ಫ್ಯಾಕ್ಟ್‌ಚೆಕ್: ಯಪಿಯಲ್ಲಿ ಕಾನೂನು ಉಲ್ಲಂಘಿಸಿದ ಮುಸ್ಲಿಮರಿಗೆ ಪೊಲೀಸರು ಕಿವಿ ಹಿಡಿಸಿದ್ದು ನಿಜವಲ್ಲ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾರಣಕ್ಕೆ “ಬುಲ್ಡೋಜರ್ ಬಾಬಾ” ಎಂದು ಕೆಲವರಿಂದ ಶ್ಲಾಘನೆಗೆ ಒಳಗಾದರೆ, ಕಾನೂನುಗಳನ್ನು ಗಾಳಿಗೆ ತೂರಿ ಹೋರಾಟಗಾರರು, ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು ಅಪರಾಧ  ಕೃತ್ಯಗಳಲ್ಲಿ ಭಾಗಿಯಾಗಿರುವ ಮುಸ್ಲಿಮರಿಗೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ “ಮುರ್ಗಾ” ಎನ್ನುವ ಶಿಕ್ಷೆಯನ್ನು ನೀಡಿ ಕಿವಿ ಹಿಡಿಸಲಾಗಿದೆ ಎಂದು ಹೇಳುವ ಪೋಸ್ಟರ್ ಹರಿದಾಡುತ್ತಿದೆ.

ಯೋಗಿ ಆದಿತ್ಯನಾಥ್ ಅವರು ಅಪರಾಧಿಗಳಿಗೆ ಶಿಕ್ಷೆ ನೀಡುತ್ತಿದ್ದಾರೆ ಎಂದು ಹೇಳಿ ವಿಡಿಯೊ ವೈರಲ್
ಯೋಗಿ ಆದಿತ್ಯನಾಥ್ ಅವರು ಅಪರಾಧಿಗಳಿಗೆ ಶಿಕ್ಷೆ ನೀಡುತ್ತಿದ್ದಾರೆ ಎಂದು ಹೇಳಿ ವಿಡಿಯೊ ವೈರಲ್

ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಅನೇಕ ಜನರು ಈ ವೀಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ ಮತ್ತು ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

https://twitter.com/Yogisaransh_1/status/1512010907181715460

ಫ್ಯಾಕ್ಟ್‌ಚೆಕ್:
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಸಹಾಯದಿಂದ, ವೈರಲ್ ವೀಡಿಯೊದ ಮೂಲವನ್ನು ಹುಡುಕಿದ್ದು ಇದು 2020ರ ಮಾರ್ಚ್ 29, ರಂದು “ಉರ್ದು ಅಪ್‌ಡೇಟ್ಸ್” ಎಂಬ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವೀಡಿಯೊದ ಶೀರ್ಷಿಕೆಯಲ್ಲಿ “ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವರನ್ನು ಮನ್ಸೆಹ್ರಾ ಪೊಲೀಸರು ಹೇಗೆ ಶಿಕ್ಷಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

 

 

ಇದನ್ನೆ ಆಧಾರಾವಾಗಿ ತೆಗೆದುಕೊಂಡು ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಜಿಯೋ ನ್ಯೂಸ್‌ 2020ರ ಮಾರ್ಚ್ 29, ರಂದು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ವಿಡಿಯೋ ಮಾಹಿತಿ ಲಭಿಸಿದೆ.

ವರದಿಯಲ್ಲಿ ವೈರಲ್ ವೀಡಿಯೊದ ಪೂರ್ಣ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು ಅದು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಮನ್ಸೆಹ್ರಾ ಜಿಲ್ಲೆಯಲ್ಲಿ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಗಿಸಿ ಸಿಕ್ಕಿಬಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ಎಲ್ಲರಿಗೂ “ಮುರ್ಗಾ” ಶಿಕ್ಷೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ  ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಜಾರಿಯಲ್ಲಿರುವ “ಮುರ್ಗಾ” ಶಿಕ್ಷೆಯಲ್ಲಿ( ಕಿವಿ ಹಿಡಿಯುವ) ನಡು ಬಗ್ಗಿಸಿ ಮೊಣಕಾಲುಗಳ ಹಿಂದಿನಿಂದ ಎರಡೂ ಕೈಗಳನ್ನು ಚಾಚಿ ಕಿವಿಗಳನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಹುಂಜ ನಡೆಯುವ ರೀತಿಯಲ್ಲಿ ಶಿಕ್ಷೆಯನ್ನು ವಿಧಿಸುವ ಕ್ರಿಯೆಗೆ ಮುರ್ಗಾ ಶಿಕ್ಷೆ ಎಂದು ಹೇಳಲಾಗುತ್ತದೆ.

ಮನ್ಸೆಹ್ರಾ ಪೊಲೀಸರು ಮಾರ್ಚ್ 30, 2020 ರಂದು,  ಮಾಡಿದ ಟ್ವಿಟ್ಟರ್‌ಗೆ ಪ್ರತಿಕ್ರಿಯಿಸಿದ ಕೆಲವರು ಪೊಲೀಸರು ಜನರನ್ನು ನಡೆಸಿಕೊಂಡಿರುವ ಕ್ರಮ ಖಂಡನೀಯ ಎಂದು ಟ್ವೇಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗ ಹೇಳುವುದಾದರೆ 2020ರ ಮಾರ್ಚ್ 29, ರಂದು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಮನ್ಸೆಹ್ರಾ ಜಿಲ್ಲೆಯಲ್ಲಿ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ನೀಡಿದ ಮುರ್ಗಾ ಶಿಕ್ಷೆಯನ್ನು ಉತ್ತರ ಪ್ರದೇಶದ ಇತ್ತೀಚನದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕೃಪೆ: ಇಂಡಿಯಾಟುಡೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಟರ್ಕಿಯಲ್ಲಿ ನಡೆದ ಘಟನೆಯನ್ನು ಭಾರತದ್ದು ಎಂದು ಸುಳ್ಳು ಹೇಳಿದ ಬಲಪಂಥೀಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights