ಫ್ಯಾಕ್ಟ್‌ಚೆಕ್: ರೈಲಿನಲ್ಲಿ ಪ್ರಯಾಣಿಸುವ 5 ವರ್ಷದ ಮಕ್ಕಳಿಗೆ ಫುಲ್ ಟಿಕೆಟ್ ತೆಗೆದುಕೊಳ್ಳಬೇಕಿಲ್ಲ
ಒಂದು ಕಡೆ ರೈಲ್ವೆಯನ್ನು ಖಾಸಗಿ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟು, ಇನ್ನೊಂದು ಕಡೆ ರೈಲ್ವೆ ಪ್ರಯಾಣ ಶುಲ್ಕವನ್ನು ಏರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇನ್ನು ಮುಂದೆ ಇಂಡಿಯನ್ ರೈಲ್ವೆಯಲ್ಲಿ ಪ್ರಯಾಣಿಸುವ ನಿಮ್ಮ 5 ವರ್ಷದ ಮಗುವಿಗೂ ಫುಲ್ ಟಿಕೆಟ್ ಪಡೆಯಬೇಕು ಎಂಬ ಹೊಸ ನಿಯಮಾವಳಿಗಳನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ ಎಂದು ಹೇಳಲಾಗುತ್ತಿದೆ. 5 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ಪಡೆಯಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ಝೀ ನ್ಯೂಸ್ ಮತ್ತು ದೈನಿಕ್ ಜಾಗರಣ್‌ನಂತಹ ಮಾಧ್ಯಮಗಳು ತಮ್ಮ ವೆಬ್‌ಸೈಟ್‌ಗಳಲ್ಲಿ “IRCTC ತನ್ನ ಟಿಕೆಟ್ ಬುಕಿಂಗ್ ನಿಯಮಗಳನ್ನು ನವೀಕರಿಸಿದೆ, ಇದರ ಅಡಿಯಲ್ಲಿ 1-5 ವರ್ಷ ವಯಸ್ಸಿನ ಮಕ್ಕಳು ಸಹ ಪೂರ್ಣ ಟಿಕೆಟ್ ದರವನ್ನು ಪಾವತಿಸಬೇಕಾಗುತ್ತದೆ.” ಎಂದು ವರದಿ ಮಾಡಿವೆ.
अमृत महोत्सव के दौरान ही मोदी सरकार ने
गैंगरेप-हत्या के अपराधियों को जेल से रिहा करके समाज में खुला छोड़ दिया, दूध के दाम बढ़ा दिए, ट्रेन यात्रा में एक साल के बच्चे का भी टिकट लगा दिया, आटे को GST लगा के महंगा कर दिया ।
आजादी पर गर्व के साथ भाजपा सरकार पर शर्म भी जरूरी है । pic.twitter.com/kh2rQGkodD— Vaibhav Maheshwari • वैभव • ਵੈਭਵ (@Vaibhav_AAP) August 17, 2022

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಟ್ವಿಟ್ಟರ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ, “ಒಂದು ವರ್ಷದ ಮಕ್ಕಳಿಗೆ ಸಂಪೂರ್ಣ ರೈಲು ಟಿಕೆಟ್ ಶುಲ್ಕವನ್ನು ವಿಧಿಸಿದ ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ರೈಲು ಇನ್ನು ಮುಂದೆ ಬಡವರಿಗಾಗಿರುವುದಿಲ್ಲ” ಎಂದು ಹೇಳಿದ್ದಾರೆ. ಆದರೆ, ನಂತರ ಅವರು ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಐದು ವರ್ಷದೊಳಗಿನ ಮಕ್ಕಳ ಟಿಕೆಟ್‌ಗಳಿಗೆ ಭಾರತೀಯ ರೈಲ್ವೇ ಸಂಪೂರ್ಣ ದರವನ್ನು ವಿಧಿಸುತ್ತಿದೆ ಎಂದು ಆರೋಪಿಸಿ ಮಾಧ್ಯಮಗಳ ವರದಿ ಹಾಗೂ ರಾಹುಲ್ ಗಾಂಧಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಐದು ವರ್ಷದೊಳಗಿನ ಮಕ್ಕಳಿಗೆ ರೈಲಿನಲ್ಲಿ ಉಚಿತ ಪ್ರಯಾಣ ಅಲ್ಲವೇ? ಮಕ್ಕಳಿಗೂ ವಯಸ್ಕರಿಗೆ ಸಮನಾಗಿ ಪೂರ್ಣ ಟಿಕೆಟ್ ತೆಗೆದುಕೊಳ್ಳಬೇಕೇ? ಕೆಲವು ದಿನಗಳಿಂದ ಚರ್ಚೆಯಾಗುತ್ತಿರುವ ಈ ವಿಷಯದ ಕುರಿತು ಬುಧವಾರ ಭಾರತೀಯ ರೈಲ್ವೇ ಸ್ಪಷ್ಟನೆ ನೀಡಿದೆ. ಅಪ್ರಾಪ್ತ ಮಕ್ಕಳ ಟಿಕೆಟ್ ಬುಕ್ಕಿಂಗ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪೂರ್ಣ ಟಿಕೆಟ್ ಖರೀದಿಸಬೇಕು ಎಂಬ ಸುದ್ದಿ ಸುಳ್ಳು. ಯಾರೋ ಈ ರೀತಿಯ ತಪ್ಪು ಸಂದೇಶವನ್ನು ಹಬ್ಬಿಸಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
A report by @ZeeNews claims #IndianRailways passengers will now have to buy full ticket for kids below 5 years#PIBFactCheck
▶️It is optional in @RailMinIndia to buy ticket & book a berth for kids below 5 yrs
▶️Free travel is allowed for kids below 5 yrs, if no birth is booked pic.twitter.com/SxWjNxMA9V
— PIB Fact Check (@PIBFactCheck) August 17, 2022
2020ರ ಮಾರ್ಚ್ 6 ರಂದು ರೈಲ್ವೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಐದು ವರ್ಷದೊಳಗಿನ ಮಕ್ಕಳಿಗೆ ರೈಲು ಪ್ರಯಾಣ ಉಚಿತವಾಗಿದೆ. ಆದರೆ, ಇಲಾಖೆಯು ಈ ಸುತ್ತೋಲೆಯಲ್ಲಿ ವಿಶೇಷ ನಿಬಂಧನೆಯನ್ನು ಸೇರಿಸಿದೆ. ನೀವು ಐದು ವರ್ಷದೊಳಗಿನ ಮಕ್ಕಳಿಗೆ ವಿಶೇಷ ಬರ್ತ್ ಅಥವಾ ಆಸನವನ್ನು ಬಯಸಿದರೆ, ಸಂಪೂರ್ಣ ಶುಲ್ಕವನ್ನು ಪಾವತಿಸಿ ಟಿಕೆಟ್ ಪಡೆಯಬೇಕು. ಈ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಭಾರತೀಯ ರೈಲ್ವೆ ಬುಧವಾರ ಸ್ಪಷ್ಟಪಡಿಸಿದೆ.
No change in the rule related to booking of tickets for Children travelling in train
It is optional for passengers to buy ticket & book berth for children below 5 years
Free travel is allowed for children below 5 years, if no berth is booked
Read here: https://t.co/zSgh94i5MR
— PIB India (@PIB_India) August 17, 2022
‘ಈ ಸುದ್ದಿಯನ್ನು ಕೆಲವರು ತಪ್ಪುದಾರಿಗೆಳೆಯುವಂತೆ ಮಾಡಿದ್ದಾರೆ. ರೈಲ್ವೆ ಇಲಾಖೆ ಮಕ್ಕಳ ಪ್ರಯಾಣದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು PIB ಫ್ಯಾಕ್ಟ್‌ಚೆಕ್ ತಿಳಿಸಿದೆ. ಪ್ರಯಾಣಿಕರ ಬೇಡಿಕೆಯಂತೆ ಐದು ವರ್ಷದೊಳಗಿನ ಮಕ್ಕಳು ವಿಶೇಷ ಬರ್ತ್ ಅಥವಾ ಸೀಟು ಬೇಕಿದ್ದರೆ ಫುಲ್ ಟಿಕೆಟ್ ತೆಗೆದುಕೊಳ್ಳುವ ಅವಕಾಶವನ್ನು ರೈಲ್ವೆ ಇಲಾಖೆ ಕಲ್ಪಿಸಿದೆ. ಅವರಿಗೆ ಪ್ರತ್ಯೇಕ ಬರ್ತ್ ಅಗತ್ಯವಿಲ್ಲದಿದ್ದರೆ ಪ್ರಯಾಣ ಉಚಿತವಾಗಿದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ.
A report by Zee News claims Indian Railways passengers will now have to buy full ticket for kids below 5 years is misleading and incorrect.
It is optional to buy ticket & book a berth for kids below 5 yrs. Free travel is allowed for kids below 5 yrs, if no berth is booked. pic.twitter.com/hys4mYW2GE
— Western Railway (@WesternRly) August 17, 2022
ಭಾರತೀಯ ರೈಲ್ವೆ ಇತ್ತೀಚೆಗೆ ಲಕ್ನೋ ಮೇಲ್‌ನ ಎಸಿ 3ನೇ ಬೋಗಿಯಲ್ಲಿ ಬೇಬಿ ಬರ್ತ್‌ಗಳನ್ನು ಸೇರಿಸಿದೆ. ಇದು ನೆಟಿಜನ್‌ಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿತ್ತು. ರೈಲು ನಿಲ್ದಾಣಗಳಲ್ಲಿ ಐಆರ್‌ಸಿಟಿಸಿ ಮತ್ತು ರೈಲ್ವೆ ಮೀಸಲಾತಿ ಬೂತ್‌ಗಳಲ್ಲಿ ಟಿಕೆಟ್ ಕಾಯ್ದಿರಿಸುವಾಗ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೀಟು ನೀಡುವ ವ್ಯವಸ್ಥೆಯನ್ನು ರೈಲ್ವೈ ಈಗ ಜಾರಿಗೆ ತಂದಿದೆ. ಇದುವರೆಗೆ 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಟಿಕೆಟ್‌ಗೆ ಅವಕಾಶವಿತ್ತು.
ನೀವು 5ರಿಂದ 11 ವರ್ಷದೊಳಗಿನ ಮಗುವಿಗೆ ಪೂರ್ಣ ಬರ್ತ್ ತೆಗೆದುಕೊಳ್ಳುತ್ತಿದ್ದರೆ ಪೂರ್ಣ ಶುಲ್ಕ ಮಾತ್ರ ಪಾವತಿಸಬೇಕಾಗುತ್ತದೆ. ನೀವು ಪೂರ್ಣ ಬರ್ತ್ ತೆಗೆದುಕೊಳ್ಳದಿದ್ದರೆ ಟಿಕೆಟ್ ದರದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ರೈಲ್ವೆ ಟಿಕೆಟ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
Please do not pay heed to rumours.https://t.co/NyRPhF6qG8 pic.twitter.com/9BhemjFWVH
— North Central Railway (@CPRONCR) August 17, 2022
ಇತ್ತೀಚೆಗಷ್ಟೇ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಫುಲ್ ಟಿಕೆಟ್ ಕಡ್ಡಾಯ ಎಂಬ ಸುದ್ದಿ ಬಂದಾಗ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ರೈಲಿನಲ್ಲಿ ಪ್ರಯಾಣಿಸುವ ವಿಚಾರದಲ್ಲೂ ಬಿಜೆಪಿ ಸರ್ಕಾರ ವಸೂಲಿ ಮಾಡುತ್ತಿದೆ ಎಂದು ಹೇಳಿದ್ದರು. ಗರ್ಭಿಣಿಯರಿಂದ ಹೆಚ್ಚುವರಿ ಟಿಕೆಟ್ ಕೇಳದ್ದಕ್ಕೆ ನಾವು ಭಾರತೀಯ ರೈಲ್ವೆಗೆ ಧನ್ಯವಾದ ಹೇಳಬೇಕು. ಬಿಜೆಪಿ ಸರ್ಕಾರ ಬಡವರಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಮಕ್ಕಳ ಟಿಕೆಟ್ ಗಳ ಬಗ್ಗೆ ಸ್ಪಷ್ಟನೆ ನೀಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದಕ್ಕೆ ತೇಜಸ್ವಿ ಯಾದವ್ ಕುಣಿದದ್ದು ನಿಜವೇ?

