ದಲಿತ ಯುವಕನಿಗೆ ಮಾರಣಾಂತಿಕವಾಗಿ ಥಳಿಸಿ ಮೂತ್ರ ಸುರಿದ ದುಷ್ಕರ್ಮಿಗಳು: ನಾಲ್ವರ ಬಂಧನ

ದಲಿತ ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿ, ಅತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಕ್ರೌರ್ಯ ಎಸಗಿರುವ ಘಟನೆ ತಮಿಳುನಾಡಿನ ಪುದುಕೊಟೈ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

18 ವರ್ಷದ ದಲಿತ ಯುವಕನನ್ನು ಮೇಲ್ಜಾತಿಯ ಪ್ರದೀಪ್‌ ಎಂಬಾತ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದಕ್ಕೆ ದಲಿತ ಯುವಕ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಪ್ರದೀಪ್‌ ತನ್ನ ಮೂವರು ಸ್ನೇಹಿತರನ್ನು ಕರೆತಂದು ಆತನನ್ನು ಅಮಾನುಷವಾಗಿ ಥಳಿಸಿ, ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ‌ ದಾಖಲಿಸಿದ್ದಾರೆ.

ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 365, 342, 506, 294 ಮತ್ತು 323 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರದೀಪ್ ಹಾಗೂ ಆತನ ಮೂರು ಗೆಳೆಯರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೇಲ್ಜಾತಿಯವರ ಜೋಳವನ್ನು ತುಳಿದ ಹಸು: ದಲಿತ ತಾಯಿ-ಮಗನ ಮೇಲೆ ಮಾರಣಾಂತಿಕ ಹಲ್ಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights