1,000 ಕೆಜಿ ತೂಕದ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ ಲೇಹ್ನಲ್ಲಿ ಅನಾವರಣ!
ಇಂದು (ಅ.2) ಮಹಾತ್ಮ ಗಾಂಧಿಯವರ 152ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಲಡಾಖ್ನ ಲೇಹ್ನಲ್ಲಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಗಿದೆ. ಇದನ್ನು ಇಂದು ಬೆಳಿಗ್ಗೆ ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್ ಕೆ ಮಾಥೂರ್ ಉದ್ಘಾಟಿಸಿದ್ದಾರೆ.
225 ಅಡಿ ಉದ್ದ ಮತ್ತು 150 ಅಡಿ ಅಗಲದ ತ್ರಿವರ್ಣ ಧ್ವಜವು ಸುಮಾರು 1,000 ಕೆಜಿ ತೂಕವಿದೆ. ಇದನ್ನು ಭಾರತೀಯ ಸೇನೆಯ 57 ಎಂಜಿನಿಯರ್ ರೆಜಿಮೆಂಟ್ ಸಿದ್ಧಪಡಿಸಿದೆ ಎಂದು ರಾಷ್ಟ್ರೀಯ ದೂರದರ್ಶನ ಹೇಳಿದೆ.
“ಗಾಂಧೀಜಿಯವರ ಜಯಂತಿಯಂದು, ವಿಶ್ವದ ಅತಿದೊಡ್ಡ ಖಾದಿ ತಿರಂಗವನ್ನು ಲಡಾಖ್ನ ಲೇಹ್ನಲ್ಲಿ ಅನಾವರಣಗೊಳಿಸಲಾಗಿದೆ. ಇದು ಭಾರತದ ಧ್ವಜಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಬಾಪು ಅವರ ಸ್ಮರಣೆಯನ್ನು ನೆನಪಿಸುತ್ತದೆ. ಭಾರತೀಯ ಕುಶಲಕರ್ಮಿಗಳನ್ನು ಉತ್ತೇಜಿಸುತ್ತದೆ ಮತ್ತು ರಾಷ್ಟ್ರವನ್ನು ಗೌರವಿಸುತ್ತದೆ. ಇದನ್ನು ನಾವು ಅಭಿನಂದಿಸುತ್ತೇನೆ. ಜೈ ಹಿಂದ್, ಜೈ ಭಾರತ್!” ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ಧ್ವಜವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿದೆ. ಇದನ್ನು ಲೇಹ್ನಲ್ಲಿ ಸೇನೆಯು ಅನಾವರಣಗೊಳಿಸಿದೆ.
ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಈವೆಂಟ್ನ ವೀಡಿಯೋದಲ್ಲಿ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಲೇಹ್ನಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ ಹಾರುತ್ತಿರುವುದನ್ನು ಕಾಣಬಹುದು.
https://twitter.com/mansukhmandviya/status/1444161585652531203?s=20
ಹಲವಾರು ನಾಯಕರು ಮತ್ತು ಮಂತ್ರಿಗಳು ಲೇಹ್ನಲ್ಲಿ ಅತಿದೊಡ್ಡ ಖಾದಿ ತಿರಂಗವನ್ನು ಅನಾವರಣಗೊಳಿಸುವುದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬಿಜೆಪಿ ನಾಯಕ ಮತ್ತು ಸಚಿವ ಹರ್ಷ ಸಂಘವಿ ಕೂಡ “ಲೇಹ್ ಪಟ್ಟಣದಲ್ಲಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್ನಲ್ಲಿ ಧ್ವಜದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ ಕುಸಿಯುತ್ತಿದೆ ಬಿಜೆಪಿ; ಇದು ಕಾಂಗ್ರೆಸ್ಗೆ ಜನರನ್ನು ಸಜ್ಜುಗೊಳಿಸುವ ಸಮಯ: ಜಿಗ್ನೇಶ್ ಮೇವಾನಿ

