ಫ್ಯಾಕ್ಟ್‌ಚೆಕ್: ಹಣೆಯಲ್ಲಿ ಶಿವನ ಹಚ್ಚೆಯೊಂದಿಗೆ ಆರು ಕಾಲುಗಳ ಮಗು ಜನಿಸಿದ್ದು ನಿಜವೇ?

ಹುಟ್ಟುವಾಗಲೇ ಆರು ಕಾಲುಗಳು, ಹಣೆಯ ಮೇಲೆ ಶಿವನ ಹಚ್ಚೆಯನ್ನು ತೋರುತ್ತ ಜನಿಸಿರುವ ಪವಾಡದ ಮಗುವಿನ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಅಪರೂಪದ ಮಗುವಿನ ಬಗ್ಗೆ ಹಂಚಿಕೊಳ್ಳಲಾಗಿರುವ ಪೋಸ್ಟ್‌ ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 18 ಏಪ್ರಿಲ್ 2022 ರಂದು ‘ಫಸ್ಟ್ ಪೋಸ್ಟ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಆರು ಕಾಲುಗಳೊಂದಿಗೆ ಜನಿಸಿದ ಮಗುವಿನ ಅದೇ ಫೋಟೋ ಕಂಡುಬಂದಿದೆ. ಆದರೆ ಲೇಖನದಲ್ಲಿ ಹಂಚಿಕೊಂಡ ಮೂಲ ಫೋಟೋದಲ್ಲಿರುವ ಮಗುವಿನ ಹಣೆಯ ಮೇಲೆ ಶಿವನ ಚಿಹ್ನೆ ಇಲ್ಲ. ಪಾಕಿಸ್ತಾನದ ಸುಕ್ಕೂರ್‌ನಲ್ಲಿ ಆರು ಕಾಲುಗಳೊಂದಿಗೆ ಜನಿಸಿದ ಗಂಡು ಮಗುವಿನ ಚಿತ್ರ ಎಂದು ‘ಫಸ್ಟ್ ಪೋಸ್ಟ್’ ವರದಿ ಮಾಡಿದೆ. ಮಗುವನ್ನು 16 ಏಪ್ರಿಲ್ 2012 ರಂದು ಕರಾಚಿಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (NICH) ಗೆ ಶಸ್ತ್ರಚಿಕಿತ್ಸೆಗಾಗಿ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

‘ಡಾನ್‘ ಮತ್ತು ‘ಹಫ್‌ಪೋಸ್ಟ್‘ ಪ್ರಕಟಿಸಿದ ಕೆಲವು ಸುದ್ದಿ ವರದಿಗಳ ಪ್ರಕಾರ, ಐದು ತಜ್ಞ ವೈದ್ಯರ ತಂಡವು ಮಗುವಿನಿಂದ ಹೆಚ್ಚುವರಿ ಕಾಲುಗಳು ಅಥವಾ ಕೆಳಗಿನ ಅಂಗಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದೆ. ಆಗಿನ NICH ನಿರ್ದೇಶಕ ಜಮಾಲ್ ರಜಾ ಮಾಧ್ಯಮಗಳೊಂದಿಗೆ ಮಾತನಾಡಿ, ಹೆಚ್ಚುವರಿ ಕೈಕಾಲುಗಳು ಮತ್ತು ಕಾಲುಗಳು ಆನುವಂಶಿಕ ಕಾಯಿಲೆಯ ಪರಿಣಾಮವಾಗಿದೆ, ಇಂತಹ ಮಕ್ಕಳು ಜನಿಸುವುದು ತೀರ ವಿರಳ, ಬಿಲಿಯನ್‌ಗಳಲ್ಲಿ ಒಬ್ಬರು ಈ ರೀತಿ ಜನಿಸುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಸೂಪರ್‌ನ್ಯೂಮರರಿ ಅಂಗಗಳು ಪಾಲಿಮೆಲಿಯಾ ಎಂಬ ಜನ್ಮಜಾತ ವೈಪರೀತ್ಯದ ಪರಿಣಾಮವಾಗಿದೆ ಎಂದು ಡಾ.ರಾಜಾ ಹೇಳಿದರು. ಪಾಲಿಮೆಲಿಯಾಕ್ಕೆ ಸಂಬಂಧಿಸಿದಂತೆ ಪ್ರಕಟವಾದ NCBI ಜರ್ನಲ್ ಅನ್ನು ಇಲ್ಲಿ ನೋಡಬಹುದು. ಪ್ರಾರಂಭದಲ್ಲಿ ತಾಯಿಯನ್ನು ಪರೀಕ್ಷಿಸಿದಾಗ ಅವಳಿ ಭ್ರೂಣಗಳು ಕಾಣಿಸಿಕೊಂಡಿದ್ದವು, ಆದರೆ ನಂತರ ಅವಳಿಗಳಲ್ಲಿ ಒಂದು ಬೆಳವಣಿಗೆಯನ್ನು ನಿಲ್ಲಿಸಿತು ಮತ್ತು ಭ್ರೂಣಕ್ಕೆ ಅಂಟಿಕೊಂಡಿರುವ ಅದರ ಕಾಲುಗಳನ್ನು ಹೊರತುಪಡಿಸಿ ವಿಭಜನೆಯಾಯಿತು ಎಂದು ರಾಝಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಜುಲೈ 2022 ರಲ್ಲಿ, ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದರು. ದೊಡ್ಡ ಜನಸಮೂಹವು ಮಗುವನ್ನು ವೀಕ್ಷಿಸಲು ನೆರೆದಿತ್ತು ಮತ್ತು ಮಗುವನ್ನು ‘ಪ್ರಕೃತಿಯ ಪವಾಡ’ ಮತ್ತು ದೇವರ ಪುನರ್ಜನ್ಮದ ಎಂದು ಉಲ್ಲೇಖಿಸಿತು. ಆದರೆ ಹಲವಾರು ಅಂತರರಾಷ್ಟ್ರೀಯ ಸುದ್ದಿ ವೆಬ್‌ಸೈಟ್‌ಗಳು ಇದು ಪಾಲಿಮೆಲಿಯಾ ಪ್ರಕರಣವಾಗಿರಬಹುದು ಎಂದು ವರದಿ ಮಾಡಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಎಡಿಟ್ ಮಾಡಲಾಗಿದೆ. ಮೂಲ ಫೋಟೋದಲ್ಲಿ ಮಗುವಿನ ಹಣೆಯ ಮೇಲೆ ಶಿವನ ಹಚ್ಚೆ ಇಲ್ಲ. ಫೋಟೋದಲ್ಲಿರುವ ಮಗು ಪಾಕಿಸ್ತಾನದಲ್ಲಿ ಜನಿಸಿದ್ದು, ಪಾಲಿಮೆಲಿಯಾ ಎಂಬ ಅಪರೂಪದ ಆನುವಂಶಿಕ ಕಾರಣಕ್ಕೆ ಈ ರೀತಿ ಜನಿಸಿದೆ. ಕರಾಚಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (NICH) ಯ ಐವರು ವೈದ್ಯರ ತಂಡವು 2012 ರಲ್ಲಿ ಮಗುವಿನಿಂದ ಹೆಚ್ಚುವರಿ ಕಾಲುಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅನುವಂಶಿಕ ಖಾಯಿಲೆಯಿಂದ ಜನಿಸಿದ ಪಾಕಿಸ್ತಾನಿ ಮಗುವಿನ ಎಡಿಟ್ ಮಾಡಿದ ಫೋಟೋವನ್ನು ಹಣೆಯ ಮೇಲೆ ಶಿವನ ಚಿಹ್ನೆಯೊಂದಿಗೆ ಜನಿಸಿದ ಪವಾಡ ಮಗು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೂರು ಹೆಡೆ ಸರ್ಪ ಇರುವುದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights