ಏಕಪತ್ನಿ ಅಗ್ನಿ ಪರೀಕ್ಷೆ : ‘ನಾನು ಜೀವನದಲ್ಲಿ ಒಂದು ಬಾರಿ ತಪ್ಪು ಮಾಡಿದ್ದೇನೆ’-ಹೆಚ್ಡಿಕೆ

ಸಚಿವ ಡಾ.ಕೆ ಸುಧಾಕರ್ ಕಾಂಗ್ರೆಸ್ ಗೆ ಹಾಕಿದೆ ಏಕಪತ್ನಿ ಅಗ್ನಿ ಪರೀಕ್ಷೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಜೀವನದಲ್ಲಿ ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ನಾನು ಸದನದಲ್ಲಿ ಹೇಳಿದ್ದೇನೆ. ಆದರೆ ಸುಧಾಕರ್ ನನ್ನ ವಿಚಾರ ಯಾಕೆ ತಂದರು ಗೊತ್ತಿಲ್ಲ. ಇಲ್ಲಿ ಇರೋರ ಎಲ್ಲರ ಮನೆ ದೋಸೆನೂ ತೂತೇ. ಇಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರರು ಅಲ್ಲ’ ಎಂದಿದ್ದಾರೆ.

‘ಭೂಮಿ ಮೇಲಿನ ಜೀವಗಳ ಸಹಜ ವಿಚಾರಗಳಿಗೆ ಬೀದಿಯಲ್ಲಿ ರಾಡಿ ಎರಚಬಾರದು. ಇಲ್ಲಿ ಯಾರೂ ಕೂಡ ಸತ್ಯ ಹರಿಶ್ಚಂದ್ರರಲ್ಲ ‘ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜನರ ಕಡೆ ನಿಮ್ಮ ದೃಷ್ಟಿ ಇರಲಿ. ಅದನ್ನ ಬಿಟ್ಟು ಈ ರೀತಿ ಮಾತನಾಡಿಕೊಂಡು ಬೇಡ. ಅಷ್ಟೊಂದು ಧೈರ್ಯ ಇದ್ದವರು ರಮೇಶ್ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಕೋರ್ಟ್ ಗೆ ಯಾಕೆ ಹೋದರು? ಇದರಿಂದ ರಾಜ್ಯದ ಜನರನ್ನು ಯಾವ ರೀತಿ ಸಂದೇಶ ರವಾನೆಯಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.  ಅನಗತ್ಯವಾಗಿ ಯಾಕೆ ನನ್ನ ಹೆಸರು ತಂದ್ರೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಡಾ. ಕೆ ಸುಧಾಕರ್ ಚಾಲೆಂಜ್ ಏನು..?

ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಪ್ರಶ್ನಿಶಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಸುಧಾಕರ್ ಓಪನ್ ಚಾಲೆಂಜ್ ಹಾಕಿದ್ದು, “ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್ ಕುಮರಾಣ್ಣವರು ಏಕಪತ್ನಿವ್ರತಸ್ಥರಾ? ಸತ್ಯಹರಿಶ್ಚಂದ್ರರಾ?ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಾ? 224 ಶಾಸಕರ ತನಿಖೆ ಆಗಲಿ.  ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆ? ಎಲ್ಲರ ಬಗ್ಗೆ ತನಿಖೆ ಆಗಲಿ. ಎಲ್ಲಾ ಪಕ್ಷದ ಮಾಜಿ ಹಾಗೂ ಹಾಲಿ ಸಚಿವರು ಮತ್ತು ಶಾಸಕರ ತನಿಖೆ ಆಗಲಿ. ಆಗ ಅವರ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರಾ? ಇಟ್ಟುಕೊಂಡಿಲ್ವಾ? ಅನ್ನೋದು ರಾಜ್ಯದ ಜನರಿಗೆ ತಿಳಿಯುತ್ತದೆ’ ಎಂದು ಸವಾಲು ಹಾಕಿದ್ದರು.

ಒಟ್ಟಿನಲ್ಲಿ ಈ ವಿಚಾರಕ್ಕೆ ಸರಥಿ ಸಾಲಿನಲ್ಲಿ ನಿಂತು ಉತ್ತರವನ್ನು ನಾಯಕರು ಕೊಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights