ಫ್ಯಾಕ್ಟ್‌ಚೆಕ್ : ಸುಪ್ರೀಂ ಕೋರ್ಟ್ ಜಡ್ಜ್ ಸೂರ್ಯ ಕಾಂತ್ ಜೊತೆಯಲ್ಲಿ ಪತ್ರಕರ್ತರ ಔತಣ ಕೂಟ ! ವಾಸ್ತವವೇನು

‘ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ.ಪಾರ್ದೀವಾಲಾ ಅವರ ಜೊತೆ ಪತ್ರಕರ್ತರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಎನ್‌ಡಿ ಟಿ.ವಿ. ಸುದ್ದಿವಾಹಿನಿಯ ಸಂಸ್ಥಾಪಕ ಪ್ರಣಯ್‌ ರಾಯ್‌, ಪತ್ರಕರ್ತೆ ರಾಧಿಕಾ ರಾಯ್‌ ಮತ್ತು ‘ದಿ ಹಿಂದು’ ಪತ್ರಿಕೆ ಸಮೂಹದ ಮುಖ್ಯಸ್ಥ ಎನ್‌. ರಾಮ್‌ ಅವರು ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಬಿಜೆಪಿ ಮತ್ತು ನೂಪುರ್ ಶರ್ಮಾ ಅವರನ್ನು ದೂಷಿಸುವ ಎಲ್ಲರೂ ಒಟ್ಟಿಗೇ ಸೇರಿದ್ದಾರೆ’ ಎಂದು ಈ ಚಿತ್ರಕ್ಕೆ ವಿವರಣೆ ನೀಡಲಾಗಿದೆ. ಬಿಜೆಪಿಯ ವಕ್ತಾರೆ ಆಗಿದ್ದ ನೂಪುರ್‌ ಶರ್ಮಾ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ಚಿತ್ರ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್ :

ಪೋಸ್ಟ್ ಮಾಡಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ ಮತ್ತು ಕೆಲವು ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಅದೇ ಫೋಟೋವನ್ನು ‘ಮೈಂಡ್‌ಸ್ಕೇಪ್ಸ್’ ತಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ‘ಮೈಂಡ್‌ಸ್ಕೇಪ್ಸ್’ ಇದೇ ಫೋಟೋವನ್ನು 03 ಜುಲೈ 2022 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕೆಳಗಿನ ವಿವರಣೆಯೊಂದಿಗೆ ಪೋಸ್ಟ್ ಮಾಡಿದೆ . “ಹಣಕಾಸು ಸಚಿವರಾದ ತಮಿಳುನಾಡು, ಶ್ರೀ ಪಿ. ತ್ಯಾಗರಾಜನ್, ಡಾ. ಪ್ರಣಯ್ ರಾಯ್ ಮತ್ತು ಶ್ರೀಮತಿ ರಾಧಿಕಾ ರಾಯ್, ಶ್ರೀಮತಿ ಬೃಂದಾ ಕಾರಟ್ ಮತ್ತು ಶ್ರೀ ಪ್ರಕಾಶ್ ಕಾರಟ್, ಶ್ರೀಮತಿ ಮತ್ತು ಶ್ರೀ ಎನ್. ರಾಮ್ ಮತ್ತು ದೀಪಾಲಿ ಸಿಕಂದ್ ಅವರೊಂದಿಗೆ ಔತಣಕೂಟ ಏರ್ಪಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದೆ ”.

ಈ ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಕ್ವಿಂಟ್’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ತಮಿಳುನಾಡಿನ ‘ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌’ ಸಂಸ್ಥೆ ಈ ವರ್ಷದ ಆರಂಭದಲ್ಲಿ ಊಟಿಯಲ್ಲಿ ಆಯೋಜಿಸಿದ್ದ ಭೋಜನಕೂಟದ ಚಿತ್ರ ಇದಾಗಿದೆ. ತಮಿಳುನಾಡಿನ ಹಣಕಾಸು ಸಚಿವ ಪಿ. ತ್ಯಾಗರಾಜನ್‌, ಸಿಪಿಎಂ ನಾಯಕರಾದ ಬೃಂದಾ ಕಾರಟ್‌, ಪ್ರಕಾಶ್‌ ಕಾರಟ್‌ ಮತ್ತು ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ ಸಂಸ್ಥಾಪಕಿ ದೀಪಾಲಿ ಸಿಖಂಡ್‌ ಅವರು ಪತ್ರಕರ್ತರ ಜೊತೆ ಇದ್ದಾರೆ. ಈ ವೈರಲ್‌ ಚಿತ್ರದ ಕುರಿತು ಎನ್‌. ರಾಮ್‌ ಅವರೂ ಕೂಡಾ ಸ್ಪಷ್ಟನೆ ನೀಡಿದ್ದು, ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ’ ಎಂದು ದಿ ಕ್ವಿಂಟ್‌ ವಿವರಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಂಬಂಧವಿಲ್ಲದ ಪೋಟೊವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ.ಪಾರ್ದೀವಾಲಾ ಅವರ ಜೊತೆ ಪತ್ರಕರ್ತರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಾವಿಗೆ ರೆಕ್ಕೆ ಇದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights