ಎಮ್.ಎಸ್ ಧೋನಿಯ ವಿಡಿಯೋಕ್ಕೆ ಪ್ರತಿಕ್ರಿಯಿಸಿದ ಬಿಪಾಷ ಬಸು…!
ಕೊರೊನಾ ವೈರಸ್ ನಡುವೆ ಐಪಿಎಲ್ ಪಂದ್ಯಗಳು ಮುಂದೂಡಲಾಗಿದ್ದು ಎಲ್ಲಾ ಆಟಗಾರರು ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಇವರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು.
ಧೋನಿ ರಾಂಚಿಯಲ್ಲಿ ಪತ್ನಿ ಸಾಕ್ಷಿ ಹಾಗೂ ಮಗಳು ಜಿವಾ ಜೊತೆ ಕಾಲ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಇವರು ತಮ್ಮ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಪತ್ನಿ ಸಾಕ್ಷಿ ಧೋನಿಯ ಒಂದು ವಿಡಿಯೋ ಹಂಚಿಕೊಂಡಿದ್ದು ಇದಕ್ಕೆ ಸಾಕಷ್ಟು ಕಾಮೆಂಟ್ ಗಳು ಬರತೊಡಗಿವೆ.
ಅಷ್ಟಕ್ಕೂ ಧೋನಿಗೆ ಸಾಕು ಪ್ರಾಣಿಗಳೆಂದರೆ ತುಂಬಾನೇ ಇಷ್ಟ. ನಾಲ್ಕೈದು ನಾಯಿಗಳನ್ನು ಸಾಕಿದ್ದಾರೆ. ಇವುಗಳೊಂದಿಗೆ ಆಟ ಆಡುವು ವಿಡಿಯೋಗಳನ್ನು ಪತ್ನಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಧೋನಿ ಕುದುರೆ ಮೈ ಮಸಾಜ್ ಮಾಡ್ತಿರುವುದಿದೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು ಅಭಿಮಾನಿಗಳು ಜೊತೆಗೆ ಸೆಲೆಬ್ರಿಟಿಗಳು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಬಿಪಾಷಾ ಬಸು ಕೂಡ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಅರೆರೆರೆರೆ.. ಎಂದು ಬಿಪಾಷಾ ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋಕ್ಕೆ 4 ಲಕ್ಷಕ್ಕೂ ಹೆಚ್ಚು ಲೈಕ್ ಬಂದಿದೆ. 3500 ಕ್ಕೂ ಹೆಚ್ಚು ಕಮೆಂಟ್ ಬಂದಿದೆ.

