ಹೃದಯಾಘಾತದಿಂದ ಕೇರಳದ ಜನಪ್ರಿಯ ಗಾಯಕ ನಸೀಮ್ ನಿಧನ…!

ಕೇರಳದ ಜನಪ್ರಿಯ ಗಾಯಕ ನಸೀಮ್ ಹೃದಯಾಘಾತದಿಂದ ಬುಧವಾರ ನಿಧನರಾದರು.

ನಸೀಮ್ ಹಲವಾರು ಟಿವಿ ಕಾರ್ಯಕ್ರಮಗಳು, ಸ್ಟೇಜ್ ಶೋಗಳನ್ನು ಆಯೋಜಿಸುವುದು ಮಾತ್ರವಲ್ಲದೇ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಸಕ್ರಿಯ ಪ್ರದರ್ಶನ ನೀಡುತ್ತಿದ್ದರು. ರಂಗಭೂಮಿ, ಚಲನಚಿತ್ರ ಮತ್ತು ಗಜಲ್ ಸಂಗೀತ ಸಂಪ್ರದಾಯಗಳ ಇತಿಹಾಸದ ಕುರಿತಾಗಿ ಅವರು ಆಸಕ್ತಿ ಹೊಂದಿದ್ದರು.

ಕೇರಳ ಪೀಪಲ್ಸ್ ಆರ್ಟ್ ಕ್ಲಬ್ (ಕೆಪಿಎಸಿ), ಶಿವಗಿರಿ ಕಲಾಸಮಿತಿ, ಚಂಗಂಪುಳ ಥಿಯೇಟರ್ಸ್ ಮತ್ತು ಕೋಝಿಕೋಡ್ ಬ್ರದರ್ಸ್ ನಾಟಕಗಳಿಗೆ ಅವರ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. ನಟ ಸತಾರ್ ಅವರ ಚೊಚ್ಚಲ ಚಿತ್ರ ‘ಹರಿಯೆ ಅವಸ್ಯಮುಂಡು’ ಮತ್ತು ‘ಅನಂತ ವೃಂತಂ’ ಚಿತ್ರಗಳಲ್ಲಿ ನಸೀಮ್ ಅವರು ಹಾಡಿದ್ದಾರೆ.

ಅವರ ಸಾಕ್ಷ್ಯಚಿತ್ರ “ಮಿಜಾವು” ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅವರು ಮೊಹಮ್ಮದ್ ರಫಿ ಮತ್ತು ಎಟಿ ಉಮ್ಮರ್ ಅವರ ಜೀವನದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ಸಹ ಮಾಡಿದ್ದಾರೆ.

ನಸೀಮ್ ನಿರ್ದೇಶನದ ಮತ್ತು ದೂರದರ್ಶನದಲ್ಲಿ ಪ್ರಸಾರವಾದ ‘ಆಯಿರಾಮ್ ಗಣಂಗಲ್ ದಾನ ಆನಂದ ಲಹರಿ’ ಮಲಯಾಳಂ ಸಂಗೀತ ಸಂಪ್ರದಾಯದ ದಾಖಲೆಯಾಗಿದೆ.

ಅವರಿಗೆ ಕೇರಳ ಸಂಗೀತ ನಾಟಕ ಅಕಾಡೆಮಿ 1997 ರಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿ ಮತ್ತು ರಾಜ್ಯ ಟಿವಿ ಪ್ರಶಸ್ತಿಗಳನ್ನು ನಾಲ್ಕು ಬಾರಿ ಪಡೆದುಕೊಂಡಿದ್ದಾರೆ. ಅವರು 27 ವರ್ಷಗಳ ಕಾಲ ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಉದ್ಯೋಗಿಯಾಗಿದ್ದರು. 2003 ರಲ್ಲಿ ಅಧೀಕ್ಷಕರಾಗಿ ನಿವೃತ್ತಿಯಾದ ನಂತರ ಅವರು ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights