ಸರ್ಕಾರದ ಅಂಕಿಅಂಶಕ್ಕಿಂತ 20 ಪಟ್ಟು ಹೆಚ್ಚು ಜನರಿಗೆ ಕೊರೊನಾ; 04 ಪಟ್ಟು ಹೆಚ್ಚು ಸಾವು: ಅಧ್ಯಯನ ವರದಿ

ದೇಶದಲ್ಲಿ ಮೇ 15ರ ವೇಳೆಗೆ ಅಧಿಕೃತವಾಗಿ ವರದಿಯಾಗಿರುವ ಅಥವಾ ಸರ್ಕಾರ ನೀಡಿರುವ ಅಂಕಿಅಂಶಗಳಿಗಿಂತಲೂ 20 ಪಟ್ಟು ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಲ್ಲದೆ, ಈಗ ಹೇಳಲಾಗುತ್ತಿರುವ ಸಾವಿನ ಸಂಖ್ಯೆಗಿಂತ ನಾಲ್ಕುವರೆ ಪಟ್ಟು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದೂ ವಿಜ್ಞಾನಿಗಳು ಮಾಹಿತಿ ಮಾಡಿದ್ದಾರೆ.

ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಮಾರ್ಚ್‌ 15ರ ವರೆಗೆ 2.47 ಕೋಟಿ ಮಂದಿ ಸೋಂಕು ತಲುಲಿದೆ ಎಂದು ಹೇಳಲಾಗಿದೆ. ಆದರೆ 49.2 ಕೋಟಿ ಮಂದಿಗೆ ಸೋಂಕು ತಗುಲಿರುವುದಾಗಿ ಅಂದಾಜಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಸಂಖ್ಯೆಯನ್ನು ಗಮನಿಸಿದರೆ, ಕಳೆದ ವರ್ಷ ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೆ ದೇಶದ ಒಟ್ಟು ಜನಸಂಖ್ಯೆಯ ಶೇ. 36ರಷ್ಟು ಮಂದಿಗೆ ಸೋಂಕು ತಗುಲಿದೆ ಎಂದಾಗಿದೆ.

ಅಲ್ಲದೆ, ಇದೂವರೆಗೂ 2,69,700 ಕೋವಿಡ್‌ ಸಾವು ಸಂಭವಿಸಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ. ಆದರೆ ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ, 12.1 ಲಕ್ಷ ಸಾವು ಸಂಭವಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಿಷಿಗನ್ ವಿಶ್ವವಿದ್ಯಾಲಯ, ಕೋಲ್ಕತ್ತದಲ್ಲಿರುವ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ, ‘ಜಾನ್ಸ್‌ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್‌ ಪಬ್ಲಿಕ್ ಹೆಲ್ತ್’ ತಜ್ಞರು ಜತೆಗೂಡಿ ಅತ್ಯಾಧುನಿಕ ಸಾಂಕ್ರಾಮಿಕ ರೋಗ ಮಾದರಿ ಬಳಸಿಕೊಂಡು ಅಧ್ಯಯನ ನಡೆಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ: ಅಂಗಡಿ ಮುಚ್ಚಿಸಲು ಹೋದ ಖಾಕಿಯಿಂದ ಲಾಠಿ ಪ್ರಹಾರ : ಪೊಲೀಸ್ ಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights