ಶನ್ ಅಭಿನಯದ ರಾಬರ್ಟ್ ಮಾರ್ಚ್‌ 11ಕ್ಕೆ‌ ರಿಲೀಸ್‌‌!

ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ, ನಟ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 11ರ ಮಹಾಶಿವರಾತ್ರಿಯ ದಿನ ‘ರಾಬರ್ಟ್’ ಚಿತ್ರ ಬಿಡುಗಡೆ ಆಗಲಿದೆ ಎಂದು ದರ್ಶನ್‌ ತಿಳಿಸಿದ್ದಾರೆ.

ಥಿಯೇಟರ್‌ಗಳು ಓಪನ್‌ ಆಗದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ದರ್ಶನ್‌, 30% ಜನಸಾಂದ್ರತೆಯೊಂದಿಗೆ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರಸಾರ ಮಾಡಲು ಅವಕಾಶವಿದ್ದರೂ ಅಂಬಾನಿಯ 5ಜಿ ನೆಟ್‌ವರ್ಕ್‌ಗಾಗಿ ಥಿಯೇಟರ್‌ಗಳನ್ನು ತೆರೆಯುತ್ತಿಲ್ಲ ಎಂದು ಹೇಳಿದ್ದಾರೆ.

ಓಟಿಟಿ ಪ್ಲಾಟ್‌ಫಾಂ ನಮಗೆ ಆಗಿಬರಲ್ಲ. ‘ಸಿನಿಮಾದಲ್ಲಿ ಎಷ್ಟು ಮೇಲಿಂದ ಬೀಳುತ್ತೇವೆ ಎಂಬುದನ್ನು ನಾವು ನೋಡುವುದಿಲ್ಲ. ಹಾಗೇ ಜಂಪ್ ಮಾಡಿದರೆ, ನಮಗೆಷ್ಟು ಕ್ಲಾಪ್ ಸಿಗುತ್ತದೆ ಎಂಬುದನ್ನು ನೋಡುತ್ತೇವೆ. ಆ ಕೆಲಸವನ್ನು ನೀವು ದೊಡ್ಡ ಪರದೆಯ ಮೇಲೆ ನೋಡುವುದನ್ನು ಬಿಟ್ಟು, ಮೊಬೈಲ್​ನಲ್ಲಿಯೋ ಟಿವಿಯಲ್ಲಿಯೋ ನೋಡಿದರೆ ಮಜ ಇರಲ್ಲ. ಎಲ್ಲ ಕಡೆಗೂ ಜನ ಇದ್ದಾರೆ. ಆದರೆ ಚಿತ್ರಮಂದಿರ ಮಾತ್ರ ಇನ್ನೂ ಪೂರ್ಣವಾಗಿ ತೆರೆದಿಲ್ಲ. ಇದರ ಹಿಂದೆ 5ಜಿ ಅನ್ನೋ ಮರ್ಮ ಇದೆ. ನಾವಂತೂ ನಮ್ಮ ಚಿತ್ರವನ್ನು ಓಟಿಟಿಗೆ ಕೊಡಲ್ಲ. ಥಿಯೇಟರ್‌ನಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿದ್ದಾರೆ.

ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ ಮಾರ್ಚ್‌ 11ಕ್ಕೆ ಬಿಡುಗಡೆಯಾಗಲಿದೆ. ಇದಲ್ಲದೆ, ಪುನೀತ್ ‘ಯುವರತ್ನ’ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆ ಆಗಲಿದೆ. ಏಪ್ರಿಲ್ 23ಕ್ಕೆ ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ 3’ ಚಿತ್ರ ತೆರೆಕಾಣಲಿದೆ.


ಇದನ್ನೂ ಓದಿ: ಅಂಬಾನಿ ವಿರುದ್ದ ಸಿಡಿದ ದರ್ಶನ್: ಥಿಯೇಟರ್ ಓಪನ್ ಮಾಡದ ಹಿಂದಿದೆ ದೊಡ್ಡ ಹಗರಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights