ಕೆಂಪುಕೋಟೆ ದಾಂದಲೆ: ಬಿಜೆಪಿ ಬೆಂಬಲಿಗ, ನಟ ದೀಪ್‌ ಸಿಧುಗೆ ಮತ್ತೆ ಜಾಮೀನು!

ಜನವರಿ 26ರಂದು ಗಣರಾಜ್ಯೋತ್ಸವದ ದಿನ ರೈತರು ನಡೆಸಿದ ಟ್ರಾಕ್ಟರ್‌ ಪರೇಡ್‌ ವೇಳೆ, ರೈತರ ಗುಂಪೊಂದನ್ನು ಕೆಂಪುಕೋಟೆಗೆ ಕರೆದೊಯ್ದು ದಾಂದಲೆ ನಡೆಸಿದ್ದ ದೀಪ್‌ ಸಿಧುಗೆ ದೆಹಲಿ ನ್ಯಾಯಾಲಯ ಮೊತ್ತೊಮ್ಮೆ ಜಾಮೀನು ನೀಡಿದೆ.

ರೈತರ ಗುಂಪೊಂದನ್ನು ದಾರಿ ತಪ್ಪಿಸಿ ದೆಹಲಿಗೆ ಕರೆದೊಯ್ದು ಕೆಂಪುಕೋಟೆಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ಆರೋಪದಲ್ಲಿ ಈ ಹಿಂದೆ ಫೆಬ್ರವರಿ 09ರಂದುಮ ದೀಪ್‌ ಸಿಧು ಅವರನ್ನು ಬಂಧಿಸಲಾಗಿತ್ತು. ಆತನಿಗೆ ಏಪ್ರಿಲ್‌ 17ರಂದು ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು.

ಆದರೆ, ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಕೆಲವೇ ಗಂಟೆಗಳಲ್ಲಿ ದೆಹಲಿ ಪೊಲೀಸರು ದೀಪ್‌ ಸಿಧು ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದರು.

ಇದೀಗ ಎರಡನೇ ಪ್ರಕರಣದಲ್ಲಿಯೂ ಆತನಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಅಲ್ಲದೆ, ಎರಡನೇ ಬಾರಿ ಆತನ ಬಂಧನವು ದುರುದ್ದೇಶದ್ದು ಎಂದು ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿರುವ ರಿಲೀವರ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಾಹಿಲ್ ಗುಪ್ತಾ ಅವರು, ದೀಪ್ ಸಿಧುಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ಬಂಧನದ ಅಗತ್ಯತೆ ಮತ್ತು ಸಮಯ ಅತ್ಯಂತ ಪ್ರಶ್ನಾರ್ಹವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಜನವರಿ 26ರಂದು ನಡೆದ ಅಹಿತಕರ ಘಟನೆಗೆ ಸಬಂಧಿಸಿದಂತೆ ಸಿಧು ವಿರುದ್ಧ ಎರಡು ಎಫ್‍ಐಆರ್ ದಾಖಲಾಗಿವೆ. ಮೊದಲನೇ ಎಫ್‍ಐಆರ್‌ಗೆ ಸಂಬಂಧಿಸಿದಂತೆ ಆತನಿಗೆ ಸೆಶನ್ಸ್ ಕೋರ್ಟ್‌ ಜಾಮೀನು ನೀಡಿದ ಬೆನ್ನಲ್ಲೇ ದೆಹಲಿ ಅಪರಾಧ ವಿಭಾಗದ ಪೊಲೀಸರು ಆತನನ್ನು ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಬಂಧಿಸಿದ್ದರು.

ಇದನ್ನೂ ಓದಿ: ಕೆಂಪುಕೋಟೆ ಹಿಂಸಾಚಾರ: ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ BJP ಬೆಂಬಲಿಗ, ನಟ ದೀಪ್‌ ಸಿಧು ಮತ್ತೆ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights