ಗಣರಾಜ್ಯೋತ್ಸವದ ಹಿಂಸಾಚಾರ: ಇನ್ನೊಬ್ಬ ಆರೋಪಿ ಇಕ್ಬಾಲ್ ಸಿಂಗ್ ಬಂಧನ..!

ಗಣರಾಜ್ಯೋತ್ಸವದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಬುಧವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಇಕ್ಬಾಲ್ ಸಿಂಗ್ ಅವರನ್ನು ಮಂಗಳವಾರ ರಾತ್ರಿ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಂಧಿಸಲಾಗಿದೆ.

2021 ರ ಜನವರಿ 26 ರಂದು ನಡೆದ ಕೆಂಪು ಕೋಟೆ ಘಟನೆಯಲ್ಲಿ ಸಿಂಗ್ ಅವರ ಪಾತ್ರದ ಬಗ್ಗೆ ದೆಹಲಿ ಪೊಲೀಸರು ಶೋಧ ನಡೆಸುತ್ತಿದ್ದರು ಮತ್ತು ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ.ಗಳ ನಗದು ಬಹುಮಾನವನ್ನು ಘೋಷಿಸಿದ್ದರು.

ಜನವರಿ 26 ರಂದು ನಡೆದ ಘಟನೆಯಲ್ಲಿ ಇಕ್ಬಾಲ್ ಸಿಂಗ್ ಕೆಂಪು ಕೋಟೆಯಲ್ಲಿ ಜನಸಮೂಹವನ್ನು ಪ್ರವೇಶಿಸುವಂತೆ ಒತ್ತಾಯಿಸಿದ್ದರು. ಕೆಂಪು ಕೋಟೆ ಲಾಹೋರಿ ಗೇಟ್ ಬಳಿ ಜನಸಮೂಹವನ್ನು ಪ್ರಚೋದಿಸಿದ ಆರೋಪ ಅವರ ಮೇಲಿದೆ.

ಪಂಜಾಬ್‌ನ ಲುಧಿಯಾನ ನಿವಾಸಿ ಸಿಂಗ್, ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾತ್ಮಕವಾಗಿ ನಡೆದ ಬಳಿಕ ಪರಾರಿಯಾಗಿದ್ದರು. ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಆತನನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ನಟ ದೀಪ್ ಸಿಧು ಬಂಧಿಸಿದ ಕೆಲವೇ ದಿನಗಳಲ್ಲಿ ಸಿಂಗ್ ನ್ನು ಬಂಧಿಸಲಾಗಿದೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯನ್ನು ಅಪ್ಪಳಿಸಲು ರೈತರ ಗುಂಪನ್ನು ಪ್ರಚೋದಿಸಿದ ಆರೋಪವೂ ಸಿಧು ಅವರ ಮೇಲಿದ್ದು ದೆಹಲಿ ಪೊಲೀಸರು ಸಲ್ಲಿಸಿದ ಎಫ್‌ಐಆರ್‌ನಲ್ಲಿ ಸಿಂಗ್ ಹೆಸರನ್ನು ಉಲ್ಲೇಖಿಸಲಾಗಿದೆ.

ಗಣರಾಜ್ಯೋತ್ಸವದಂದು ರೈತರನ್ನು ಪ್ರಚೋದಿಸಿದ ಆರೋಪದ ನಂತರ, ಸಿಧು ನಾಪತ್ತೆಯಾಗಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಲವಾರು ವೀಡಿಯೊಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬಿಡುಗಡೆ ಮಾಡಿದ್ದನು. ಕ್ಯಾಲಿಫೋರ್ನಿಯಾದ ಅವನ ಸ್ನೇಹಿತನು ಸಿಧು ಇರುವಿಕೆಯ ಬಗ್ಗೆ ಅಧಿಕಾರಿಗಳಿಗೆ ಗೊಂದಲ ಮೂಡಿಸಲು ಅವನ ಕೊನೆಯ ಕೆಲವು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರ್-ಡೇ ಹಿಂಸೆ
ಜನವರಿ 26 ರಂದು ಶಾಂತಿಯುತ ರೈತರ ಟ್ರ್ಯಾಕ್ಟರ್ ರ್ಯಾಲಿ ಹಿಂಸಾತ್ಮಕವಾಗಿ ಪ್ರತಿಭಟನಾನಿರತ ಸಾವಿರಾರು ರೈತರು ಪೊಲೀಸರೊಂದಿಗೆ ಘರ್ಷಣೆ ಉಂಟಾಯಿತು. ಈ ವೇಳೆ ಪ್ರತಿಭಟನಾಕಾರರಲ್ಲಿ ಅನೇಕರು ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ನಡೆದಿರೆ, ಕೆಲವರು ಕೆಂಪು ಕೋಟೆಗೆ ನುಗ್ಗಿತು.

ಕೆಲವು ಪ್ರತಿಭಟನಾಕಾರರು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವಾರು ಜನರನ್ನು ಬಂಧಿಸಿದ್ದಾರೆ. ಹಿಂಸಾತ್ಮಕ್ಕೆ ಕಾರಣವೇನು ಎನ್ನುವ ವಿಚಾರ ಬಯಲಿಗೆಳಿಯುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights