ಡಾಕ್ಟರ್ ದಂಪತಿ ಕಾರ್ ಗೆ ಅಡ್ಡಗಟ್ಟಿ ಗುಂಡಿನ ದಾಳಿ : ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಕಾರಿನಲ್ಲಿ ತೆರಳುತ್ತಿದ್ದ ಡಾಕ್ಟರ್ ದಂಪತಿಗೆ ಬೈಕ್ ಸವಾರರಿಬ್ಬರು ಅಡ್ಡಗಟ್ಟಿ ಗುಂಡಿನ ದಾಳಿ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜಸ್ಥಾನದ ಭಾರತ್‌ಪುರದ ವೈದ್ಯ ದಂಪತಿಯನ್ನು ನಗರದ ಮುಖ್ಯ ರಸ್ತೆಯಲ್ಲಿ ಜನಸಂದಣಿ ಲೆಕ್ಕಿಸದೇ ಬೈಕ್‌ನಲ್ಲಿದ್ದ ಇಬ್ಬರು ಅಡ್ಡಗಟ್ಟಿ ಗುಂಡಿಕ್ಕಿ ಕೊಂದಿದ್ದಾರೆ. ನಿನ್ನೆ ಸಂಜೆ 4.45 ಕ್ಕೆ ಘಟನೆ ನಡೆದಿದೆ.

ಕಾರು ಮುಂದೆ ಬೈಕ್ ನಿಲ್ಲಿಸಿದ ಇಬ್ಬರು ಕಾರಿನ ಬಳಿ ತೆರಳಿದ್ದಾರೆ. ವೈದ್ಯ ಕಾರ್ ಗ್ಲಾಸ್ ಇಳಿಸುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ನಂತರ ಇಬ್ಬರು ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಸೇಡು ತೀರಿಸಿಕೊಳ್ಳುವುದು ಅಪರಾಧದ ಹಿಂದಿನ ಉದ್ದೇಶವಾಗಿದೆ ಎಂದಿದ್ದಾರೆ.

ವೈದ್ಯ ದಂಪತಿ ಯುವತಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ವೈದ್ಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ದಂಪತಿಯ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಮಹಿಳೆಯ ಸಹೋದರ ಎಂದು ಗುರುತಿಸಲಾಗಿದೆ.

ಮಹಿಳೆಯನ್ನು ಎರಡು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವೈದ್ಯರ ಪತ್ನಿ ಮತ್ತು ತಾಯಿ ಆರೋಪಿಗಳಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights