ಕೆಜಿಎಫ್-2 ಟೀಸರ್‌ನಲ್ಲಿ ಪ್ರಚೋದನಾ ದೃಶ್ಯ: ಯಶ್‌ಗೆ ಆರೋಗ್ಯ ಇಲಾಖೆ ನೋಟಿಸ್!
ನಟ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನ ಎಲ್ಲಾ ದಾಖಲೆಗಳನ್ನು ಮುರಿದಿರುವ ಟೀಸರ್ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಟೀಸರ್ ಸಕ್ಸಸ್‌ನ ಖುಷಿಯಲ್ಲಿರುವ ನಟ ಯಶ್‌ಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು, ಚಿತ್ರ ತಂಡಕ್ಕೆ ಶಾಕ್ ನೀಡಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ -2 ಟೀಸರ್‌ನಲ್ಲಿ ಪ್ರೇಕ್ಷಕರನ್ನು ಗುಲ್ ಎಚ್ಚಿಸಿದ್ದ ದೃಶ್ಯ, ಯಶ್ ಸಿಗರೇಟ್ ಹೊತ್ತಿಸುವುದು. ಬೆಂಕಿಯಿಂದ ಕಾದಿದ್ದ ರಾಡ್‌ನಿಂದ ಸಿಗರೇಟ್ ಹಚ್ಚುವ ದೃಶ್ಯ ದೂಮಪಾನ ಸೇವನೆ ಪ್ರಚೋದಿಸುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಆ ದೃಶ್ಯದ ಕಾರಣಕ್ಕಾಗಿ ನಟ ಯಶ್‌ಗೆ ನೋಟಿಸ್ ನೀಡಿದೆ.

ಲಕ್ಷಾಂತರ ಅಭಿಮಾನಿಗಳು ನಿಮ್ಮನ್ನು ಫಾಲೋ ಮಾಡುತ್ತಾರೆ. ಅವರು ಇಂತಹ ದೃಶ್ಯಗಳಲ್ಲಿಯೂ ನಿಮ್ಮನು ಅನುಸರಿಸುತ್ತಾರೆ. ದೂಮಪಾನವು ಕ್ಯಾನ್ಸ್ರ್ ನಂತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇಂತಹ ದೃಶ್ಯಗಳಿಂದ ಪ್ರೇರೇಪಿತಗೊಳ್ಳುವ ಯುವಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಇಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಿಂದ ತೆರವುಗೊಳಿಸಬೇಕು ಎಂದು ನೊಟೀಸ್‌ನಲ್ಲಿ ಆರೋಗ್ಯ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ಕೆಜಿಎಫ್-2 : ಟೀಸರ್ ಗೆ ಫ್ಯಾನ್ಸ್ ಫಿದಾ!

