ಫ್ಯಾಕ್ಟ್‌ಚೆಕ್: ಪಾಕ್ ವಿರುದ್ದ ಜಿಂಬಾಬ್ವೆ ಜಯಗಳಿಸಿದಾಗ ‘ಜೈ ಶ್ರೀ ರಾಮ್ ಬೋಲೇಗಾ’ ಹಾಡಿಗೆ ನೃತ್ಯ ಮಾಡಿದ್ದು ನಿಜವೇ?

ಜಿಂಬಾಬ್ವೆ ಕ್ರಿಕೆಟ್ ತಂಡದ ಆಟಗಾರರು ಪಾಕ್ ತಂಡದ ವಿರುದ್ದ ರೋಚಕ ಜಯಗಳಿಸಿದ ಹಿನ್ನಲೆಯಲ್ಲಿ ಹಿಂದಿ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಭಾರತ್ ಕಾ ಬಚ್ಚಾ ಬಚ್ಚಾ, ಜೈ ಶ್ರೀ ರಾಮ್ ಬೋಲೇಗಾ’ ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಈ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಜಿಂಬಾಬ್ವೆಯ ತಂಡದ ಆಟಗಾರರು ಈ ಹಾಡಿಗೆ ನೃತ್ಯ ಮಾಡುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದು ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಕಳೆದ ವಾರ 28 ಅಕ್ಟೋಬರ್ 2022ರಂದು ಪಾಕ್ ಮತ್ತು ಜಿಂಬಾಬ್ವೆ ನಡುವೆ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕ್ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ ವೇಳೆ ಜಿಂಬಾಬ್ವೆ ಕ್ರಿಕೆಟ್ ತಂಡದ ಆಟಗಾರರು ಕ್ರೀಡಾಂಗಣದಲ್ಲಿ ಹಾಡುವ ಮತ್ತು ನೃತ್ಯ ಮಾಡುವ ಮೂಲಕ ತಮ್ಮ ಗೆಲುವನ್ನು ಸಂಭ್ರಮಿಸಿದ್ದರು.

https://twitter.com/ZimCricketv/status/1585711758412369920?

ಈ ಸಂಭ್ರಮಾಚರಣೆಯ ವೀಡಿಯೊವನ್ನು ಜಿಂಬಾಬ್ವೆ ಕ್ರಿಕೆಟ್ ತಂಡದ ಅಧಿಕೃತ ಟ್ವಿಟರ್ ಹ್ಯಾಂಡಲ್ @ZimCricketv ಟ್ವೀಟ್ ಮಾಡಿದ್ದಾರೆ. ಪೋಸ್ಟ್‌ನ ವಿವರಣೆಯು ‘ಇನ್ನೊಂದು ಸೊಗಸಾದ ಪ್ರದರ್ಶನವನ್ನು ಆಚರಿಸುತ್ತಿದೆ ಎಂದು ಹಂಚಿಕೊಂಡಿದೆ.

ವೈರಲ್ ವಿಡಿಯೋದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ಆಟಗಾರರು ಹಾಡುತ್ತ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಕ್ಲಿಪ್‌ನಲ್ಲಿ  0:42 ರಿಂದ 0:56ರ ಅವಧಿಯವರೆಗೆ ಒಳಗೊಂಡಿದೆ. ಆಟಗಾರರು ಹಾಡುವುದು, ಹರ್ಷೋದ್ಗಾರ ಮತ್ತು ಚಪ್ಪಾಳೆ ತಟ್ಟುವುದನ್ನು ಕೇಳಬಹುದಾದ ಮೂಲ ಕ್ಲಿಪ್‌ನ ಆಡಿಯೊವನ್ನು ಕೇಳಿದಾಗ ವಾಸ್ತವವಾಗಿ ಅದು  ‘ಭಾರತ್ ಕಾ ಬಚ್ಚಾ ಬಚ್ಚಾ, ಜೈ ಶ್ರೀ ರಾಮ್ ಬೋಲೇಗಾ’  ಎಂಬ ಹಾಡಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ತಂಡದ ಗೆಲುವಿನ ನಂತರ ಮೂಲ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಮೂಲ ಕ್ಲಿಪ್‌ನಲ್ಲಿ, ಜಿಂಬಾಬ್ವೆ ಕ್ರಿಕೆಟ್ ತಂಡದ ಆಟಗಾರರು ಕ್ರೀಡಾಂಗಣದಲ್ಲಿ ಹಾಡುತ್ತ ನೃತ್ಯ ಮಾಡುವ ಮೂಲಕ ತಮ್ಮ ಗೆಲುವನ್ನು ಸಂಭ್ರಮಿಸಿದ್ದಾರೆ.

ಮೂಲ ವೀಡಿಯೊದ ಆಡಿಯೊವನ್ನು ‘ಭಾರತ್ ಕಾ ಬಚ್ಚಾ ಬಚ್ಚಾ, ಜೈ ಶ್ರೀ ರಾಮ್ ಬೋಲೆಗಾ’ ಹಾಡಿನೊಂದಿಗೆ ಬದಲಾಯಿಸುವ ಮೂಲಕ ವೈರಲ್ ವೀಡಿಯೊವನ್ನು ರಚಿಸಲಾಗಿದೆ. ಪಾಕ್ ತಂಡದ ವಿರುದ್ದ ಪಂದ್ಯವಾದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ಪಾಕ್‌ ತಂಡವನ್ನು ಗೇಲಿ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಒಮ್ಮೆಲೆ 15 ಚಿತ್ರಗಳನ್ನು ಬಿಡಿಸಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights