ಕೆಲಸದಾಕೆಯನ್ನು ಚಿತ್ರಹಿಂಸೆ ನೀಡಿ ಕೊಂದ ಒಡತಿ ಪೊಲೀಸ್ ಅತಿಥಿ!

ಮನೆ ಒಡತಿಯೊಬ್ಬಳು ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದು ಪೊಲೀಸ್ ಅತಿಥಿಯಾದ ಘಟನೆ ಸಿಂಗಾಪುರದಲ್ಲಿ ನಡೆದಿದೆ.

24 ವರ್ಷದ ಮ್ಯಾನ್ಮರೀಸ್ ಮೂಲದ ಸೇವಕಿ ಪಿಯಾಂಗ್ ನ್ಗೈಹ್ ಡಾನ್ ಮೃತಪಟ್ಟವಳು. ಗಾಯತ್ರಿ ಮುರುಗಯನ್ 40 ವರ್ಷದ ಭಾರತೀಯ ಮೂಲದ ಒಡತಿ ಚಿತ್ರ ಹಿಂಸೆ ನೀಡಿ ಪೊಲೀಸರ ಅತಿಥಿಯಾಗಿದ್ದಾಳೆ.

Cop's wife admits starving, torturing maid to death; Myanmar victim was just 24kg in her final days, Courts & Crime News & Top Stories - The Straits Times

2015 ರ ಮೇ ತಿಂಗಳಲ್ಲಿ ಪಿಯಾಂಗ್ ತನ್ನ 3 ವರ್ಷದ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಗಾಯತ್ರಿ ಮನೆಗೆ ಕೆಲಸಕ್ಕೆ ಸೇರಿದ್ದಳು. ಆರಂಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಗಾಯತ್ರಿ ಕಳೆದ 5 ತಿಂಗಳಿನಿಂದ ಕಾಲಲ್ಲಿ ತುಳಿಯುವುದು, ಒಡೆಯುವುದು, ಊಟ ನೀಡದೇ ಚಿತ್ರಹಿಂಸೆ ನೀಡುತ್ತಿದ್ದಳು. ಊಟವಿಲ್ಲದೇ ಪಿಯಾಂಗ್ 25 ಕೆ.ಜಿ ತೂಕವಾಗಿದ್ದಳು. ಆ ಒಂದು ದಿನ ಪಿಯಾಂಗ್ ನನ್ನು ರಾತ್ರಿಯಲ್ಲಿ ಕಿಟಕಿಗೆ ಕಟ್ಟಿಹಾಕಿ ಚಿತ್ರವಿಚಿತ್ರ ಹಿಂಸೆ ನೀಡಿದ್ದಾಳೆ. ಊಟ ನೀರು ಇಲ್ಲದೇ ಹಿಂಸೆ ತಾಳದೆ ಪಿಯಾಂಗ್ ಕೊನೆಯುಸಿರೆಳೆದಿದ್ದಾಳೆ. ಶವಪರೀಕ್ಷೆಯಲ್ಲಿ ಪಿಯಾಂಗ್ ಗೆ ಕುತ್ತಿಗೆಗೆ ಮತ್ತೆ ತಲೆಗೆ ತೀವ್ರವಾದ ಗಾಯಗಳು ಕಂಡುಬಂದಿವೆ.

ಸದ್ಯ ಬಂಧಿತೆ ಗಾಯತ್ರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಈಕೆ ವಿರುದ್ಧ 87 ಆರೋಪಗಳು ಕೇಳಿಬಂದಿದ್ದು 28 ಆರೋಪಗಳನ್ನು ತಪ್ಪೊಪ್ಪಿಕೊಂಡಿದ್ದಾಳೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights