ಫ್ಯಾಕ್ಟ್‌ಚೆಕ್: ನಟ ಮಾಧವನ್ ಸಿನಿಮಾ ನಿರ್ದೇಶನಕ್ಕಾಗಿ ಮನೆ ಮಾರಿದ್ದು ನಿಜವೇ?

ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನ ಕಥೆಯನ್ನು ಆಧರಿಸಿ ʻರಾಕೆಟ್ರಿ: ದಿ ನಂಬಿ ಎಫೆಕ್ಟ್ʼ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಲ್ಲದೆ ಆ ಸಿನಿಮಾವನ್ನು ಮಾಧವನ್‌ ನಿರ್ದೇಶಿಸಿದ್ದಾರೆ ಕೂಡ. ಇದೀಗ ಈ ಸಿನಿಮಾ ಮಾಡಲು ಮಾಧವನ್‌ ತಮ್ಮ ಮನೆ ಮಾರಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ನಟ ಮಾಧವನ್ ʻರಾಕೆಟ್ರಿ’ ಸಿನಿಮಾದಿಂದ ತಮ್ಮ ಮನೆ ಕಳೆದುಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ʻರಾಕೆಟ್ರಿ: ದಿ ನಂಬಿ ಎಫೆಕ್ಟ್ʼ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಲ್ಲದೆ ಆ ಸಿನಿಮಾವನ್ನು ಮಾಧವನ್‌ ನಿರ್ದೇಶಿಸಿದ್ದಾರೆ ಕೂಡ. ಇದೀಗ ಈ ಸಿನಿಮಾ ಮಾಡಲು ಮಾಧವನ್‌ ತಮ್ಮ ಮನೆ ಮಾರಿಕೊಂಡಿದ್ದಾರೆ ಎಂದು ಹಬ್ಬಿದ್ದ ಊಹಾಪೋಹಗಳಿಗೆ ನಟ ತೆರೆ ಎಳೆದಿದ್ದಾರೆ.  ವಾಸ್ತವವಾಗಿ ಮಾಧವನ್ ಮೊದಲು ರಾಕೆಟ್ರಿ ನಿರ್ದೇಶಕರಲ್ಲ, ಬೇರೊಬ್ಬ ಡೈರೆಕ್ಟರ್ ಈ ಸಿನಿಮಾವನ್ನು ನಿರ್ದೇಶಿಸಬೇಕಿತ್ತು. ಅನೇಕ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಖ್ಯಾತ ನಿರ್ದೇಶಕರೊಬ್ಬರು ರಾಕೆಟ್ರಿ ಸಿನಿಮಾದಿಂದ ದೂರ ಉಳಿದರು. ಬೇರೆ ದಾರಿಯಿಲ್ಲದೆ ಮಾಧವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೀಗ ವೈರಲ್‌ ಆಗುತ್ತಿರುವ ಈ ಸುದ್ದಿ ಕುರಿತು ಮಾಧವನ್‌ ಟ್ವೀಟ್‌ ಮೂಲಕ ಸ್ಪಷ್ಟತೆ ನೀಡಿದ್ದಾರೆ.

ʻದಯವಿಟ್ಟು ನಾನೇನೋ ದೊಡ್ಡ ತ್ಯಾಗ ಮಾಡಿದ್ದೀನಿ ಅಂತ ನನ್ನನ್ನು ಆಕಾಶಕ್ಕೆ ಏರಿಸಬೇಡಿ. ಏಕೆಂದರೆ ನಾನು ನನ್ನ ಮನೆಯಲ್ಲ, ಏನನ್ನೂ ಕಳೆದುಕೊಂಡಿಲ್ಲ. ದೇವರ ದಯೆಯಿಂದ ರಾಕೆಟ್ರಿ ಸಿನಿಮಾದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಈ ವರ್ಷ ಹೆಚ್ಚಿನ ಆದಾಯ ತೆರಿಗೆ ಪಾವತಿಸಲಿದ್ದಾರೆ. ಅಂತಹ ದೊಡ್ಡ ಮತ್ತು ಹೆಮ್ಮೆ ಪಡುವ ಲಾಭ ಬಂದಿದೆ. ನಾನು ಇನ್ನೂ ನನ್ನ ಮನೆಯನ್ನು ಪ್ರೀತಿಸುತ್ತೇನೆ, ಅದರಲ್ಲಿಯೇ ವಾಸಿಸುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವಂತೆ ʻರಾಕೆಟ್ರಿ’ ಸಿನಿಮಾದಿಂದ ನಟ ಮಾಧವನ್ ಅವರು  ತಮ್ಮ ಮನೆ ಮಾರಿಕೊಂಡಿಲ್ಲ. ಇದನ್ನ ಸ್ವತಃ ಮಾಧವನ್ ಅವರೇ ಸ್ಪಷ್ಟನೆ ನೀಡಿದ್ದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕೃಪೆ: ಬೂಮ್‌ಲೈವ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಕೇಕ್‌ ಪ್ಯಾಕೆಟ್‌ನಲ್ಲಿ ಮಾತ್ರೆಗಳಿದ್ದವೆ? ತಿಂದರೆ ಮಕ್ಕಳಿಗೆ ಪಾರ್ಶ್ವವಾಯು ತಗುಲುವುದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights