ಮಂತ್ರಿಗಿರಿಗಾಗಿ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ : ಬಿಜೆಪಿಯಲ್ಲಿ ಭುಗಿಲೆದ್ದ ಅಸಮಧಾನ!

ಬಿಎಸ್ ವೈ ಸಂಪುಟಕ್ಕೆ ಕೊನೆಗೂ ‘ಸಪ್ತ ಸಚಿವರ’ ಬಲ ಬಂದಿದೆ. ಸಂಕ್ರಾಂತಿಗೆ ಕೊನೆಗೂ ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇಂದು ಸಂಜೆ 7 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಬಿಜೆಪಿಯಲ್ಲಿ ಹಲವಾರು ಸಚಿವಾಕಾಂಕ್ಷಿಗಳಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಧಾನ ಹೊರಹಾಕಿದ್ದಾರೆ.

ಮಂತ್ರಿಗಿರಿ ಕೈತಪ್ಪಿದ ಹಿನ್ನೆಲೆ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ..

ಮಂತ್ರಿಗಿರಿ ಸಿಗದಿದ್ದಕ್ಕೆ ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ಸಂಘಟನೆ ಮತ್ತು ಸರ್ಕಾರಕ್ಕೆ ಸೇತುವೆಯಾಗಿ ಕೆಲಸ ಮಾಡಿದ್ದೇನೆ.ನಮ್ಮ ಕಾರ್ಯಕರ್ತರಿಗೆ ನಾನೇನು ಉತ್ತರ ಕೊಡಲಿ ಎಂದು ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ. ಕಾರ್ಯಕರ್ತರಿಗೆ ತುಂಬಾನೇ ನೋವಾಗಿದೆ. ಯಾರು ಲಾಬಿ ಮಾಡುತ್ತಾರೆ ಅವರು ಸಚಿವರಾಗುತ್ತಾರೆ. ನಾವು ಲಾಬಿ ಮಾಡುವುದಿಲ್ಲ ಹೀಗಾಗಿ ನಮಗೆ ಕೈತಪ್ಪಿದೆ ಎಮದು ರೇಣುಕಾಚಾರ್ಯ ಅಸಮಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಶಾಸಕ ರೇಣುಕಾಚಾರ್ಯ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಕಣ್ಣೀರು ಹಾಕಿದ್ದಾರೆ.

ಇದಕ್ಕೆ ಬಹಳ ಪ್ರೀತಿಯಿಂದ ಅರುಣ್ ಸಿಂಗ್ ರೇಣುಕಾಚಾರ್ಯರನ್ನು ಮಾತನಾಡಿಸಿ “ ಈ ಬಗ್ಗೆ ರಸ್ತೆಯಲ್ಲಿ ಮಾತನಾಡುವುದು ಬೇಡ. ಮಾತನಾಡೋಣ ಎಂದು ಹೇಳಿದ್ದಾರೆ” ಎಂದು ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ.

ಹೆಚ್ ವಿಶ್ವನಾಥ್ ಕಿಡಿ :

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಹರಿದಾಡುತ್ತಿದೆ. ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರಿದ ಹೆಚ್ ವಿಶ್ವನಾಥ್ ಗೆ ಸಚಿವ ಸ್ಥಾನ ಕೈತಪ್ಪಿದ್ದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಹೆಚ್ ವಿಶ್ವನಾಥ್, ” ಸಿಪಿ ಯೋಗೇಶ್ವರ್ ಫ್ರಾಡ್. ಆತನಿಗೇಕೆ ಸಚಿವ ಸ್ಥಾನ? ಆತನ ಮೇಲೆ 420 ಕೇಸ್ ಗಳಿವೆ. ಹಾಗೆ ನೋಡಿದರೆ ಮುನಿರತ್ನಗೆ ಸಚಿವ ಸ್ಥಾನ ಕೊಡಬೇಕು.

ಬಿಎಸ್ ವೈ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ನಾಲಿಗೆ ಮತ್ತು ಮಾತು ಕಳೆದುಕೊಂಡಿದ್ದಾರೆ. ನಾಗೇಶ್ ಅವರನ್ನು ಯಾಕೆ ಸಂಪುಟದಿಂದ ತೆಗೆಯುತ್ತೀರಿ. ಸೋತಂತ ವ್ಯಕ್ತಿಗೆ ಸಚಿವ ಸ್ಥಾನ ಯಾಕೆ..? ನಮಗ್ಯಾಕೆ ಇಲ್ಲ. ಬಿಜೆಪಿ ನಾಯಕರು ಸಮಯಕ್ಕಷ್ಟೇ ಬರುತ್ತಾರೆ. ಬಿಎಸ್ ವೈ ಅಧಿಕಾರಕ್ಕೆ ಬರುವರೆಗೂ ನಾವು ಕಣ್ಗಾವಲಾಗಿದ್ವಿ. ಆದರೆ ಈಗ ನಮ್ಮನ್ನು ಕೈಬಿಟ್ಟಿದ್ದಾರೆ. 13 ಜನರ ಭಿಕ್ಷೆ ನಿಮಗೆ ಅಧಿಕಾರ ಸಿಕ್ಕಿದೆ .ಬಿಎಸ್ ವೈ ಗೆ ಸಿದ್ದಲಿಂಗೇಶ್ವರ ದೇವರು ಒಳ್ಳೆದು ಮಾಡುವುದಿಲ್ಲ” ಎಂದು ವಿಶ್ವನಾಥ್ ಶಾಪ ಹಾಕಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಅಸಮಧಾನ :-

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಸತೀಶ್ ರೆಡ್ಡಿ ಕೂಡ ಫೇಸ್ ಬುಕ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights