ಫ್ಯಾಕ್ಟ್‌ಚೆಕ್: ಪಶ್ಚಿಮ ಬಂಗಾಳದ 2010ರ ನಕ್ಸಲ್ ಹತ್ಯೆಯ ಘಟನೆಯನ್ನು ಛತ್ತೀಸ್‌ಘಢದ ಇತ್ತೀಚಿನದ್ದು ಎಂದು ಹಂಚಿಕೆ

“Justice for ST People” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ವೊಂದು ವೈರಲ್ ಆಗುತ್ತಿದ್ದು, ಛತ್ತೀಸ್‌ಘಢದಲ್ಲಿ ನಕ್ಸಲೀಯರ ಹೆಸರಿನಲ್ಲಿ ಅಮಾಯಕ ಬುಡಕಟ್ಟು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು,  ಫೋಟೋವನ್ನು ಗೆಟ್ಟಿ ಇಮೇಜ್  ವೆಬ್‌ಸೈಟ್‌ನಲ್ಲಿ 16 ಜೂನ್ 2010 ರಂದು ಪ್ರಕಟಿಸಲಾಗಿದೆ. ಫೋಟೋದ ವಿವರಣೆಯು ಹೀಗಿದ್ದು, “ಭಾರತೀಯ ಅರೆಸೇನಾ ಪಡೆ ಸೈನಿಕರು ಶಂಕಿತ ಮಹಿಳಾ ಗೆರಿಲ್ಲಾ ಮಾವೋವಾದಿಯ  ಮೃತದೇಹವನ್ನು ಹೊತ್ತೊಯ್ದಿದ್ದಾರೆ.

ಜೂನ್ 16, 2010 ರಂದು ಕೋಲ್ಕತ್ತಾದಿಂದ ಪಶ್ಚಿಮಕ್ಕೆ 140 ಕಿಮೀ ದೂರದಲ್ಲಿರುವ ಸಲ್ಬೋನಿಯಲ್ಲಿ, ಮಾವೋವಾದಿಗಳ ಭದ್ರ ನೆಲೆಯಾದ ಲಾಲ್‌ಗಢಕ್ಕೆ ಸಮೀಪವಿರುವ ರಂಝಾ ಅರಣ್ಯದಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ದಾಳಿಯ ವೇಳೆ ಶಂಕಿತ ಮಹಿಳಾ ಮಾವೂವಾದಿಯೊಬ್ಬರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ಮಾವೋವಾದಿ ಗೆರಿಲ್ಲಾಗಳ ಪೈಕಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಫೋಟೋವನ್ನು ‘AFP’ ಸುದ್ದಿ ವೆಬ್‌ಸೈಟ್‌ ಪ್ರಕಟಿಸಿದೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ವಿವರಗಳಿಗಾಗಿ ಸರ್ಚ್ ಮಾಡಿದಾಗ, ಘಟನೆಯು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಸಾಲ್ಬೋನಿ ಗ್ರಾಮದಲ್ಲಿ ನಡೆದಿದ್ದು,  ಭಾರತೀಯ ಭದ್ರತಾ ಪಡೆಗಳು ಮತ್ತು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (PLGA) ಮಾವೋವಾದಿಗಳ ನಡುವಿನ ಈ ಎನ್‌ಕೌಂಟರ್ ಎಂದು ವರದಿ ಮಾಡುವ ಹಲವು  ಲೇಖನಗಳು ಕಂಡುಬಂದಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವು ಪಶ್ಚಿಮ ಬಂಗಾಳದಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮಹಿಳೆಯ ಫೋಟೋ ಆಗಿದ್ದು ಇದು ಹಳೆಯ ಚಿತ್ರ ಎಂದು ತಿಳಿದುಬಂದಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಫೋಟೋವನ್ನು ಛತ್ತೀಸ್‌ಗಢದಲ್ಲಿ ನಡೆದ ಘಟನೆಯದ್ದು ಎಂದು ಸುಳ್ಳು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದ ಹಳೆಯ ಫೋಟೋವನ್ನು ಛತ್ತೀಸ್‌ಗಢದಲ್ಲಿ ಕೊಲ್ಲಲ್ಪಟ್ಟ ಅಮಾಯಕ ಬುಡಕಟ್ಟು ಮಹಿಳೆಯನ್ನು ನಕ್ಸಲೈಟ್ ಎಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಹಂಚಿಕೊಳ್ಳಲಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: CRPF ಶಿಬಿರದ ಮೇಲೆ ಬುರ್ಖಾ ಧರಿಸಿ ಪೆಟ್ರೋಲ್ ಬಾಂಬ್ ಎಸೆದದ್ದು ಪುರುಷನೆಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights