YSR ಕಾಂಗ್ರೆಸ್‌ v/s ಯಾರು? ಕುತೂಹಲಕಾರಿ ತಿರುವು ಪಡೆಯುತ್ತಿದೆ ಬದ್ವೇಲ್ ಉಪಚುನಾವಣೆ!

ಆಂಧ್ರ ಪ್ರದೇಶದ ಬದ್ವೇಲ್ ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಚುನಾವಣೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಾ.ದಾಸರಿ ಸುಧಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಟಿ ಹರಿಪ್ರಸಾದ್ ಎಂಬುವವರು ಡಮ್ಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಜನಸೇನಾ ಮತ್ತು ಟಿಡಿಪಿ ಪಕ್ಷಗಳು ಸ್ಪರ್ಧೆಯಿಂದ ಹಿಂದೆ ಸರಿದಿವೆ. ಮತ್ತೊಂದೆಡೆ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ (ಅಕ್ಟೋಬರ್ 8) ಸಮೀಪಿಸುತ್ತಿರುವಾಗಲೂ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ. ಹೀಗಾಗಿ ಉಪಚುನಾವಣೆ ಕುತೂಹಲಕಾರಿ ತಿರುವು ಪಡೆಯುತ್ತಿದೆ. ಚುನಾವಣೆಯು ಈಗ ಏಕಪಕ್ಷೀಯವಾಗಿ ಕಾಣುತ್ತಿದೆ. ಆದರೂ, ಯಾವುದೇ ಅಡ್ವಾಂಟೇಜ್‌ ತೆಗೆದುಕೊಳ್ಳದ ವೈಎಸ್‌ಆರ್‌ಸಿ ತನ್ನ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದೆ.

ಗಂಭೀರ ಸ್ಪರ್ಧೆ ಇರುವುದಿಲ್ಲ ಎಂಬ ವಾಸ್ತವ ಈಗಾಗಲೇ ಕಣ್ಣೆದು ಕಾಣುತ್ತಿದೆ. ಅದರ ಹೊರತಾಗಿಯೂ, ವೈಎಸ್‌ಆರ್‌ಸಿ ನಾಯಕತ್ವವು ತನ್ನ ಎಲ್ಲ ಪ್ರಯತ್ನಗಳನ್ನು ಮಾಡಲು ತೀರ್ಮಾನಿಸಿದೆ. ಗೆಲುವಿನ ಅಂತರ ಮತ್ತು ಶೇಕಡಾವಾರು ಮತ ಹಂಚಿಕೆಯನ್ನು ಹೆಚ್ಚಿಸುವುದು ಪಕ್ಷದ ಇದರ ಉದ್ದೇಶವಾಗಿದೆ.

ಬದ್ವೇಲ್ ಉಪಚುನಾವಣೆಯಲ್ಲಿ ವೈಎಸ್‌ಆರ್‌ಸಿ ಪಕ್ಷದ ಉಸ್ತುವಾರಿ ಪಂಚಾಯತ್ ರಾಜ್ ಸಚಿವ ಪೆಡ್ಡಿರೆಡ್ಡಿ ರಾಮಚಂದ್ರ ರೆಡ್ಡಿ ಮತ್ತು ಇತರ ನಾಯಕರು ಒಂದು ಲಕ್ಷ ಬಹುಮತ ಪಡೆಯಲು ಶ್ರಮಿಸುವುದಾಗಿ ಹೇಳಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಯೊಬ್ಬ ಮತದಾರರನ್ನು ಕನಿಷ್ಠ ನಾಲ್ಕು ಬಾರಿ ಭೇಟಿ ಮಾಡಿ ಮತ್ತು ಕರಪತ್ರಗಳನ್ನು ವಿತರಿಸುವುದರ ಜೊತೆಗೆ ವೈಎಸ್‌ಆರ್‌ಸಿ ಸರ್ಕಾರವು ಪರಿಚಯಿಸಿದ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಅವರು ಸೂಚಿಸಿದ್ದಾರೆ.

ರಾಜ್ಯದಲ್ಲಿ ಕುಟುಂಬ ರಾಜಕಾರಣವನ್ನು ವಿರೋಧಿಸಬೇಕು. ಅದಕ್ಕಾಗಿ ಬದ್ವೇಲ್ ಉಪಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸೋಮು ವೀರರಾಜು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಅಶ್ಲೀಲ ವಿಡಿಯೋ ವೈರಲ್; ಡಿಎಸ್‌ಪಿ, ಮಹಿಳಾ ಕಾನ್ಸ್‌ಟೇಬಲ್‌ ಸೇವೆಯಿಂದ ವಜಾ; ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights