ಫ್ಯಾಕ್ಟ್ಚೆಕ್ : ತೀಸ್ತಾ ಸೆಟಲ್ವಾಡ್ ಪೊಲೀಸರಿಗೆ ಉಗುಳಿಲ್ಲ !
ಮಹಿಳೆಯೊಬ್ಬರು ಪೊಲೀಸ್ ಸಿಬ್ಬಂದಿಗೆ ಹೊಡೆಯುವ ಮತ್ತು ಉಗುಳುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಜೂನ್ 26 ರಂದು ತನ್ನ ಬಂಧನದ ಸಮಯದಲ್ಲಿ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
https://twitter.com/aussiesunil/status/1544326473221148672
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಸೆಟಲ್ವಾಡ್ ಮತ್ತು ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್ ಬಿ ಶ್ರೀಕುಮಾರ್ ಅವರನ್ನು ಗುಜರಾತ್ ಎಟಿಎಸ್ ಕಳೆದ ತಿಂಗಳು ವಿಚಾರಣೆಗೆ ಒಳಪಡಿಸಿತ್ತು. ತೀಸ್ತಾ ಅವರನ್ನು ಪೋಲೀಸರು ಬಂಧಿಸುವ ವೇಳೆ ಪೊಲೀಸರ ಮೇಲೆ ಉಗುಳಿದ್ದಾರೆ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ವಿಡಿಯೊ ಅಥವಾ ವಿಡಿಯೊದ ಸ್ಕ್ರೀನ್ಶಾಟ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ ಘಟನೆ ಕುರಿತು ಹಲವು ಸುದ್ದಿ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ್ದರ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಸಂಭವಿಸಿದೆ. ಅಲ್ಲಿ ಮಹಿಳಾ ಘಟಕ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟ ಡಿಸೋಜಾ ಅವರು ಪೊಲೀಸರ ಮೇಲೆ ಉಗುಳುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
#WATCH | Mahila Congress President Netta D'Souza spits at police personnel during a protest with party workers in Delhi against ED for questioning Congress leader Rahul Gandhi in the National Herald case. pic.twitter.com/cPBIntJq1p
— ANI (@ANI) June 21, 2022
ನಾನು ಪೊಲೀಸರ ಮೇಲೆ ಉಗುಳಿಲ್ಲ ಎಂದು ಡಿಸೋಜಾ ಹೇಳಿದ್ದಾರೆ. ನನ್ನ ವಿರುದ್ಧ ಈ “ಅಪ್ರಚಾರ” ಮಾಡಲಾಗುತ್ತಿದೆ ಎಂದು ಜೂನ್ 21 ರಂದು ಟ್ವಿಟರ್ನಲ್ಲಿ ಘಟನೆಯನ್ನು ಕುರಿತು ಹೇಳಿದ್ದಾರೆ. ಪೊಲೀಸರು ತನ್ನನ್ನು ಎಳೆದುಕೊಂಡು ಹೋಗುತ್ತಿರುವಾಗ ” ಧೂಳಿನಂತಹ ಮಣ್ಣಿನ ಕಣಗಳು” ಬಾಯಿಗೆ ಬಂದಂತಾಗಿತ್ತು ಅದಕ್ಕಾಗಿಯೇ ತಾನು ಉಗುಳಿದ್ದೇನೆ ಹೊರತು ಭದ್ರತಾ ಸಿಬ್ಬಂದಿಯನ್ನು ಅಗೌರವಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಡಿಸೋಜಾ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆಯೋ ಇಲ್ಲವೋ, ಆದರೆ ತೀಸ್ತಾ ಸೆಟಲ್ವಾಡ್ ಪೊಲೀಸರ ಮೇಲೆ ಉಗುಳಿದ್ದಾರೆ ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸರಿಗೆ ಉಗುಳುವ ಮಹಿಳೆಯು ‘ನೆಟ್ಟ ಡಿಸೋಜಾ’ ಕಾಂಗ್ರೆಸ್ನ ಮಹಿಳಾ ಘಟಕದ ಅಧ್ಯಕ್ಷೆ ಎಂದು ತಿಳಿದು ಬಂದಿದೆ. ಆದರೆ ಇದನ್ನು ತಿರುಚಿ ಪೊಲೀಸರಿಗೆ ಉಗುಳುತ್ತಿರುವುದು ತೀಸ್ತಾ ಸೆಟಲ್ವಾಡ್ ಎಂದು ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಭಾರತದ ಮುಸ್ಲಿಮರುನ್ನು ಗುರಿಯಾಗಿಸಿದ ಸಂಬಂಧವಿಲ್ಲದ ವಿಡಿಯೊ ಹಂಚಿಕೆ

