ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ: ಸ್ಟೇಟ್‌ ಕೌನ್ಸಿಲರ್‌ ಗೃಹ ಬಂಧನ; ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಣೆ!

ಮ್ಯಾನ್ಮಾರ್‌ನ ಆಡಳಿತವನ್ನು ಮಿಲಿಟರಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಮಿಲಿಟರಿ ಜನರಲ್‌ ಒಬ್ಬರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಿದೆ. ಅಲ್ಲದೆ, ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಿಸಿರುವ ಮಿಲಿಟರಿ, ಅಲ್ಲಿನ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮುಖ್ಯಸ್ಥೆ ಸ್ಟೇಟ್ ಕೌನ್ಸಿಲರ್ (ಪ್ರಧಾನಿ ಹುದ್ದೆಗೆ ಸಮನಾದ ಹುದ್ದೆ) ಅಂಗ್ ಸಾನ್ ಸೂಕಿ ಮತ್ತು ದೇಶದ ಅಧ್ಯಕ್ಷ ವಿನ್ ಮ್ಯಾಂಟಿ ಇಬ್ಬರಿಗೂ ಗೃಹ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

ಕಳೆದ ಸಾರ್ವತ್ರಿಕ ಚು9ನಾವಣೆಯಲ್ಲಿ ಅಕ್ರಮ ನಡೆದಿದೆ. ಅದನ್ನು ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ. ಹೀಗಾಗಿ ದೇಶದ ಸ್ಥಿರತೆ ಹದಗೆಡುತ್ತಿದ್ದು, ಸ್ಥಿರತೆಯನ್ನು ಸುಧಾರಿಸಲು ಮಿಲಿಟರಿಯು ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಮಿಲಿಟರಿ ಅಧೀನದಲ್ಲಿರುವ ಮ್ಯಾವಡ್ಡಿ ಚಾನೆಲ್‌ ವರದಿ ಮಾಡಿದೆ.

ಕಳೆದ ವರ್ಷ ಚುನಾವಣೆ ನಡೆದ ನಂತರ ಇಂದು (ಸೋಮವಾರ) ಸಂಸತ್ತಿನ ಮೊಲದ ಅಧಿವೇಶನ ಆರಂಭವಾಗಬೇಕಿತ್ತು. ಆದರೆ, ಅದಕ್ಕೂ ಮೊದಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಇದಕ್ಕೆ, ಇತ್ತೀಚೆಗೆ ಮಿಲಿಟರಿ ಬಗ್ಗೆ ನೀಡಿರುವ ಹೇಳಿಕೆ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮುಸ್ಲಿಮರಿಗೆ ಮುಕ್ತ ಅವಕಾಶ;ಮೊದಲ ದಿನವೇ ಹಲವು ಬದಲಾವಣೆ ತಂದ ಜೋ ಬೈಡನ್‌!

ಸ್ಟೇಟ್ ಕೌನ್ಸಿಲರ್ ಆಂಗ್ ಸ್ಯಾನ್ ಸೂಕಿ, ದೇಶದ ಅಧ್ಯಕ್ಷ ವಿನ್ ಮ್ಯಾಂಟಿ ಇಬ್ಬರನ್ನೂ ಬಂಧಿಸಲಾಗಿದೆ. ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು, ಸ್ಥಳೀಯ ಸಂಪುಟ ಸದಸ್ಯರನ್ನು ಸಹ ವಶಕ್ಕೆ ಪಡೆಯಲಾಗಿದೆ ದಿ ಇರ್ವಾಡ್ಡಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಲ್ಲದೆ, ದೇಶದ ರಾಜಧಾನಿ ನೈಪಿಟಾವ್ ನ ಎಲ್ಲಾ ಸಂವಹನ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಫೋನ್ ಮತ್ತು ಇಂಟರ್ನೆಟ್ ಸಂಪರ್ಕಗಳು ಕಡಿತಗೊಂಡಿದೆ ಎಂದು ವರದಿಯಾಗಿದೆ.

ದೇಶದಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಅಂಗ್‌ ಸಾನ್‌ ಸೂಕಿ ಅವರ ಪಕ್ಷ ಕಳೆದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿತ್ತು. ಮ್ಯಾನ್ಮಾರ್‌ ಸಂಸತ್ತಿನ 642 ಸ್ಥಾನಗಳ ಪೈಕಿ ಆಂಗ್‌ ಸಂಗ್‌ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿತ್ತು.

ಇದನ್ನೂ ಓದಿ: RSS-BJP ಸಂಪರ್ಕ ಹೊಂದಿರುವವರನ್ನು ಆಡಳಿತದಿಂದ ಹೊರಗಿಟ್ಟ ಬೈಡೆನ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights