ಪ್ರಧಾನಿ ಹುದ್ದೆಗೆ ರಾಹುಲ್ಗಾಂಧಿ ಬೆಸ್ಟ್; ಕಾಂಗ್ರೆಸ್ಗೆ ಚುನಾವಣಾ ಕಣದಲ್ಲಿರುವ 2 ರಾಜ್ಯಗಳ ಬೆಂಬಲ!
2021ರ ಆರಂಭದಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 27ರಿಂದ ಮತದಾನ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ಬೆನ್ನಲ್ಲೇ ಹಲವಾರು ಸಿ-ವೋಟರ್ ಸಮೀಕ್ಷೆಗಳು ಹೊರಬೀಳುತ್ತಿವೆ. ಈ ಸಮೀಕ್ಷೆಯಲ್ಲಿ ರಾಹುಲ್ಗಾಂಧಿಯವರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತೇವೆ ಎಂದು ಎರಡು ರಾಜ್ಯಗಳ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಎದುರಿಸುತ್ತಿರುವ 05 ರಾಜ್ಯಗಳಲ್ಲಿ ತಮಿಳುನಾಡು ಮತ್ತು ಕೇರಳದ ಜನರು ರಾಹುಲ್ಗಾಂಧಿಯವರು ಪ್ರಧಾನಿ ಆಯ್ಕೆಯಾಗಬೇಕು ಎಂದು ಹೇಳಿದ್ದಾರೆ.
ಈಗ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಈ ಬಗ್ಗೆ ಸಮೀಕ್ಷೆಗಳು ಆರಂಭವಾಗಿವೆ. ಈ ಪೈಕಿ ಐಎಎನ್ಎಸ್ ಸಮೀಕ್ಷೆ ನಡೆಸಿದೆ. ಈ ವೇಳೆ ಮುಂದಿನ ಪ್ರಧಾನಮಂತ್ರಿ ಸ್ಥಾನಕ್ಕೆ ನೇರವಾಗಿ ಆಯ್ಕೆ ಮಾಡುವ ಅವಕಾಶ ನೀಡಿದರೆ ನೀವು ಯಾರನ್ನು ಚುನಾಯಿಸುವುದಕ್ಕೆ ಇಚ್ಚಿಸುತ್ತೀರಿ ಎಂಬ ಪ್ರಶ್ನೆಯನ್ನೂ ಐಎಎನ್ಎಸ್ ಕೇಳಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ತಮಿಳುನಾಡು ಮತ್ತು ಕೇರಳ ಜನರು ರಾಹುಲ್ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಹುಲ್ಗಾಂಧಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವುದಾಗಿ ಕೇರಳದ 57.92% ಜನರು ಹೇಳಿದ್ದಾರೆ. ಅಂತೆಯೇ ತಮಿಳು ನಾಡಿನ 43.46% ಜನರು ರಾಹುಲ್ಗಾಂಧಿಯನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಮೋದಿಯವರಿಗೆ ಕೇರಳದಲ್ಲಿ 36.19% ಮತ್ತು ತಮಿಳುನಾಡಿನಲ್ಲಿ 28.16% ಜನರು ಮತನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಾತ್ರ ಸ್ಪರ್ಧಿಸುವಂತೆ ಮಮತಾಗೆ BJP ಸವಾಲು! ಮಮತಾ ಹೇಳಿದ್ದೇನು?
ಈ ಪೈಕಿ, ಮೋದಿಗಿಂತ ರಾಹುಲ್ಗಾಂಧಿ ಕೇರಳದಲ್ಲಿ 21.73% ಮತ್ತು ತಮಿಳುನಾಡಿನಲ್ಲಿ 15.30% ಹೆಚ್ಚು ಬೆಂಬಲ ಪಡೆದುಕೊಂಡಿದ್ದು, ದಕ್ಷಿಣ ರಾಜ್ಯಗಳ ಮೆಚ್ಚಿನ ನಾಯಕ ಎನಿಸಿಕೊಂಡಿದ್ದಾರೆ.
ಉಳಿದಂತೆ ಇದೀಗ ಚುನಾವಣಗೆ ಸಜ್ಜಾಗುತ್ತಿರುವ ಅಸ್ಸಾಂ, ಬಂಗಾಳ, ಪುದುಚೇರಿಯಲ್ಲಿ ಪ್ರಧಾನಿ ಮೋದಿಯವರನ್ನೇ ಹೆಚ್ಚು ಜನರು ಬೆಂಬಲಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 54.13% ಜನರು ಮೋದಿಯವರನ್ನೂ, 22.93% ಜನರು ರಾಹುಲ್ಗಾಂಧಿ ಅವರನ್ನೂ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಮೋದಿಗೆ 47.80% ಜನರು ಬೆಂಬಲಿಸಿದರೆ, ರಾಹುಲ್ಗಾಂಧಿಗೆ 24.63% ಜನರು ಮತನೀಡುವುದಾಗಿ ತಿಳಿಸಿದ್ದಾರೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 45.54% ಜನರು ಮೋದಿಯನ್ನೂ ಮತ್ತು 12.72% ರಾಹುಲ್ಗಾಂಧಿಯನ್ನೂ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಚುನಾವಣೆ: NDA ತೊರೆದು ಕಾಂಗ್ರೆಸ್ ಜೊತೆ ಸೇರಿದ BPF ಪಕ್ಷ!

