ಜುಲೈ ವೇಳೆಗೆ ಇಳಿಕೆಯಾಗಲಿದೆ ಕೊರೊನಾ 2ನೇ ಅಲೆ; ಫೆಬ್ರವರಿಯಂತೆ ಯಥಾಸ್ಥಿತಿಯತ್ತ ದೇಶ!

ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರೀ ಭೀಕರತೆಯನ್ನು ಉಂಟುಮಾಡಿದೆ. ಸಾವಿರಾರು ಜನರು ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ 2ನೇ ಅಲೆ ಜುಲೈ ವೇಳೆಗೆ ಕಡಿಮೆಯಾಗಲಿದ್ದು, ಕೊರೊನಾ ಪ್ರಕರಣಗಳು 3 ತಿಂಗಳ ಹಿಂದೆ ಇದ್ದ ಸ್ಥಿತಿಗೆ ಇಳಿಯಲಿವೆ ಎಂದು ಐಐಟಿ ವಿಜ್ಞಾನಿಗಳು ತಿಳಿಸಿದ್ದಾರೆ.

ಜುಲೈ 03ರ ವೇಳೆಗೆ ದೇಶದಲ್ಲಿ ಪ್ರತಿದಿನದ ಕೊರೊನಾ ಪ್ರಕರಣಗಳ ಪ್ರಮಾಣವು 12,000ಕ್ಕೆ ಇಳಿಯಲಿವೆ. ಈ ಮೂಲಕ ಫೆಬ್ರವರಿ ಅಂತ್ಯದಲ್ಲಿ 12,780 ಪತ್ತೆಯಾಗಿದ್ದವು. ಜುಲೈ ತಿಂಗಳ ವೇಳೆಗೆ ಅದೇ ಪ್ರಮಾಣಕ್ಕೆ ಕೊರೊನಾ ಸೋಂಕು ಇಳಿಕೆಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭಾನುವಾರ ದೇಶದಲ್ಲಿ 2,40,842 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೇ.13 ರ ವೇಳೆಗೆ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37.2 ಲಕ್ಷಕ್ಕೆ ತಲುಪಿತ್ತು.

ಐಐಟಿ ಕಾನ್ಪುರದ ಪ್ರೊಫೆಸರ್ ಮಣೀಂದ್ರ ಅಗರ್ವಾಲ್, ಸಮಗ್ರ ರಕ್ಷಣಾ ಸಿಬ್ಬಂದಿ (ವೈದ್ಯಕೀಯ) ವಿಭಾಗದ ಉಪ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಹಾಗೂ ಐಐಟಿ ಹೈದ್ರಾಬಾದ್‌ನ ಪ್ರೊ. ಮತುಕುಮಲ್ಲಿ ವಿದ್ಯಾಸಾಗರ್ ಅವರು SUTRA (ಸಸ್ಪೆಕ್ಟೆಬಲ್, ಅನ್ ಡಿಟೆಕ್ಟೆಡ್, ಟೆಸ್ಟೆಡ್ ಪಾಸಿಟಿವ್ ಹಾಗೂ ರಿಮೂವ್ಡ್ ಅಪ್ರೋಚ್) ಮಾದರಿಯನ್ನು ರಚಿಸಿದ್ದಾರೆ. ಈ ಮಾದರಿಯು ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದ ರಾಜ್ಯಗಳಲ್ಲಿ ಇತ್ತೀಚೆಗೆ ಕೋವಿಡ್-19 ಸೋಂಕು ಸ್ಥಿರವಾಗುತ್ತಿದೆ. ಹೀಗೆ ಮುಂದುವರೆದರೆ ದೇಶದ ಕೊರೊನಾ ಪ್ರಕರಣಗಳು ಇಳಿಕೆಯಾಗಲಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಜರಾತ್ ಕೋಮು ಸಂಘರ್ಷ: 2 ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights