ಬಿಎಂಟಿಸಿ ಪ್ರಯಾಣಿಕರಿಗೆ ಬಿಗ್ ಶಾಕ್ : ಟಿಕೆಟ್ ದರ ಏರಿಕೆಗೆ ಬಿಎಂಟಿಸಿ ನಿರ್ಧಾರ..!

ರಾಜ್ಯದಲ್ಲಿ ಸೋಮವಾರದಿಂದ ಕೊರೊನಾ ನಿಯಂತ್ರಿಸಲು ಜಾರಿಯಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಸಾರಿಗೆ ಬಸ್ ಗಳು ರಸ್ತೆಗಿಳಿದಿವೆ. ಆದರೆ ಕೋಟ್ಯಾಂತರ ರೂಪಾಯಿ ನಷ್ಟದ ನೆಪದಲ್ಲಿ ಬಿಎಂಟಿಸಿ ಟಿಕೇಟ್ ದರ ಏರಿಕೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಿದೆ. ಇದರಿಂದ ಪ್ರಯಾಣಿಕರಿಗೆ ಕೆಲದಿನಗಳಲ್ಲಿ ಬಿಎಂಟಿಸಿ ಬಿಗ್ ಶಾಕ್ ಕೊಡುವ ಸಾಧ್ಯತೆ ಇದೆ.

ಹೌದು…. ಈಗಾಗಲೇ ಕೊರೊನಾದಿಂದಾಗಿ ಆರ್ಥಿಕ ನಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದರ ಜೊತೆಗೆ ಪ್ರಯಾಣ ದರ ಕೂಡ ಹೆಚ್ಚಿಸಲು ಬಿಎಂಟಿಸಿ ಮುಂದಾಗಿದ್ದು, ಒಂದು ವೇಳೆ ಸರ್ಕಾರ ಇದಕ್ಕೆ ಅಸ್ತು ಎಂದರೆ ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆ ಇದೆ.

ಇದೀಗ ಡಿಸೇಲ್ ದರ ಏರಿಕೆಯಾದ ಕಾರಣದಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ವಾರದಲ್ಲಿ ಮತ್ತೊಮ್ಮೆ ಶೇ ,20 ರಷ್ಟು ಬಸ್ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕಿ, ನಿರ್ದೇಶಕಿ ಸಿ ಶಿಖಾ ಹೇಳಿದ್ದಾರೆ.

ಸದ್ಯ ಬಸ್ ಟಿಕೆಟ್ ದರ ಹೈಕ್ ಮಾಡಬೇಕಾದ ಅವಶ್ಯಕತೆ ಬಿಎಂಟಿಸಿಗೆ ಬಹಳ ಇದೆ. ಕಳೆದ 8 ವರ್ಷಗಳಿಂದ ನಿಗಮದ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿಲ್ಲ.‌ ಹಾಗಾಗಿ ಮತ್ತೆ ಪ್ರಸ್ತಾವನೆ ಇಡುತ್ತಿದ್ದು ಬಿಎಂಟಿಸಿ ನಿಗಮದ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರೆಂಟಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights