ಆಗ್ರಾ ಸ್ಟಾಲ್‌ನಲ್ಲಿ ಬೆಣ್ಣೆ ಚಾಯ್ ತಯಾರಿಸುವ ವಿಡಿಯೋ ವೈರಲ್…!

ಇಂಟರ್ನೆಟ್ ನಲ್ಲಿ ಅತ್ಯಂತ ವಿಲಕ್ಷಣ ಆಹಾರ ಸಂಯೋಜನೆಗಳು ವೈರಲ್ ಆಗುವುದನ್ನು ನಾವು ನೋಡಿದ್ದೇವೆ. 2020ನೇ ವರ್ಷ ಮುಗಿಯುತ್ತಿದ್ದಂತೆ ರಸಗೊಲ್ಲಾ ಬಿರಿಯಾನಿ ಮತ್ತು ಚಾಕೊಲೇಟ್ ಮ್ಯಾಗಿಯಂತಹ ಆಹಾರ ತಯಾರಿಕೆಗೆ ನೆಟ್ಟಿಗರು ಮುಖಕಿವಿಚಿಕೊಂಡಿದ್ದು ಗೊತ್ತಿದೆ. ಮಾತ್ರವಲ್ಲದೇ ಇಂತಹ ಆಹಾರಗಳಿಂದ ದೂರ ಹೋಗಬೇಕೆಂದು ಆಶಿಸಿದ್ದು ಕಾಣಬಹುದು.

ಈ ಬಾರಿಯೂ ಮತ್ತೊಂದು ವಿಲಕ್ಷಣ ಆಹಾರ ಸಂಯೋಜನೆಯು ಅಂತರ್ಜಾಲದಲ್ಲಿ ವೈರಲ್ ಆಗಿವುದರಲ್ಲಿ ಯಶಸ್ವಿಯಾಗಿದೆ. ಇದನ್ನು ಬಟರ್ ಟೀ ಎಂದು ಕರೆಯಲಾಗುತ್ತದೆ.

Video of butter chai goes viral

ವೈರಲ್ ವೀಡಿಯೊ ಯಾವುದು?

ಒಬ್ಬ ವ್ಯಕ್ತಿಯು ತಮ್ಮ ಸ್ಟಾಲ್‌ನಲ್ಲಿ ಚಹಾ ತಯಾರಿಸುವಾಗ ಅದರಲ್ಲಿ ಬಹಳಷ್ಟು ಬೆಣ್ಣೆಯನ್ನು ಸೇರಿಸುವ, ಒಲೆಯ ಮೇಲೆ ಕುದಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಪ್ರತಿ ಚಾಯ್-ಪ್ರೇಮಿಯ ಕೆಟ್ಟ ದುಃಸ್ವಪ್ನ ಎಂದು ನೆಟಿಜನ್‌ಗಳು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫುಡಿಯಾಗ್ರಾಮ್ ಎಂಬ ಹೆಸರಿನ ಪುಟ ಹಂಚಿಕೊಂಡಿದೆ. ಆಗ್ರಾ ನಗರದ ಬಾಬಾ ಟೀ ಸ್ಟಾಲ್‌ನಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.

ಇಂಟರ್ನೆಟ್ ರಿಯಾಕ್ಟ್ ಹೇಗೆ?

ಈ ವೀಡಿಯೋ ಹಂಚಿಕೊಂಡಾಗಿನಿಂದ ಆನ್‌ಲೈನ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಇದು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದನ್ನು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಹಂಚಿಕೊಳ್ಳಲಾಗಿದೆ.

ನೆಟಿಜನ್‌ಗಳು ತಮ್ಮ ಅಚ್ಚುಮೆಚ್ಚಿನ ಕಪ್ ಚಹಾಕ್ಕೆ ಬೆಣ್ಣೆ ಸೇರ್ಪಡೆಯ ಬಗ್ಗೆ ಸಾಕಷ್ಟು ಅಸಮಧಾನ ಹೊಂದಿದ್ದು,  ಹೆಚ್ಚಿನವರು ತಮ್ಮ ಚಹಾದಲ್ಲಿ ಬೆಣ್ಣೆಯಿಂದ ಹೊಂದುವ ಕಲ್ಪನೆಯಿಂದ ಅಸಹ್ಯಗೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights