ನೌಕಾಪಡೆಯ ನಾವಿಕನನ್ನು ಅಪಹರಿಸಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಸೇನಾ ನಾವಿಕ ಸಾವು!

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 26 ವರ್ಷದ ನೌಕಾಪಡೆಯ ನಾವಿಕನ್ನು ಅಪಹರಿಸಿ, ದುಷ್ಕರ್ಮಿಗಳು ಅವರಿಗೆ ಬೆಂಕಿ ಹಚ್ಚಿದ್ದಾರೆ. ತೀವ್ರ ಸುಟ್ಟಗಾಯಗಳಾಗಿದ್ದ ನಾವಿಕ ಸೂರಜ್ ಕುಮಾರ್ ದುಬೆ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಿದರೂ, ಅವರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಜಾರ್ಖಂಡ್‌ ಮೂಲದ ದುಬೆ ಅವರನ್ನು ತಮಿಳುನಾಡಿನ ಕೊಯಮತ್ತೂರು ಬಳಿಯ ಐಎನ್‌ಎಸ್ ಅಗ್ರಾನಿ ತರಬೇತಿ ಸಂಸ್ಥೆಗೆ ನೇಮಿಸಲಾಗಿತ್ತು. ಜನವರಿ 30 ರಂದು ರಜೆ ಮುಗಿಸಿ ಸೇವೆಗೆ ಹಿಂದಿರುಗುತ್ತಿದ್ದಾಗ ಚೆನ್ನೈ ವಿಮಾನ ನಿಲ್ದಾಣದ ಬಳಿ ಅವರನ್ನು ಮೂವರು ಅಪಹರಿಸಿದ್ದರು. ಅಪಹರಣಕಾರರು ದುಬೆ ಯಿಂದ 10 ಲಕ್ಷ ರೂ. ಕೇಳಿದ್ದರು ಎಂದು ತಿಳಿದು ಬಂದಿದೆ.

ಮೂರು ದಿನಗಳ ಕಾಲ ಅಪಹರಣಕಾರರು ದುಬೆಯನ್ನು ಚೆನ್ನೈನಲ್ಲಿ ಇಟ್ಟುಕೊಂಡಿದ್ದರು. ನಂತರ, ಅವರನ್ನು ಪಾಲ್ಘರ್‌ಗೆ ಕರೆದೊಯ್ದಿದ್ದಾರೆ. ಶುಕ್ರವಾರ ಬೆಳಿಗ್ಗೆ, ದುಬೆ ಅವರ ಕೈ ಕಾಲುಗಳನ್ನು ಕಟ್ಟಿ ಘೋಲ್ವಾಡ್ ಬಳಿಯ ಕಾಡಿನಲ್ಲಿ ಬೆಂಕಿ ಹಚ್ಚಿದ್ದಾರೆ.

ಸುಟ್ಟಗಾಯಗಳಿಂದ ಬಳಲುತ್ತಿದ್ದ ಡುಬೆ ಅವರನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಸ್ಥಳಿಯ ಅಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ದೇಹವು 90% ಸುಟ್ಟಿದ್ದರಿಂದಾಗಿ ಅವರ ಸ್ಥಿತಿ ಗಂಭೀರವಾಗಿದ್ದರಿಂದ ನಂತರ ಅವರನ್ನು ಮುಂಬೈ ಅಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಅಲ್ಲಿ ಸಾವನ್ನಪ್ಪಿದ್ದಾರೆ.

ದುಬೆ ಅವರ ಸಾವಿಗೂ ಮುನ್ನ ಅಪಹರಣದ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪಾಲ್ಘರ್ ಜಿಲ್ಲಾ ಪೊಲೀಸ್ ವಕ್ತಾರ ಸಚಿನ್ ನವಡ್ಕರ್ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಬೆಂಕಿ ಅವಘಡ: 20ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights