Fact check: ರಾಖೀ ಸಾವಂತ್ ಹಿಜಾಬ್ ಧರಿಸಿ ‘ಕರ್ನಾಟಕದ ವಿದ್ಯಾರ್ಥಿನಿಯರಿಗೆ’ ಬೆಂಬಲ ಸೂಚಿಸಿದ್ದರೆ?
ಬಾಲಿವುಡ್ ನಟಿ ರಾಖೀ ಸಾವಂತ್ ಹಿಜಾಬ್ ಧರಿಸಿ ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ನಡೆಸುತ್ತಿರುವ ಹಿಜಾಬ್ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ರಾಖೀ ಸಾವಂತ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಬಾಲಿವುಡ್ ನಟಿ ರಾಖೀ ಸಾವಂತ್ ಕರ್ನಾಟಕದ ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಿದ್ದಾರ ಎಂದು ಹೇಳುತ್ತಿರುವ ಪೋಸ್ಟ್ನ ಪ್ರತಿಪಾದನೆಯನ್ನು ಪರಿಶೀಲಿಸೋಣ.


ಫ್ಯಾಕ್ಟ್ಚೆಕ್:
ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಹಿಜಾಬ್ ಧರಿಸಿರುವ ರಾಖಿ ಸಾವಂತ್ನ ಒಂದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು 31 ಆಗಸ್ಟ್ 2021 ರಂದು ‘ದಿ ಟೈಮ್ಸ್ ಆಫ್ ಇಂಡಿಯಾ‘ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ರಾಖಿ ಸಾವಂತ್ ಜಿಮ್ನಲ್ಲಿ ಹಿಜಾಬ್ ಧರಿಸಿರುವುದನ್ನು ಕಾಣಬಹುದು.
ಸುದ್ದಿಗೆ ಸಂಬಂಧಿತ ಕೀವರ್ಡ್ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ, ರಾಖಿ ಸಾವಂತ್ ಅವರು ಹಿಜಾಬ್ ಧರಿಸಿ ಜಿಮ್ಗೆ ಆಗಮಿಸಿದ ಸುದ್ದಿಗಳನ್ನು ಮಾಡಿರುವ ಹಲವು ವಿಡಿಯೊಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ರಾಖಿ ಸಾವಂತ್ ತನ್ನ ಉಡುಪಿನ ಕುರಿತು ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ, ಹಿಜಾಬ್ ಅನ್ನು ತನ್ನ ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದ್ದಾರೆ. ಹಾಗೆಯೆ ಅದೇ ಹಿಜಾಬ್ ಉಡುಪು ಧರಿಸಿ ನಾನು ಜಿಮ್ ನ ಇವೆಂಟ್ನಲ್ಲಿ ಭಾಗವಹಿಸಿದ್ದಾಗಿ ತಿಳಿಸಿರುವುದು ವರದಿಯಾಗಿದೆ.
ಒಟ್ಟಾರೆ ಹೇಳುವುದಾದರೆ ರಾಖೀ ಸಾವಂತ್ ಆಪ್ತರೊಬ್ಬರು ಉಡುಗೊರೆಯಾಗಿ ನೀಡಿದ್ದ ಹಿಜಾಬ್ ಅನ್ನು ಧರಿಸಿ ಜಿಮ್ ಗೆ ಭೇಟಿ ನೀಡಿದ ಹಳೆಯ ಫೋಟೋವನ್ನು, ಕರ್ನಾಟಕದ ಹಿಜಾಬ್ ವಿವಾದದೊಂದಿಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ತಪ್ಪಾಗಿ ಪ್ರತಿಪಾದಿಸಲಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?

