ಫ್ಯಾಕ್ಟ್ಚೆಕ್: ಹಿಂದೂ ರಾಷ್ಟ್ರ ಮಾಡುವುದೇ ನಮ್ಮ ಮೊದಲ ಆದ್ಯತೆ ಎಂದು ದ್ರೌಪದಿ ಮುರ್ಮು ಹೇಳಿಲ್ಲ
ದೇಶದ 15ನೇ ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಮುರ್ಮು ಅವರು ಶೇ 64ರಷ್ಟು ಮತಗಳನ್ನು ಪಡೆದರೆ, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಶವಂತ ಸಿನ್ಹಾ ನಿರಾಸೆ ಅನುಭವಿಸಿದ್ದಾರೆ. ರಾಷ್ಟ್ರದ ಅಧ್ಯಕ್ಷರಾದ ಬೆನ್ನಲೆ ‘ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡುವುದಾಗಿ ಮುರ್ಮು ಹೇಳಿದ್ದಾರೆ ಎನ್ನುವ ಟ್ವೀಟ್ನ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಿಂದಿ ಭಾಷೆಯಲ್ಲಿ ವೈರಲ್ ಆಗಿರುವ ಸ್ಕ್ರೀನ್ಶಾಟ್ನಲ್ಲಿ, “ರಾಷ್ಟ್ರಪತಿಯಾದ ನಂತರ, ಈ ದೇಶವನ್ನು ‘ಹಿಂದೂ ರಾಷ್ಟ್ರ’ ಮಾಡುವುದು ನನ್ನ ಮೊದಲ ಕರ್ತವ್ಯವಾಗಿದೆ” ಎಂದು ಬರೆಯಲಾಗಿದೆ” ಎಂದಿದೆ. ಹಾಗಿದ್ದರೆ ಮುರ್ಮು ನಿಜವಾಗಿಯೂ ಇಂತಹ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆಯೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :
ದ್ರೌಪದಿ ಮುರ್ಮು ಅವರು ತಮ್ಮ ಟ್ವಟರ್ಅಲ್ಲು ಹೀಗೆ ಹೇಳಿದ್ದಾರೆಯೇ ಎಂದು ತಿಳಿಯಲು ಅವರ ಪರಿಶೀಲಿಸಿದಾಗ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ಬರೆದಿರುವ ಪೋಸ್ಟ್ ಲಭ್ಯವಾಗಿಲ್ಲ. ಒಂದು ವೇಳೆ ಅವರು ಹಾಗೆ ಬರೆದಿದ್ದರೆ ಎಲ್ಲಾ ಸುದ್ದಿ ಮಾಧ್ಯಮಗಳು ದೊಡ್ಡ ಮಟ್ಟದ ಸುದ್ದಿಯನ್ನು ಮಾಡುತ್ತಿದ್ದವು ಆದರೆ ಯಾವುದೇ ಮಾದ್ಯಮಗಳು ಈ ಪೋಸ್ಟ್ನ ಕುರಿತು ವರದಿಗಳನ್ನು ಬಿತ್ತರಿಸಿಲ್ಲ.

ಪೋಸ್ಟ್ ಮಾಡಲಾಗಿರುವ ಟ್ವಿಟರ್ ಅಕೌಂಟ್ ಅನ್ನು ಸರ್ಚ್ ಮಾಡಿದಾಗ ಅದು ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದಿದೆ. ಹಾಗಾಗಿ ಯಾರೋ ಕಿಡಿಗೇಡಿಗಳು ಫೇಕ್ ಅಕೌಂಟ್ ಮೂಲಕ ಈ ರೀತಿ ಮಾಡಿರಬಹುದು ಎಂದು Aaj Tak ವರದಿ ಮಾಡಿದೆ. ಅದನ್ನು ನೀವು ಇಲ್ಲಿ ನೋಡಬಹುದು. ಮುರ್ಮು ಅವರ ಆಪ್ತ ಸಹಾಯಕ ಸೂರಜ್ ಕುಮಾರ್ ಮಹ್ತೋ ಅವರು ಹಿಂದಿ ಸುದ್ದಿ ವಾಹಿನಿ ಆಜ್ ತಕ್ನೊಂದಿಗೆ ಮಾತನಾಡಿದ್ದಾರೆ ಮತ್ತು ಮುರ್ಮು ಹೆಸರಿನಲ್ಲಿ ಬರುತ್ತಿರುವ ಟ್ವೀಟ್ಗಳು ನಕಲಿ ಮತ್ತು ಅವರು ಇನ್ನೂ ಟ್ವಿಟರ್ನಲ್ಲಿಲ್ಲ ಹೆಚ್ಚು ಸಕ್ರಿಯರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುರ್ಮು ಅವರು ಜುಲೈ 25 ರಂದು (ಇಂದು) ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೋಲೊಪ್ಪಿಕೊಂಡಿರುವ ಯಶವಂತ್ ಸಿನ್ಹಾ ಅವರು, ಮುರ್ಮು ಅವರಿಗೆ ಶುಭಾಶಯ ಕೋರಿದ್ದಾರೆ. ‘ನಿಷ್ಪಕ್ಷಪಾತವಾಗಿ ಹಾಗೂ ನಿರ್ಭೀತಿಯಿಂದ ಸಂವಿಧಾನದ ರಕ್ಷಕಿಯಾಗಿ ನೂತನ ರಾಷ್ಟ್ರಪತಿ ಕೆಲಸ ಮಾಡಬೇಕು ಎಂಬುದು ಎಲ್ಲ ಭಾರತೀಯರ ನಿರೀಕ್ಷೆಯಾಗಿದೆ’ ಎಂದು ಅವರು ಹೇಳಿದ್ದಾರೆ. ತಮ್ಮನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ವಿರೋಧ ಪಕ್ಷಗಳಿಗೆ ಸಿನ್ಹಾ ಅವರು ಧನ್ಯವಾದ ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ನಕಲಿ ಖಾತೆಯಿಂದ ಮಾಡಿದ ಟ್ವೀಟ್ ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ದ್ರೌಪದಿ ಮುರ್ಮು ಹೆಸರಿನಲ್ಲಿ ಟ್ವಿಟರ್ ಮೂಲಕ ಮಾಡಲಾಗಿರುವ ಪೋಸ್ಟ್ ನಕಲಿ ಎಂದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಎಂಬುದು ನಿಜವೆ?


ಭಾರತ ಹಿಂದೂ ರಾಷ್ಟ್ರ ಆಗೋದಂತು ಖಚಿತ ,ದ್ರೌಪದಿ ಮುರ್ಮು ಅವರ ಸಹಭಾಗಿತ್ವ ದಲ್ಲೇ ಆಗೋದು ಇನ್ನೂ ಖಚಿತ