ಜನರನ್ನು ಹಳ್ಳಿಗೆ ಕಳಿಸಿ ಕೊರೊನಾ ಹರಡಲು ಕಾರಣವಾಯ್ತಾ ಸರ್ಕಾರ?; ತಜ್ಞರು ಹೇಳುವುದೇನು?

ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದ ಸೆಮಿ ಲಾಕ್‌ಡೌನ್‌ ಜಾರಿಯಾಗಿದೆ. ಹೀಗಾಗಿ ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ  ಆಹಾರ ಸಮಸ್ಯೆ, ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆಯಂತಹ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ ಜನರು, ಈಗಿನ ಲಾಕ್‌ಡೌನ್‌ನಲ್ಲಿಯೂ ಅಂತದ್ದೇ ಸಮಸ್ಯೆಗಳು ಎದುರಾಬಹುದು ಎಂಬ ಭಯದಿಂದ ಬೆಂಗಳೂರು ತೊರೆದು, ತಮ್ಮ ಹಳ್ಳಿಗಳಿಗೆ ತೆರಳಿದ್ದಾರೆ.

ಜನರು ಈ ರೀತಿಯಲ್ಲಿ ಹಳ್ಳಿಗಳಿಗೆ ತೆರಳಿರುವುದು ಹಳ್ಳಿಗಳಲ್ಲಿ ಕೊರೊನಾ ಹರಡಲು ಕಾರಣವಾಗಬಹುದು ಎಂಬ ಚರ್ಚೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕಳೆದ ಬಾರಿ ಹಳ್ಳಿಗಳಲ್ಲೂ ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗಿತ್ತು. ಹಳ್ಳಿಗೆ ಬಂದ ಜನರನ್ನು ಸ್ವಲ್ಪ ಕಾಲ ಕ್ವಾರಂಟೈನ್‌ನಲ್ಲಿರಿಸಿ ನಂತರ ಮನೆಗೆ ಕಳಿಸುತಿದ್ದರು. ಆದರೆ ಈ ಬಾರಿ ಜನ ಸೀದಾ ತಮ್ಮ ಮನೆಗೆ ಹೋಗುತ್ತಿದ್ದಾರೆ. ಇದರಿಂದ ಮನೆ, ಹಳ್ಳಿಯಲ್ಲೂ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಿದೆ.

ಜನರನ್ನು ಹಳ್ಳಿಗಳಿಗೆ ನೇರವಾಗಿ ಹೋಗುವಂತೆ ಮಾಡಿರುವ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಮತ್ತಷ್ಟು ಹರಡುವಿಕೆಗೆ ಕಾರಣವಾಗಿದೆಯೇ. ಜನರನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊಂಡು ಅವರಿಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸದೇ, ಹಳ್ಳಿಗಳಿಗೆ ಕಳಿಸಿ ಎಡವಿತೇ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ.

ಜನರು ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗುತ್ತಿದ್ದಾರೆ. ಈ ವೇಳೆ ಥರ್ಮಲ್ ಸ್ಕ್ಯಾನಿಂಗ್ ಇಟ್ಟು ಯಾರಿಗಾದರು ಟೆಂಪ್ರೇಚರ್ ಜಾಸ್ತಿಯಿದ್ದರೆ ಅಂತವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಕೆಲಸ ಮಾಡಬೇಕಿತ್ತು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ ಊರಿನ ಗಡಿಗಳಲ್ಲಿ ರ್ಯಾಪಿಡ್ ಟೆಸ್ಟ್​ ಮಾಡಬೇಕಾಗುತ್ತದೆ. ಆಗ ಪ್ರಾರಂಭದಲ್ಲೇ ಕೊರೊನಾ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದುಜ ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್ ತಿಳಿಸಿದ್ದಾರೆ.

ಜನರ ಬಗ್ಗೆ ಆರೋಪ ಹೊರಿಸುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ವಿಫಲವಾಗಿದೆ. ಸೂಕ್ತ ಕ್ರಮ ಕೈಗೊಳ್ಳದೆ ಸರ್ಕಾರವೇ ಕೊರೊನಾ ಹರಡಿಸುವ ಕೆಲಸವನ್ನು ಮಾಡುತ್ತಿದೆ. ಕೇರಳ ಗಡಿಯಲ್ಲಿ ಆರ್​ಟಿಪಿಸಿಆರ್​ ಪರೀಕ್ಷೆ ಕಡ್ಡಾಯ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಜನರಿಗೆ ಯಾವ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ. ರಾಜ್ಯ ಸರ್ಕಾರ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಬೆಂಗಳೂರಿನಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.

ಇದನ್ನೂ ಓದಿ: ತಟ್ಟೆ-ಗಂಜಲದ ಸಾಲಿಗೆ ನಿಂಬೆಹಣ್ಣು ಸೇರ್ಪಡೆ; ಕೊರೊನಾ ಓಡಿಸಲು ಮೂಗಿಗೆ ನಿಂಬೆರಸ ಹಾಕೊಳಿ ಎಂದ ಸಂಕೇಶ್ವರ ಮತ್ತು BJP ಸಂಸದ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights