ಮಾಸ್ಕ್‌ ಕೊಳ್ಳಲು ಹಣವಿಲ್ಲ; ಹಕ್ಕಿಯ ಗೂಡನ್ನೇ ಮುಖಕ್ಕೆ ಧರಿಸಿ ಸರ್ಕಾರಿ ಕಚೇರಿಗೆ ಬಂದ ವೃದ್ಧ

ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಹಾಕುವುದು ಕಡ್ಡಾಯವಾಗಿದೆ. ಹೀಗಾಗಿ ತೆಲಂಗಾಣದ ಗ್ರಾಮವೊಂದರ ನಿವಾಸಿಯಾಗಿರುವ ಕುರಿಗಾಹಿಯೊಬ್ಬರಿಗೆ ಫೇಸ್​ ಮಾಸ್ಕ್​ ಕೊಳ್ಳಲು ಕೈಯಲ್ಲಿ ಹಣವಿಲ್ಲದೇ ಹಕ್ಕಿಯ ಗೂಡನ್ನು ಹಾಕಿಕೊಂಡು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ತೆಲಂಗಾಣ ಸರ್ಕಾರ ಮಾಸ್ಕ್​ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ 1 ಸಾವಿರ ರೂಪಾಯಿ ದಂಡ ವಿಧಿಸುತ್ತಿದೆ. ಹೀಗಾಗಿ, ಮಾಸ್ಕ್‌ ಖರೀದಿಸಲೂ ಹಣವಿಲ್ಲದ ಮೆಹಬೂಬಾನಗರ ಜಿಲ್ಲೆಯ ಚಿನ್ನಮುನುಗಲ್​ ಚಡ್​ನ ನಿವಾಸಿಯಾಗಿರುವ ಮೇಕಲಾ ಕರ್ಮಯ್ಯಾ ಎಂಬವರು ಹಕ್ಕಿಯ ಗೂಡನ್ನೇ ಮಾಸ್ಕ್‌ ರೀತಿಯಲ್ಲಿ ಹಾಕಿಕೊಂಡು ಬಂದಿದ್ದಾರೆ.

ತಮ್ಮ ಪಿಂಚಣಿ ಹಣವನ್ನ ಸಂಗ್ರಹ ಮಾಡೋಕೆ ಮಂಡಲ್​ ಆಫೀಸಿಗೆ ಭೇಟಿ ನೀಡಿದ್ದ ಅವರಿಗೆ ಸರ್ಕಾರಿ ಕಚೇರಿಗಳಿಗೆ ಮಾಸ್ಕ್ ಇಲ್ಲದೇ ಪ್ರವೇಶವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅವರು ಮಾಸ್ಕ್​ ಬದಲಿಗೆ ಮುಖಕ್ಕೆ ಹಕ್ಕಿಯ ಗೂಡನ್ನ ಹಾಕಿಕೊಂಡು ಬರುವ ಮೂಲಕ ಸುದ್ದಿಯಾಗಿದ್ದಾರೆ.

ವೈದ್ಯಕೀಯ ತಜ್ಞರು ಕೊರೊನಾ ವೈರಸ್​ ವಿರುದ್ಧ ಫೇಸ್​ ಮಾಸ್ಕ್​ಗಳ ಬಳಕೆ ತುಂಬಾನೇ ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಿಶ್ವದ ಬಹುತೇಕ ಎಲ್ಲಾ ಕಡೆ ಫೇಸ್​ ಮಾಸ್ಕ್​ಗಳನ್ನ ಜನರಿಗೆ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಕೊರೊನಾ 2ನೇ ಅಲೆ: ಭಾರತದ ಪ್ರಯಾಣಿಕರಿಗೆ ನಿತ್ಯಾನಂದನ ‘ಕೈಲಾಸ’ ದೇಶಕ್ಕೆ ನೋ ಎಂಟ್ರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights