ಫ್ಯಾಕ್ಟ್ಚೆಕ್: ಸಮುದ್ರ ತೀರದ KISSING ROCK ಕ್ಯಾಲಿಫೋರ್ನಿಯಾದಲ್ಲಿದೆ ಎಂಬುದು ನಿಜವೇ?
ಇದು ಯುನೈಟೆಡ್ ಸ್ಟೇಟ್ಸ್ನ ಅತ್ಯಂತ ರೊಮ್ಯಾಂಟಿಕ್ ತಾಣಗಳ ಚಿತ್ರ ಎಂದು ಹೇಳಿಕೊಳ್ಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ರೊಮ್ಯಾಂಟಿಕ್ ಜೋಡಿಯನ್ನು ಹೋಲುವ ಸಮುದ್ರ ತೀರದ ಎರಡು ಪರ್ವತ ಬಂಡೆಗಳ ಫೋಟೋವನ್ನು ಒಳಗೊಂಡಿದೆ. ಈ ರೊಮ್ಯಾಂಟಿಕ್ ಕಲ್ಲುಗಳ ಕುರಿತು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಪೋಸ್ಟ್ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಹುಡುಕಿದಾಗ , ಅದೇ ಚಿತ್ರವನ್ನು ‘ಫೈನ್ ಆರ್ಟ್ ಅಮೇರಿಕಾ’ ವೆಬ್ಸೈಟ್ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. ಫೋಟೋದ ವಿವರಣೆಯಲ್ಲಿ “ಕ್ಯಾಲಿಫೋರ್ನಿಯಾದ ಪೆಸಿಫಿಕ್ ಗ್ರೋವ್ನಲ್ಲಿರುವ ಚುಂಬನ ರೀತಿಯ ಬಂಡೆಯ ಚಿತ್ರವು ದುರ್ಗಾಶ್ರೀನಿವಾಸ್ ಯರ್ರಂಶೆಟ್ಟಿ ಯವರ ಛಾಯಾಚಿತ್ರವಾಗಿದ್ದು, ಇದನ್ನು ಏಪ್ರಿಲ್ 25, 2017 ರಂದು ಅಪ್ಲೋಡ್ ಮಾಡಲಾಗಿದೆ”. ದುರ್ಗಾಶ್ರೀನಿವಾಸ್ ಯರ್ರಂಶೆಟ್ಟಿ ಎಂಬ ಕಲಾವಿದ ರಚಿಸಿದ ಕಲಾಕೃತಿಯನ್ನು ಫೋಟೋ ತೋರಿಸುತ್ತದೆ. ದುರ್ಗಾಶ್ರೀನಿವಾಸ್ ಯರ್ರಂಶೆಟ್ಟಿಯವರ ಗ್ಯಾಲರಿಯ ಫೋಟೋಗಳನ್ನು ಇಲ್ಲಿ ನೋಡಬಹುದು. ಅದೇ ಫೋಟೋವನ್ನು ‘ಪಿಕ್ಸೆಲ್ಸ್‘ ವೆಬ್ಸೈಟ್ನಲ್ಲಿ ಇದೇ ವಿವರಣೆಯೊಂದಿಗೆ ಪ್ರಕಟಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ನಾವು ಸರ್ಚ್ ಮಾಡಿದಾಗ, ಥೈಲ್ಯಾಂಡ್ನ ಕೊಹ್ ಫಿ ಫಿ ದ್ವೀಪದ ಬಳಿ ಇರುವ ಪರ್ವತ ಬಂಡೆಗಳನ್ನು ಸಂಪಾದಿಸಿ ಈ ಕಲಾಕೃತಿಯನ್ನು ರಚಿಸಲಾಗಿದೆ ಎಂದು ಕಂಡುಬಂದಿದೆ.

ಪೆಸಿಫಿಕ್ ಗ್ರೋವ್ ಕ್ಯಾಲಿಫೋರ್ನಿಯಾದ ಕರಾವಳಿಯುದ್ದಕ್ಕೂ ಇರುವ ‘ಕಿಸ್ಸಿಂಗ್ ರಾಕ್ಸ್’ ರೋಮ್ಯಾಂಟಿಕ್ ಸ್ಪಾಟ್ನ ಮೂಲ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಆಧಾರಗಳಿಂದಾಗಿ, ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ಚಿತ್ರವು ಥೈಲ್ಯಾಂಡ್ನ ಪರ್ವತ ಬಂಡೆಯ ಚಿತ್ರದಿಂದ ಸ್ಪೂರ್ತಿ ಪಡೆದು ರಚಿಸಿದ ಕಲಾಕೃತಿ ಎಂದು ತೀರ್ಮಾನಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕಲಾಕೃತಿಯ ಚಿತ್ರವನ್ನು ಕ್ಯಾಲಿಫೋರ್ನಿಯಾದ ‘ಕಿಸ್ಸಿಂಗ್ ರಾಕ್’ ರೊಮ್ಯಾಂಟಿಕ್ ಸ್ಪಾಟ್ನ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನವಿದೆ ಎಂದು ಸುಳ್ಳು ಹೇಳಿದ ಬಲಪಂಥಿಯರು!

