ಫ್ಯಾಕ್ಟ್‌ಚೆಕ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪತ್ನಿ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಡಾ ಗುರುಪ್ರೀತ್ ಕೌರ್ ಅವರೊಂದಿಗೆ ಜುಲೈ 7 ರಂದು ಮದುವೆಯಾಗಿದ್ದಾರೆ ಇದು ಭಗವಂತ್ ಮಾನ್ ಅವರಿಗೆ ಎರಡನೆ ಮದುವೆ. ಅವರ ಮೊದಲ ಮದುವೆಯು 2016 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.  ಭಗವಂತ್ ಮಾನ್ ಮದುವೆಯ ನಂತರ ಅವರು ವರಿಸಿದ ಹುಡುಗಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಇದು ಸಿಎಂ ಮಾನ್ ಅವರ ಹೊಸ ಪತ್ನಿ’ ಎಂದು ಹೇಳುವ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವ ಮಹಿಳೆ ಸಿಎಂ ಮಾನ್ ಅವರ ಹೊಸ ಪತ್ನಿಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್ ಮಾಡಲಾಗಿದ್ದು, ಇದು ಫೆಬ್ರವರಿ 9, 2020 ರಂದು ದೆಹಲಿಯ MERI ಕಾಲೇಜಿನ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಎರಡು ವರ್ಷಗಳ ಪೋಟೋವನ್ನು, ಟ್ವಿಟರ್‌ನಲ್ಲಿ ಕೆಲವರು ಇದು ಮಾನ್‌ ಮದುವೆಯಾಗುತ್ತಿರುವ ವಧು ಎಂದು ಹೇಳುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಂತಹ ಒಂದು ಟ್ವೀಟ್ ನಲ್ಲಿ “ಇದು ಪಂಜಾಬ್ ಸಿಎಂ ಅವರ ಹೊಸ ಪತ್ನಿ” ಎಂದು ಬರೆಯಲಾಗಿದೆ. ವಿಡಿಯೊದಲ್ಲಿರುವ ಡಾ ಗುರುಪ್ರೀತ್ ಕೌರ್ ಎಂದು ಕರೆಯಲ್ಪಡುವ ಮಹಿಳೆ ಪಂಜಾಬ್ ಸಿಎಂ ಮದುವೆಯಾಗಲು ನಿರ್ಧರಿಸಿದ ವ್ಯಕ್ತಿಯಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ANI ಪಂಜಾಬ್ ಸಿಎಂ ಮಾನ್ ಅವರು ಮದುವೆಯಾಗಿರುವ ಹುಡುಗಿಯ  ಫೋಟೋವನ್ನು ಟ್ವೀಟ್ ಮಾಡಿದೆ. ಈ ಫೋಟೋವನ್ನು ವೈರಲ್ ವೀಡಿಯೊದಲ್ಲಿರುವ ಮಹಿಳೆಯೊಂದಿಗೆ ಹೋಲಿಸಿದರೆ ಯಾವುದೇ ಹೋಲಿಕೆಗಳು ಕಂಡುಬಂದಿಲ್ಲ. ಇದಲ್ಲದೆ, ವೈರಲ್ ವಿಡಿಯೊದಲ್ಲಿರುವ ಮಹಿಳೆಯ ಫೇಸ್‌ಬುಕ್ ಪ್ರೊಫೈಲ್ ಅನ್ನು ಕಂಡು ಹಿಡಿಯಲಾಗಿದೆ. ಅವರನ್ನು ಸಂಪರ್ಕಿಸಿದಾಗ ವೈರಲ್ ವಿಡಿಯೊ ತನ್ನನ್ನು ಒಳಗೊಂಡಿರುವ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಹೇಳಿದ ವಿಚಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರಿಗೂ ಪಂಜಾಬ್ ಮುಖ್ಯಮಂತ್ರಿಯ ಮದುವೆಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದ್ದಾರೆ.

ವರದಿಗಳ ಪ್ರಕಾರ, ಮಾನ್ ಅವರ ಅಧಿಕೃತ ನಿವಾಸದಲ್ಲಿ ಅವರ ವಿವಾಹ ಸಮಾರಂಭ ನೆರವೇರಿದ್ದು ಆಪ್ತರು ಮತ್ತು ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಭಾಗವಹಿಸಿದ್ದಾರೆ.

ಗುರುಪ್ರೀತ್ ಕೌರ್ 2018 ರಲ್ಲಿ ವೈದ್ಯಕೀಯ ಶಿಕ್ಷಣವನ್ನು  ಪೂರ್ಣಗೊಳಿಸಿದ್ದರು. ಇತ್ತೀಚೆಗೆ ನಡೆದ ಪಂಜಾಬ್ ಚುನಾವಣೆಯ ಸಂದರ್ಭದಲ್ಲಿ ಅವರು ಮಾನ್ ಅವರ ಪ್ರಚಾರದಲ್ಲಿ ಸಹಾಯ ಮಾಡಿದ್ದರು ಎಂದು ವರದಿಯಾಗಿದೆ. ಕೌರ್ ಅವರ ಕುಟುಂಬವು ಕುರುಕ್ಷೇತ್ರದ ಪೆಹ್ವಾ ಪ್ರದೇಶದಲ್ಲಿ ನೆಲೆ ನಿಂತಿದೆ. ಆಕೆಯ ತಂದೆ ಇಂದರ್‌ಜಿತ್ ಸಿಂಗ್ ಒಬ್ಬ ರೈತ.

ಒಟ್ಟಾರೆಯಾಗಿ ಹೇಳುವುದಾದರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡನೆ ಮದುವೆಯಾಗಿದು ಅವರ ಪತ್ನಿ ಗುರುಪ್ರೀತ್ ಕೌರ್ . ಹಾಗಾಗಿ ಅದೇ ಹೆಸರಿನ ಮಹಿಳೆಯ ಸಂಬಂಧವಿಲ್ಲದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಮಾಡಲಾಗಿದೆ , ಆದರೆ ಭಗವಂತ್ ಮನ್ ಮದುವೆಯಾದ ಮಹಿಳೆಗೂ ವೈರಲ್ ಫೋಟೋಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ:  ಫ್ಯಾಕ್ಟ್‌ಚೆಕ್: ತೀಸ್ತಾ ಸೆಟಲ್ವಾಡ್ ಮುತ್ತಾತ ‘ಜನರಲ್ ಡಯರ್‌’ಗೆ ಕ್ಲೀನ್ ಚಿಟ್‌ ನೀಡಿದ್ದರು ಎಂಬುದು ಸುಳ್ಳು


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights