Fact check: ಉಕ್ರೇನ್ -ರಷ್ಯಾ ಯುದ್ದದ ಭೀಕರತೆಯನ್ನು ತೋರುವ ಈ ಫೋಟೋಗಳ ಹಿಂದಿನ ವಾಸ್ತವವೇನು?
ಪ್ರಸ್ತುತ ರಷ್ಯಾ-ಉಕ್ರೇನ್ (2022) ಬಿಕ್ಕಟ್ಟಿಗೆ ಸಂಬಂಧಿಸಿದ ಹೃದಯವಿದ್ರಾವಕ ದೃಶ್ಯಗಳನ್ನು ತೋರಿಸುವುದಾಗಿ ಹೇಳುವ ಮೂಲಕ ಅನೇಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಭಿನ್ನ ಫೋಟೋ/ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಷ್ಯಾ ಇತ್ತೀಚೆಗೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ವಾಸ್ತವವಾಗಿ ಪರಿಶೀಲಿಸೋಣ.
ವೈರಲ್ ಪೋಸ್ಟ್ 1

‘‘The War of Chimeras’’ ಎಂಬ ಸಾಕ್ಷ್ಯಚಿತ್ರದ ಟ್ರೇಲರ್ ಅನ್ನು ಇಲ್ಲಿ ವೀಕ್ಷಿಸಬಹುದು. ಸಾಕ್ಷ್ಯಚಿತ್ರವನ್ನು 2014-15ರ ಅವಧಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. 2014 ರ ಇದೇ ರೀತಿಯ ದೃಶ್ಯಗಳನ್ನು ಇಲ್ಲಿ ನೋಡಬಹುದು. ದೃಶ್ಯಗಳು ಕೀವ್ (ಉಕ್ರೇನ್) ನಲ್ಲಿರುವ ಸೋಫಿಯಾ ಚೌಕದಿಂದ ಬಂದವು, ಆದರೆ ಪ್ರಸ್ತುತ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ.

ಪೋಸ್ಟ್ ಮಾಡಿದ ವೀಡಿಯೊ ಇತ್ತೀಚಿನದಲ್ಲ. ‘ದಿ ವಾರ್ ಆಫ್ ಚಿಮೆರಾಸ್’ (2017) ಎಂಬ ಸಾಕ್ಷ್ಯಚಿತ್ರದ ಟ್ರೈಲರ್ನಲ್ಲಿ ಇದೇ ರೀತಿಯ ದೃಶ್ಯಗಳನ್ನು ಕಾಣಬಹುದು. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೈರಲ್ ಪೋಸ್ಟ್ 2

ಇದೇ ಫೋಟೋವನ್ನು ಜನವರಿ 2018 ರಲ್ಲಿ ‘BBC ಯು ಪ್ರಕಟಿಸಿದ’ ಲೇಖನದಲ್ಲಿ ಕಾಣಬಹುದು. ಲೇಖನದಲ್ಲಿ, ಫೋಟೋ ಕೆಳಗಿನ ವಿವರಣೆ ಇದ್ದು – “ಕಳೆದ ವಾರ ಪೂರ್ವ ಘೌಟಾದಲ್ಲಿ ವಾಯುದಾಳಿಯಲ್ಲಿ ಕನಿಷ್ಠ 25 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ”. ‘ದಿ ಸನ್’ ಸಹ ಅದೇ ಫೋಟೋವನ್ನು ಪ್ರಕಟಿಸಿದೆ ಮತ್ತು ಬರೆದಿದೆ – “ಸಿರಿಯನ್ ಆಸ್ಪತ್ರೆಯಲ್ಲಿ ಗಾಯಗೊಂಡ ಮಗು”.

ಫೋಟೊದಲ್ಲಿರುವ ಮಗುವಿನ ಚಿತ್ರವು ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ದದ ಫೋಟೋ ಅಲ್ಲ. ಇದು ಸಿರಿಯಾದ ದಾಳಿಯಲ್ಲಿ ಗಾಯಗೊಂಡ ಮಗುವಿ ಫೋಟೋ ಎಂದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಮಾಹಿತಿ ಲಭ್ಯವಾಗಿದೆ ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುತ್ತಿದೆ.
ವೈರಲ್ ಪೋಸ್ಟ್ 3

ಸೆಪ್ಟೆಂಬರ್ 2019 ರಲ್ಲಿ ‘ಇಂಟರ್ನ್ಯಾಷನಲ್ ಮಿಷನ್ ಬೋರ್ಡ್’ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋವನ್ನು ಕಾಣಬಹುದು. ಫೋಟೋದ ವಿವರಣೆಯನ್ನು ಹೀಗೆ ನೀಡಲಾಗಿದೆ – “ನಮ್ಮ ಮೊಣಕಾಲುಗಳ ಮೇಲೆ – ಉಕ್ರೇನಿಯನ್ನರು ಖಾರ್ಕೊವ್ ನಗರದ ಚೌಕದಲ್ಲಿ ಹಿಮದಲ್ಲಿ ಮಂಡಿಯೂರಿ ಪ್ರಾರ್ಥಿಸುತ್ತಾರೆ. ”

ಚಿತ್ರವು ಉಕ್ರೇನ್ನದ್ದಾಗಿದ್ದರೂ, ಇದು ಇತ್ತೀಚಿನದ್ದಲ್ಲ. ಅದೇ ಚಿತ್ರವನ್ನು ಕನಿಷ್ಠ 2019 ರಿಂದ ಇಂಟರ್ನೆಟ್ನಲ್ಲಿ ಕಾಣಬಹುದು. ಆದ್ದರಿಂದ ಪೋಸ್ಟ್ನಲ್ಲಿ ಮಾಡಿರುವ ಪ್ರತಿಪಾದನೆಯು ತಪ್ಪಾಗಿದೆ.
ಪೋಸ್ಟ್ 4

ಅದೇ ಫೋಟೋವನ್ನು ಡಿಸೆಂಬರ್ 2019 ರಲ್ಲಿ ಪ್ರಕಟಿಸಲಾದ ‘ದಿ ವಾಷಿಂಗ್ಟನ್ ಪೋಸ್ಟ್’ ಲೇಖನದಲ್ಲಿ ಕಾಣಬಹುದು. ಫೋಟೋದ ವಿವರಣೆಯನ್ನು ಈ ರೀತಿ ನೀಡಲಾಗಿದೆ – “ಜುಲಿಯಾನಾ ಕುಜ್ನೆಟ್ಸೊವಾ ನವೆಂಬರ್ 27 ರಂದು ವಾರ್ಸಾದಲ್ಲಿ ಬೆಲರುಸನ್ ಗಾಯಕ ಮ್ಯಾಕ್ಸ್ ಕೊರ್ಜ್ ಅವರ ಸಂಗೀತ ಕಚೇರಿಯಲ್ಲಿ ತನ್ನ ನಿಶ್ಚಿತ ವರನನ್ನು ಅಪ್ಪಿಕೊಂಡಿದ್ದಾಳೆ.” ಫೋಟೋ ಬಗ್ಗೆ ಹೆಚ್ಚಿನ ವಿವರಗಳನ್ನು ಸಹ ಇಲ್ಲಿ ಓದಬಹುದು.

ವೈರಲ್ ಫೋಟೋವನ್ನು ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ದದ ಸಂದರ್ಲ್ಲಭದಲ್ಲಿ ತೆಗೆದಿರುವ ಫೋಟೋ ಅಲ್ಲ. ಅದೊಂದು ಹಳೆಯ ಫೋಟೋ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಯುದ್ದದ ಭೀಕರತೆಯನ್ನು ಹೇಳುವ ಫೋಟೋಗಳು
ಆದಾಗ್ಯೂ, ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ಪಡೆಗಳು ಇತ್ತೀಚೆಗೆ ನಡೆಸಿದ ಅನೇಕ ದಾಳಿಗಳಲ್ಲಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಇತ್ತೀಚಿನ ದಾಳಿಗಳಲ್ಲಿ ಗಾಯಗೊಂಡ ಜನರ ಕೆಲವು ದೃಶ್ಯಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಈ ಕೆಳಗೆ ನೀವು ನೋಡುತ್ತಿರುವ ಫೋಟೋಗಳು ಸದ್ಯ ಉಕ್ರೇನ್ ಮತ್ತು ರಷ್ಯಾದ ಯುದ್ದದ ಪರಿಸ್ಥಿತಿಯ ಭೀಕರತೆಯನ್ನು ಹೇಳುತ್ತಿವೆ. ಇವರೆಲ್ಲ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ದದ ದಾಳಿಯಲ್ಲಿ ಸಿಕ್ಕು ನರಳುತ್ತಿರುವ ನಾಗರೀಕರು.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?

