ಹಿರಿಯ ಅಧಿಕಾರಿಗಳ ಕಿರುಕುಳ: ಮಹಾರಾಷ್ಟ್ರ ‘ಲೇಡಿ ಸಿಗಂ’ ದೀಪಾಲಿ ಚವಾಣ್ ಆತ್ಮಹತ್ಯೆ!

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೆಲ್ಘಾಟ್‌ನಲ್ಲಿ ಸಿಪ್ನಾ ವನ್ಯಜೀವಿ ಅರಣ್ಯ ವಿಭಾಗದೊಂದಿಗೆ ಹರಿಸಾಲ್‌ನ ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ) ದೀಪಾಲಿ ಚವಾಣ್ (33) ಗುರುವಾರ ಸಂಜೆ ಹರಿಸಾಲ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೀಪಾಲಿ ಚವಾಣ್ ಅವರಿಗೆ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಯೊಬ್ಬರ ಕೈಯಲ್ಲಿ ಲೈಂಗಿಕ ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಪ್ರಕರಣ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ್ ಅವರನ್ನು ಪೋಲೀಸರು ಬಂಧಿಸಿದ್ದಾರೆ.

ಸತಾರಾ ಮೂಲದ ಚವಾಣ್ ಅವರು ಕಳೆದ ಎರಡು ವರ್ಷಗಳಿಂದ ಹರಿಸಾಲ್‌ನಲ್ಲಿ ಆರ್‌ಎಫ್‌ಒ ಆಗಿ ಕೆಲಸ ಮಾಡುತ್ತಿದ್ದರು. ಅರಣ್ಯ ಮಾಫಿಯಾಗಳ ವಿರುದ್ಧ ಧೈರ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದ ಇವರು ಮಹಾರಾಷ್ಟ್ರ ಲೇಡಿ ಸಿಗಂ ಎಂದೇ ಖ್ಯಾತಿ ಪಡೆದುಕೊಂಡಿದ್ದರು.

“ಹರಿಸಲ್‌ನ ಆರ್‌ಎಫ್‌ಒ ದೀಪಾಲಿ ಚವಾಣ್ ಅವರು ಗುರುವಾರ ಸಂಜೆ ತಮ್ಮ ಸೇವಾ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ನಾವು ಇನ್ನೂ ಹೆಚ್ಚಿನ ವಿವರಗಳನ್ನು ಪಡೆಯಬೇಕಾಗಿಲ್ಲ”ಎಂದು ಅಮರಾವತಿ ಪೊಲೀಸ್ ವರಿಷ್ಠಾಧಿಕಾರಿ ಹರಿ ಬಾಲಾಜಿ ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದ ಮೋದಿ; #lieLikeModi ಟ್ರೆಂಡಿಂಗ್‌

ಮೃತ ಅರಣ್ಯಾಧಿಕಾರಿ ನಾಲ್ಕು ಪುಟಗಳ ಡೆತ್ ನೋಟ್ ಬರೆದಿದ್ದು ಇದರಲ್ಲಿ ಪ್ರಮುಖವಾಗಿ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ವಿನೋದ್ ಶಿವಕುಮಾರ್ ಅವರ ಹೆಸರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ಶಿವಕುಮಾರ್ ಅವರನ್ನು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2020 ರಲ್ಲಿ ವಿವಾಹವಾದ ದೀಪಾಲಿ ಗರ್ಭಿಣಿಯಾಗಿದ್ದರು. ಈ ವೇಳೆ ಫೆಬ್ರವರಿ ಆರಂಭದಲ್ಲಿ ಶಿವಕುಮಾರ್ ದೀಪಾಲಿಯನ್ನು ಅವರೊಂದಿಗೆ 3 ದಿನಗಳ ಅರಣ್ಯ ಗಸ್ತಿಗಾಗಿ ಒತ್ತಾಯಿಸಿದ್ದರು. ಆಕೆಯ ಆರೋಗ್ಯ ಸ್ಥಿತಿಯನ್ನೂ ನಿರ್ಲಕ್ಷಿಸಿ ನೂರಾರು ಕಿ.ಮೀ ನಡಿಗೆ ಅಥವಾ ವಾಹನ ಚಾಲನೆ ಮಾಡುವಂತೆ ಒತ್ತಾಯಿಸಿದ್ದರು. ಇದರಿಂದಾಗಿ, ಕಾಡಿನಿಂದ ಹಿಂದಿರುಗಿದ ನಂತರ ಆಕೆಗೆ ಗರ್ಭಪಾತವಾಗಿತ್ತು. ಅದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

2013 ರಲ್ಲಿ ಮಹಾರಾಷ್ಟ್ರ ಸರ್ಕಾರಿ ಸೇವೆಗೆ ಸೇರ್ಪಡೆಯಾದ ದೀಪಾಲಿ ಕಾಡುಗಳಲ್ಲಿನ ಅಕ್ರಮ ಅತಿಕ್ರಮಣಗಳ ವಿರುದ್ಧ ಕಠಿಣ ಕ್ರಮ ಕೈಗೆತ್ತಿಕೊಂಡಿದ್ದರು, ಇದಕ್ಕಾಗಿ ಅವರು ಸ್ಥಳೀಯ ರಾಜಕಾರಣಿಗಳು ಅಥವಾ ಮಾಫಿಯಾಗಳನ್ನು ಎದುರಿಸಿದ್ದರು. ಅವರು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಅಥವಾಲಾಭಕ್ಕಾಗಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡದೆ ದಕ್ಷತೆಯಿಂದ ದುಡಿಯುತ್ತಿದ್ದರು.

ಇದನ್ನೂ ಓದಿ: ಗುಜರಾತ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸುತ್ತಿರುವಾಗಲೇ ರೈತ ನಾಯಕ ಯುದ್ಧವೀರ್‌ ಸಿಂಗ್‌ ಬಂಧನ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights