ನಮ್ಮನ್ನ ಹಿಡಿತಾರೆ, ಹೊಡಿತಾರೆ ಎಂಬ ಭಯದಿಂದ ಬಾಂಬೆಗೆ ಹೋಗಿದ್ವಿ: ಸಚಿವ ಬಿ.ಸಿ ಪಾಟೀಲ್
ಕರ್ನಾಟಕದಲ್ಲಿ ಭಯಾನಕರವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ನಮ್ಮನ್ನ ಹಿಡಿತಾರೆ, ಹೊಡಿತಾರೆ ಎಂಬ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ ಎಂದು ಮೈತ್ರಿ ಸರ್ಕಾರದಲ್ಲಿ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ನೀವೆ ನಮಗೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಹೋಗೋದಕ್ಕೆ ಇಲ್ಲಿನ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು ಎಂದು ಮೈಸೂರಿನಲ್ಲಿ ಬಿಸಿ ಪಾಟೀಲ್ ಹೇಳಿದ್ದಾರೆ.
ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್ಗೆ ಲಿಫ್ಟ್ ಅಲ್ಲಿ ಹೊಡೆದಿದ್ರು. ಆಮೇಲೆ ಖರ್ಗೆ ಆಫಿಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ರು. ನಮ್ಮ ಸ್ವತಂತ್ರದಲ್ಲಿ ರಾಜೀನಾಮೆ ಕೊಟ್ಟಿದ್ದೆವು. ಆದರೆ, ನಮಗೇನಾಗುತ್ತೋ ಅನ್ನೋ ಭಯದಲ್ಲಿ ಹೆದರಿಕೆಯಿಂದ ನಾವು ಬಾಂಬೆಗೆ ಹೋಗಬೇಕಾಯಿತು ಎಂದು ಅವರು ವಿವರಿಸಿದ್ದಾರೆ.
ನಮ್ಮ ಟೀಂ ಅಲ್ಲಿ ಒಡಕು ಏನಿಲ್ಲ ನಾವೆಲ್ಲ ಒಗ್ಗಟ್ಟಾಗಿ ಇದ್ದೀವಿ. ನಾವು ಬಾಂಬೆ ಟೀಂ ಅಲ್ಲ. ಈಗ ನಾವೆಲ್ಲ ಕರ್ನಾಟಕದಲ್ಲೆ ಇದ್ದೀವಿ. ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ. ಬಾಂಬೆಗೆ ಹೋಗಿದ್ದ ನಾವೆಲ್ಲ ಸ್ನೇಹಿತರು. ಈಗ ಇನ್ನು 104 ಜನ ಹೆಚ್ಚು ಸ್ನೇಹಿತರು ಸಿಕ್ಕಿದ್ದಾರೆ ಈಗ ನಾವೆಲ್ಲ ಒಂದೆ ಎಂದು ತಿಳಿಸಿದ್ದಾರೆ.
ಸಿಎಂ ಹೇಳಿದ್ದಾರೆ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಅಂತ. ಆಗ ಮುನಿರತ್ನ ಸಚಿವರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಧಾರವಾಡ ಭೀಕರ ಅಪಘಾತ ಪ್ರಕರಣ : ಸಾವನ್ನಪ್ಪಿದ ಎಲ್ಲಾ ಮಹಿಳೆಯರು ವೈದ್ಯರೆಂದು ತಪ್ಪು ಸಂದೇಶ ಹಂಚಿಕೆ!

