ಫ್ಯಾಕ್ಟ್‌ಚೆಕ್: ಜನರ ಕಿವಿಯಲ್ಲಿ ಜೋರಾಗಿ ಪಿಪಿ ಊದುತ್ತಿದ್ದ ಪುಂಡರಿಗೆ ತಕ್ಕ ಪಾಠ ಕಲಿಸಿದ ಪೊಲೀಸರು! ಈ ಘಟನೆ ಎಲ್ಲಿಯದು ?

ಇಬ್ಬರು ಹುಡುಗರನ್ನು ಹಿಡಿದಿರುವ ಪೊಲೀಸರು ಹುಡುಗರ ಕಿವಿಯಲ್ಲಿ ಪರಸ್ಪರ ಪಿಪಿ ಊದಿಸುತ್ತಿರುವ ವಿಡಿಯೋ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಳ್ಳಲಾಗುತ್ತಿದೆ.

ನಡೆದು ಹೋಗುತ್ತಿದ್ದ ಜನರ ಕಿವಿಯ ಬಳಿ ಜೋರಾಗಿ ಶಬ್ದ ಮಾಡುತ್ತಿದ್ದ  ಪುಂಡರನ್ನು ಹಿಡಿದು ಅವರಿಗೆ ತಕ್ಕ ಪಾಠ ಕಲಿಸಲು ಈ ರೀತಿ ಮಾಡಲಾಗಿದೆ ಎಂದು ಪೋಸ್ಟ್ ನಲ್ಲಿಹೇಳಲಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವಿಡಿಯೋ ಪೋಸ್ಟ್‌ನ ಕ್ಲೂ ತೆಗೆದುಕೊಂಡು ಗೂಗಲ್ ಸರ್ಚ್ ಮಾಡಿದಾಗ, ಈ ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳು ಲಭ್ಯವಾಗಿದೆ. ದೈನಿಕ್ ಭಾಸ್ಕರ್ ಮತ್ತು ನ್ಯೂಸ್ 18 ರ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ವರದಿಯ ಪ್ರಕಾರ, ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಜನರ ಕಿವಿಯ ಬಳಿ ಜೋರಾಗಿ ಪುಂಗಿ ಊದುವ ಮೂಲಕ ತೊಂದರೆ ನೀಡುತ್ತಿದ್ದ ಕೆಲವು ಕಿಡಿಗೇಡಿ ಯುವಕರನ್ನು ಹಿಡಿದ ಜಬಲ್‌ಪುರ ಪೊಲೀಸರು ಪರಸ್ಪರ ಯುವಕರ ಕಿವಿಯಲ್ಲಿ ಪುಂಗಿ ನುಡಿಸುವಂತೆ ಹೇಳಿ ಪಿಪಿ ಊದಿಸಿ ಪಾಠ ಕಲಿಸಿದ್ದಾರೆ. ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

ಈಟಿವಿ ಭಾರತ್ ಮತ್ತು ಎಬಿಪಿ ಲೈವ್ ಕೂಡ ಈ ಘಟನೆಯನ್ನು ವರದಿ ಮಾಡಿದ್ದು, ಅದನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಈ ಘಟನೆ ನಡೆದಿರುವುದು ಜಬಲ್ಪುರ್ ಮಧ್ಯಪ್ರದೇಶದಲ್ಲಿದೆ ಮತ್ತು ಉತ್ತರ ಪ್ರದೇಶದಲ್ಲಿ ಅಲ್ಲ.

ಒಟ್ಟಾರೆ ಹೇಳುವುದಾದರೆ, ಯುವಕರ ಕಿವಿಯಲ್ಲಿ ಪೊಲೀಸರು ಪುಂಗಿ (ಗಾಳಿ ವಾದ್ಯ) ನುಡಿಸುವ ಈ ವಿಡಿಯೋ ಮಧ್ಯಪ್ರದೇಶದ್ದು. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ದಸರಾ ಆಚರಣೆ ವೇಳೆ ಈ ಘಟನೆ ನಡೆದಿದೆ. ದೈನಿಕ್ ಭಾಸ್ಕರ್ ಅವರ ಪ್ರಕಾರ, ಜಬಲ್‌ಪುರ ಪೊಲೀಸರು ನವರಾತ್ರಿ ಉತ್ಸವದ ಸಮಯದಲ್ಲಿ ಕಿಡಿಗೇಡಿಗಳು ಸೃಷ್ಟಿಸಿದ ಅನಾಹುತ ಮತ್ತು ಗಲಾಟೆಗಳ ವಿರುದ್ಧ ವಿಶೇಷ ಅಭಿಯಾನವನ್ನು ನಡೆಸುತ್ತಿದ್ದಾಗ, ಗಲಭೆಕೋರರು ಇನ್ನು ಮುಂದೆ ಇಂತಹ ಕೃತ್ಯವನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಾವೊಂದು ನಿಧಿ ಕಾಯುತ್ತಿರುವ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights