ಫ್ಯಾಕ್ಟ್‌ಚೆಕ್: ಹಿಂದೂ ಭಗ್ನ ಪ್ರೇಮಿಯ ರಂಪಾಟವನ್ನು ‘ಲವ್ ಜಿಹಾದ್‌’ ಎಂದು ತಪ್ಪಾಗಿ ಹಂಚಿಕೆ

ವ್ಯಕ್ತಿಯೊಬ್ಬ ಇಬ್ಬರು ಯುವತಿಯರಿಗೆ ಚಾಕು ತೋರಿಸಿ ಬೆದರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮುಸ್ಲಿಂ ವ್ಯಕ್ತಿಯು ಹಿಂದೂ ಹುಡುಗಿಯರಿಗೆ ಹೆದರಿಸುತ್ತಿರುವ ವಿಡಿಯೊ ಎಂದು ಹೇಳಿಕೊಂಡು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.  “ಲವ್ ಜಿಹಾದ್” ಗೆ ಇದೊಂದು ಉದಾಹರಣೆ ಎಂದು ಅನೇಕರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.  ಮುಸ್ಲಿಂ ವ್ಯಕ್ತಿಯು, ಹಿಂದೂ ಯುವತಿಯರನ್ನು ವಂಚಿಸಿ ಮದುವೆಯಾಗುತ್ತಾರೆ ನಂತರ ಅವರನ್ನು ಇಸ್ಲಾಂಗೆ ಮತಾಂತರಿಸುತ್ತಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ ಮಾಡಿದ್ದಾರೆ.

https://twitter.com/yogeshDharmSena/status/1552121377016057856

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಕೋಮುಪ್ರಚೋದನೆಯ ಹಿನ್ನಲೆಯಲ್ಲಿಯೇ  ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಡಿಯೊದಲ್ಲಿ ಪೋಸ್ಟ್‌ನಲ್ಲಿ “ಇಂದೋರ್” ಪದವನ್ನು  ಹೊಂದಿರುವುದರಿಂದ, ಅಂತಹ ಘಟನೆಯ ಕುರಿತು ಸುದ್ದಿ ವರದಿಗಳಿಗಾಗಿ ನಾವು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 26 ರ ದೈನಿಕ್ ಭಾಸ್ಕರ್ ವರದಿಯು ಅದೇ ವೀಡಿಯೊವನ್ನು ಹೊಂದಿದ್ದು, ಈ ಘಟನೆಯು ಇತ್ತೀಚಿನದು ಎಂದು ಖಚಿತಪಡಿಸುತ್ತದೆ. ವೀಡಿಯೊದಲ್ಲಿ,  VM O2 ಕೆಫೆ ಎಂಬ ಉಪಾಹಾರ ಗೃಹದ ಸೈನ್‌ಬೋರ್ಡ್ ಅನ್ನು ನೋಡಬಹುದು.  ಬೋರ್ಡ್‌ನಲ್ಲಿ ನಮೂದಿಸಲಾದ ಫೋನ್ ಸಂಖ್ಯೆಗೆ ಕರೆ ಮಾಡಿ ಕೆಫೆಯ ಮಾಲೀಕ ಯೋಗಿತಾ ಮಾಳವಿಯಾ ಅವರೊಂದಿಗೆ ಇಂಡಿಯಾ ಟುಡೇ ಮಾತನಾಡಿ ಸತ್ಯೆ ವಾಸ್ತವ ಏನೆಂದು ಪರಿಶೀಲಿಸಿದೆ. ಜುಲೈ 25 ರಂದು ತನ್ನ ಕೆಫೆಯ ಮುಂದೆ ಈ ಘಟನೆ ನಡೆದಿದೆ ಎಂದು ಮಾಳವಿಯಾ ಖಚಿತಪಡಿಸಿದ್ದಾರೆ.

“ಮೂವರೂ ರೆಸ್ಟೋರೆಂಟ್ ಒಳಗೆ ಒಟ್ಟಿಗೆ ಉಪಹಾರ ಸೇವಿಸುತ್ತಿದ್ದರು” ಎಂದು ಮಾಳವಿಯಾ AFWA ಗೆ ತಿಳಿಸಿದ್ದಾರೆ. “ನಂತರ, ಮೂವರ ನಡುವೆ ಗಲಾಟೆ ಪ್ರಾರಂಭವಾಗಿದೆ ಆ ವ್ಯಕ್ತಿಯ ಮಾಜಿ ಗೆಳತಿ ಅವನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ಹೇಳಿರುವುದನ್ನು ನಾನು ಕೇಳಿದೆ. ಆ ವ್ಯಕ್ತಿ ಕೋಪಗೊಂಡು ಅವರಿಗೆ ಬೆದರಿಕೆ ಹಾಕಿ, ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಖಂಡಿತವಾಗಿಯೂ “ಲವ್ ಜಿಹಾದ್” ಅಲ್ಲ

ಘಟನೆಯ ನಂತರ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಳವಿಯಾ ಹೇಳಿದ್ದಾರೆ. ಆದರೆ, ವೀಡಿಯೊದಲ್ಲಿರುವ ಹಲ್ಲೆ ಮಾಡಲು ಮುಂದಾದ ವ್ಯಕ್ತಿ ಅಥವಾ ಯುವತಿ ಮುಸ್ಲಿಮರಲ್ಲ ಎಂದು ತಿಳಿಸಿದ್ದಾರೆ.

ಧೈನಿಕ್ ಭಾಸ್ಕರ್ ವರದಿಯ ಪ್ರಕಾರ, ವ್ಯಕ್ತಿಯ ಹೆಸರು ಪಿಯೂಷ್ ಅಲಿಯಾಸ್ ಶಾನು, ಭರತ್ ಸಿಂಗ್ ಕಚವಾ ಅವರ ಮಗ. ಇದನ್ನು ಮತ್ತಷ್ಟು ಖಚಿತಪಡಿಸಲು, AFWA ಇಂದೋರ್‌ನ MIG ಕಾಲೋನಿಯ SHO ಅಜಯ್ ವರ್ಮಾ ಅವರನ್ನು ಸಂಪರ್ಕಿಸಿದೆ. ಈ ಘಟನೆಗೆ ಯಾವುದೇ ಕೋಮು ದ್ವೇಷದ ಹಿನ್ನಲೆಯಿಲ್ಲ ಎಂದು ಪುನರುಚ್ಚರಿಸಿದ ವರ್ಮಾ, ಘಟನೆಗೆ ಸಂಬಂಧಿಸಿದ ಮೂವರು ಹಿಂದೂಗಳೆ ಎಂದು ಹೇಳಿದ್ದಾರೆ.

“ಪಿಯೂಷ್ ಎಂಬ ವ್ಯಕ್ತಿ ಈ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು, ಆದರೆ ಮಹಿಳೆ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಹೀಗಾಗಿ ಆ ವ್ಯಕ್ತಿ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಅದೇ ದಿನ ನಾವು ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂದು SHO ಅಜಯ್ ವರ್ಮಾ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಮದುವೆಯಾಗಲು ನಿರಾಕರಿಸಿದ ತನ್ನ ಪ್ರಿಯತಮೆಯನ್ನು ರೆಸ್ಟೋರೆಂಟ್ ಮುಂದೆಯೇ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದ ಘಟನೆಯನ್ನು ಕೋಮು ದ್ವೇಷದ ಸುಳ್ಳು ಪ್ರತಿಪಾದನೆಯೊಂದಿಗೆ  ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಘಟನೆಯಲ್ಲಿರುವ ಎಲ್ಲರೂ ಹಿಂದೂಗಳೇ,  ಹೀಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪರೀಕ್ಷೆಯಲ್ಲಿ ಪಾಸ್ ಮಾಡಲು ಮೌಲ್ಯಮಾಪಕನಿಗೆ ಲಂಚ ನೀಡಿದ ಹಳೆಯ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಹಿಂದೂ ಭಗ್ನ ಪ್ರೇಮಿಯ ರಂಪಾಟವನ್ನು ‘ಲವ್ ಜಿಹಾದ್‌’ ಎಂದು ತಪ್ಪಾಗಿ ಹಂಚಿಕೆ”

  • July 29, 2022 at 2:35 pm
    Permalink

    ಬಹಳಷ್ಟು ಪ್ರಯೋಜನಗಳಿವೆ ಈ fact ಚೆಕ್ನಿಂದ… ಧನ್ಯವಾದಗಳು ನಿಮ್ಮ ಈ ಸುದ್ದಿಗಳಿಗೆ…

    Reply

Leave a Reply

Your email address will not be published.

Verified by MonsterInsights