ತನ್ನ ಮರಿಯನ್ನು ರಕ್ಷಿಸಲು ಮೊಸಳೆಯನ್ನು ಕೊಂದ ಆನೆ
ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ತನ್ನ ಮರಿಗಳೆಂದರೆ ಅಷ್ಟೇ ಕಾಳಜಿ ಇರುತ್ತದೆ. ತನ್ನ ಮರಿಗಳಿಗೆ ತೊಂದರೆ ಕೊಡಲು ಯಾರಾದರೂ ಬಂದರೆ ಕೊನೆ ಉಸಿರು ಇರುವವರೆಗೂ ಹೋರಾಡುತ್ತವೆ. ಅಂತದ್ದೇ ಪರಿಸ್ಥಿತಿಯಲ್ಲಿ ಆನೆಯೊಂದು ತನ್ನ ಮರಿಯನ್ನು ರಕ್ಷಿಸುವುದಕ್ಕಾಗಿ ಮೊಸಳೆಯನ್ನು ಕೊಂದಿರುವ ಘಟನೆ ಜಾಂಬಿಯಾದಲ್ಲಿ ನಡೆದಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ತಾಯಿ ಆನೆಯೊಂದು ತನ್ನ ಮರಿಯನ್ನು ರಕ್ಷಿಸಲು ಮೊಸಳೆಯನ್ನು ಕೊಂದಿದೆ. ಹೆಣ್ಣು ಆನೆ ಕರುವನ್ನು ರಕ್ಷಿಸಲು ಮೊಸಳೆಯನ್ನು ಕೊಂದ ದೃಶ್ಯಗಳಿರುವ ವಿಡಿಯೋವನ್ನು ಹನ್ಸ್ ಹೆನ್ರಿಕ್ ಹಾಹರ್ ಎಂಬುವವರು ಸಫಾರಿಗೆ ಹೋಗಿದ್ದಾಗ ಸೆರೆಹಿಡಿದಿದ್ದಾರೆ.
ಇನ್ನು ಆನೆ ತನ್ನ ಸೊಂಡಿಲು ಮತ್ತು ತಲೆಯಿಂದ ಮೊಸಳೆಯನ್ನು ಕೊಲ್ಲಲು ಮುಂದಾಗಿದೆ. ಮಾತ್ರವಲ್ಲದೇ ಕಾಲಿನಿಂದ ತುಳಿದಿದೆ. ಹೆಣ್ಣು ಆನೆಗೆ ದಂತ ಇಲ್ಲದ ಕಾರಣ ಮೊಸಳೆಯನ್ನು ಕೊಲ್ಲಲು ಬಾಯಿಯನ್ನು ಬಳಸಿದೆ. ಆನೆ ನಿರಂತರವಾಗಿ ಮೊಸಳೆಯನ್ನು ತುಳಿದು ಕೊಂದಿದೆ. ಈ ಎಲ್ಲಾ ದೃಶ್ಯಗಳನ್ನು ಸಫಾರಿಗೆ ಹೋದ ಹನ್ಸ್ ಹೆನ್ರಿಕ್ ಹಾಹರ್ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆ ಪ್ರಕರಣ: ಒಂದೂವರ್ಷದ ಬಳಿಕ ಪೊಲೀಸರಿಗೆ ಶರಣಾದ ಆರೋಪಿ!