ಮೈಸೂರು – ದಾಂಡೇಲಿ ಉಪಚುನಾವಣೆ; ಕಾಂಗ್ರೆಸ್ಗೆ ಜಯ; ಬಿಜೆಪಿ-ಜೆಡಿಎಸ್ಗೆ ಮುಖಭಂಗ!
ಸೋಮವಾರ ಕಲಬುರ್ಗಿ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣಾ ಮತ ಎಣಿಕೆ ನಡೆಯುತ್ತಿದೆ. ಇದೇ ಸಮಯದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ದಾಂಡೇಲಿ ನಗರಸಭೆಗಳ ತಲಾ ಒಂದು ವಾರ್ಡ್ಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎರಡರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮುಖಭಂಗ ಅನುಭವಿಸಿವೆ.
ಮೈಸೂರು ಪಾಲಿಕೆಯ 36ನೇ ವಾರ್ಡ್ (ಯರಗನಹಳ್ಳಿ)ನ ಜೆಡಿಎಸ್ ಕಾರ್ಪೋರೇಟರ್ ರುಣ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿದ್ದ ಕಾರಣದಿಂದಾಗಿ ಉಪಚುಆವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ 4,113 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ನ ಲೀಲಾವತಿ 2,116, ಬಿಜೆಪಿಯ ಶೋಭಾ ಪಿ.ರಮೇಶ್ 601 ಮತಗಳನ್ನು ಪಡೆದಿದ್ದಾರೆ.
ಇನ್ನು ದಾಂಡೇಲಿ ನಗರಸಭೆಯ ವಾರ್ಡ್ ನಂಬರ್ 11ರ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿದೆ.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಆದಂ ದೇಸೂರ ಅವರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾದೇವ ಜಮಾದಾರ ಅವರು 561 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ಗೋಪಾಲ ಸಿಂಗ್ 370 ಮತಗಳನ್ನು ಪಡೆದು ಸೋಲುಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಪಾಲಿಕೆ ಚುನಾವಣೆ: ಕಾಂಗ್ರೆಸ್ ಮುನ್ನಡೆ; ಖಾತೆ ತೆರೆದ ಓವೈಸಿ ಪಕ್ಷ!

