Fact check: ಹಿಂದೂ ದೇವಾಲಯದ ಅರ್ಚಕರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದು ನಿಜವೆ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗಿದ್ದು, “ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ದೇವಾಲಯದ ಅರ್ಚಕರೊಬ್ಬರನ್ನು ಯೇಸುಕ್ರಿಸ್ತನನ್ನು ನಂಬಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯ ಮಾಡಿದಕ್ಕಾಗಿ  ದೇವಾಲಯದ ಪುರೋಹಿತರೊಬ್ಬರು ಕ್ರಿಶ್ಚಿಯನ್ ವ್ಯಕ್ತಿಯ ಮೇಲೆ ಹಲ್ಲೆ” ನಡೆಸುತ್ತಿರುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಿಕಂದರಾಬಾದ್ ಗಣೇಶ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ ಎಂದು ಪೋಸ್ಟ್ ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು 06 ಮಾರ್ಚ್ 2022 ರಂದು ‘ETV ತೆಲಂಗಾಣ’ ಯೂಟ್ಯೂಬ್ ಚಾನೆಲ್ ಪ್ರಕಟಿಸಿರುವುದು ಕಂಡುಬಂದಿದೆ. ಸಿಕಂದರಾಬಾದ್ ಗಣಪತಿ ದೇವಸ್ಥಾನದ ಅರ್ಚಕ ಸುಧಾಕರ್ ಶರ್ಮಾ ಅವರು ಗರ್ಭಗುಡಿಗೆ ಪ್ರವೇಶಿಸಿದ್ದಕ್ಕಾಗಿ ಭಕ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಈ ವೀಡಿಯೊ ವರದಿಯಲ್ಲಿ ಹೇಳಲಾಗಿದೆ. ಅನುಮತಿಯಿಲ್ಲದೆ ಇತರ ದೇವಾಲಯಗಳ ಗರ್ಭಗುಡಿಪ್ರವೇಶವನ್ನು ನಿಷೇದಿಸಲಾಗಿದೆ.

ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡಿ, ಹಲವು ಸುದ್ದಿ ವೆಬ್‌ಸೈಟ್‌ಗಳು ಲೇಖನ ಮತ್ತು ವೀಡಿಯೊಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಘಟನೆಯು 27 ಫೆಬ್ರವರಿ 2022 ರಂದು ನಡೆದಿದೆ. ಈ ಸುದ್ದಿ ವೆಬ್‌ಸೈಟ್‌ಗಳು ಹಲ್ಲೆಗೊಳಗಾದ ಭಕ್ತನನ್ನು ವಾಲ್ಮೀಕಿ ರಾವ್ ಎಂದು ವರದಿ ಮಾಡಿದೆ. ಹಲ್ಲೆಗೊಳಗಾದ ಭಕ್ತ ಸಿಕಂದರಾಬಾದ್ ಗೋಪಾಲಪುರಂ ಪೊಲೀಸ್ ಠಾಣೆಗೆ ತೆರಳಿ ಅರ್ಚಕ ಸುಧಾಕರ್ ಶರ್ಮಾ ವಿರುದ್ಧ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಸುಧಾಕರ್ ಶರ್ಮಾ ಅವರನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಹಲ್ಲೆಗೊಳಗಾದ ಭಕ್ತನ ಧಾರ್ಮಿಕ ಗುರುತಿನ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಗೋಪಾಲಪುರಂ ಪಿಎಸ್ ಎಸ್‌ಒ ಸಾಯಿ ಈಶ್ವರ್ ಗೌಡ್ ಅವರನ್ನು  ಸಂಪರ್ಕಿಸಲಾಗಿದೆ. ಹಲ್ಲೆಗೊಳಗಾದ ಭಕ್ತ ವಾಲ್ಮೀಕಿ ರಾವ್ ಹಿಂದೂ ಧರ್ಮದ ಮುನ್ನೂರು ಕಾಪು ಸಮುದಾಯಕ್ಕೆ ಸೇರಿದವರು ಎಂದು ಸಾಯಿ ಈಶ್ವರಗೌಡ್ ದೃಢಪಡಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ಬಣ್ಣ ಇಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ  ಸಿಕಂದರಾಬಾದ್‌ನ ಗಣೇಶ ದೇವಸ್ಥಾನದ ಅರ್ಚಕರಿಂದ ಹಲ್ಲೆಗೊಳಗಾದ ವ್ಯಕ್ತಿ ಕ್ರಿಶ್ಚಿಯನ್ ಅಲ್ಲ. ಅವರ ಹೆಸರು ವಾಲ್ಮಿಕಿ ರಾವ್ ಹಿಂದೂ ಧರ್ಮದವರಾಗಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯು ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check: ಯುದ್ದದಿಂದ ಜನ ನರಳುತ್ತಿದ್ದರೆ ಉಕ್ರೇನ್‌ ಅಧ್ಯಕ್ಷ ಝಲೆನ್ಸ್ಕಿ ಪತ್ನಿಯೊಂದಿಗೆ ಹಾಡು ಹಾಡುತ್ತಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights