ಪುಣೆ ಚುನಾವಣೆ: ಇತರ ರಾಜ್ಯಗಳ ಮತದಾರರನ್ನು ಸೆಳೆಯಲು ಬಿಜೆಪಿ ಹೊಸ ತಂತ್ರ!

ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ಗೆ ನಡೆಯಲಿರುವ ಚುನಾವಣೆಗೆ ಒಂದು ವರ್ಷ ಮುಂಚೆಯೇ ಬಿಜೆಪಿ ಸಿದ್ದತೆ ನಡೆಸುತ್ತಿದೆ. ಸ್ಥಳೀಯರಲ್ಲದ ಮತದಾರರ ಮೇಲೆ ಹಿಡಿತವನ್ನು ಬಲಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಒಬಿಸಿಗಳು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ವಿಭಾಗ(ಸಂಘ)ಗಳ ಜೊತೆಗೆ, ನಗರದಲ್ಲಿ ವಾಸಿಸುವ ಬಂಗಾಳಿ ಮತ್ತು ದಕ್ಷಿಣ ಭಾರತೀಯರಂತಹ ಭಾಷಾ ಅಲ್ಪಸಂಖ್ಯಾತರನ್ನು ಪ್ರತಿನಿಧಿಸಲು ವಿಶೇಷ ವಿಭಾಗಗಳನ್ನು ರಚಿಸಲು ಪಕ್ಷ ನಿರ್ಧರಿಸಿದೆ.

“ಎಲ್ಲಾ ವರ್ಗಗಳನ್ನು  ಪ್ರತಿನಿಧಿಸುವ ಸುಮಾರು 40 ವಿವಿಧ ರೀತಿಯ ಘಟಕಗಳನ್ನು ಪಕ್ಷ ಹೊಂದಿದೆ. ಈ ಕ್ರಮದಿಂದಾಗಿ ಸಮಾಜದ ಎಲ್ಲಾ ವರ್ಗಗಳನ್ನು ಒಟ್ಟುಗೂಡಿಸುವ ತತ್ವಸಿದ್ದಾಂತವಾಗಿದೆ ಎಂದು ನಗರ ಬಿಜೆಪಿ ಮುಖ್ಯಸ್ಥ ಜಗದೀಶ್ ಮುಲ್ಲಿಕ್ ಹೇಳಿದ್ದಾರೆ.

ಬಂಗಾಳಿ-ಮಾತನಾಡುವ ಪ್ಯುನಿಟೀಸ್ ಮತ್ತು ದಕ್ಷಿಣ ಭಾರತದ ರಾಜ್ಯಗಳಿಂದ ಬಂದ ಜನರಿಗೆ ಹೊಸ ಘಟಕಗಳು ನಮ್ಮ ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ. ಇವು ಆ ಸಮುದಾಯಗಳ ಸಮಸ್ಯೆಗಳನ್ನು ಪರಿಶೀಲಿಸುತ್ತವೆ” ಎಂದು ಅವರು ಹೇಳಿದರು.

ಸೇವಾ ವಲಯ, ಅದರಲ್ಲೂ ವಿಶೇಷವಾಗಿ ಆತಿಥ್ಯ ಉದ್ಯಮದಲ್ಲಿ ಭಾರಿ ಒಳಹರಿವು ಕಂಡುಬಂದಿದೆ. ಅಂತೆಯೇ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಂಖ್ಯೆಯ ಹೊರಗಿನ ಕೆಲಸಗಾರರನ್ನು ನೇಮಿಸಿಕೊಳ್ಳಲಾಗುತ್ತದೆ. ಸ್ಥೂಲ ಅಂದಾಜಿನ ಪ್ರಕಾರ 4 ಲಕ್ಷಕ್ಕೂ ಹೆಚ್ಚು ಬಂಗಾಳಿಗಳು ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಅಂತಹ ಮತದಾರರನ್ನು ಆಕರ್ಷಿಸಲು ಪಕ್ಷದ ಈ ಪುನರಾವರ್ತನೆಯನ್ನು ಒಂದು ವಿಶಿಷ್ಟ ಕ್ರಮವಾಗಿ ಜಾರಿಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಚುನಾವಣೆಗೆ ಆ ಸಮುದಾಯಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದನ್ನು ಪಕ್ಷ ಪರಿಗಣಿಸುತ್ತದೆಯೇ ಎಂದು ಕೇಳಿದಾಗ, ಮುಲಿಕ್ ತಪ್ಪಿಸಿಕೊಳ್ಳಲು ಯತ್ನಿಸಿದರು. “ಚುನಾವಣೆಗಳು ಬಹಳ ದೂರದಲ್ಲಿವೆ ಮತ್ತು ವಾರ್ಡ್‌ಗಳ ರಚನೆಯನ್ನೂ ನಿರ್ಧರಿಸಬೇಕು. ಮುಂದೆ ನೋಡೋಣ”ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ಗೆ ಭಾರೀ ಪೈಪೋಟಿ ಕೊಟ್ಟ BJP; ಗೆದ್ದು ಬೀಗಿದ ಕಾಂಗ್ರೆಸ್‌!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights