ಫ್ಯಾಕ್ಟ್‌ಚೆಕ್: ಭಾರತ ಮತ್ತು ಚೀನಾ ನಡುವೆ ನಡೆದ ತವಾಂಗ್ ಘರ್ಷಣೆಯ ವಿಡಿಯೊ ಎಂದು 2 ವರ್ಷದ ಹಳೆಯ ವಿಡಿಯೊ ಹಂಚಿಕೆ

ಡಿಸೆಂಬರ್ 9, 2022 ರಂದು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ, ಎರಡೂ ದೇಶಗಳ ಸೈನಿಕರು ಗಾಯಗೊಂಡಿದ್ದಾರೆ. ಈ ಘಟನೆಯ ಸುದ್ದಿ ಬಂದ ನಂತರ, ಸೈನಿಕರ ಘರ್ಷಣೆಯ ವಿಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ತವಾಂಗ್ ಸೆಕ್ಟರ್‌ನಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯ ವಿಡಿಯೋ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತದ ಸೈನಿಕರು ಮತ್ತೆ ಕೆಚ್ಚೆದೆಯ ಹೋರಾಟ ನಡೆಸಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೇ ಇದ್ದರೂ ಆಕ್ರಮಣಕಾರಿ ಹೋರಾಟ ಮಾಡಿ ಚೀನಿ ಸೈನಿಕರನ್ನು ನಮ್ಮ ಹೆಮ್ಮೆಯ ಯೋಧರು ಓಡಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೂರು ವಿಡಿಯೊಗಳನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಯೋಧರ ಸಾಹಸಕ್ಕೆ ಓಡಿ ಹೋದ ಚೀನಾ ಸೈನಿಕರು. ಇದು ನಮ್ಮ ಭಾರತೀಯ ಸೈನಿಕ ಇರುವ ಶಕ್ತಿ ಎಂದು ಪ್ರತಿಪಾದಿಸಿ ಚೀನಾ ಹಾಗೂ ಭಾರತೀಯ ಸೇನೆ ನಡುವೆ ನಡೆದ ಸಂಘರ್ಷ ಎಂದು ಹಿಮದಿಂದ ಆವೃತವಾದ ಸ್ಥಳದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಕಾದಾಟದ ದೃಶ್ಯಗಳು ಎಂದು ಮತ್ತೊಂದು ವೀಡಿಯೊದಲ್ಲಿ, ತಲೆಗೆ ಗಂಭೀರ ಗಾಯವಾಗಿರುವ ಚೀನಾದ ಸೈನಿಕನನ್ನು ನಾವು ನೋಡಬಹುದು. ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಾಗಿದ್ದರೆ ಈಗ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ವಿಡಿಯೊ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯಗಳನ್ನು, ಯಾವ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಡಿಸೆಂಬರ್ 9ರಂದು  ನಡೆದ ಘರ್ಷಣೆಯ ವಿಡಿಯೋ ಎಂಬುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊ :1

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚೀನಾ ಹಾಗೂ ಭಾರತೀಯ ಸೇನೆ ನಡುವೆ ನಡೆದ ಸಂಘರ್ಷದ ವಿಡಿಯೊ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿರುವ ವಿಡಿಯೋಗಳಲ್ಲಿಒಂದೊಂದು ವಿಡಿಯೋಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 22, 2020 ರಂದು NDTV ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಭಾರತ ಮತ್ತು ಚೀನಾ ಸೈನಿಕರು ಒಬ್ಬರನ್ನೊಬ್ಬರು ದೂಡಿಕೊಂಡು ಕೂಗಾಡುತ್ತಿರುವ ದೃಶ್ಯ ಎಂದು ಉಲ್ಲೇಖಿಸಿದೆ.  “ವಾಪಸ್ಸಾಗಿ , ಗಲಾಟೆ ಮಾಡಬೇಡಿ” ಎಂದು ಹೇಳುವುದನ್ನು ಕೇಳಬಹುದು. ಮಾಧ್ಯಮ ವರದಿಗಳ ಪ್ರಕಾರ, ವೀಡಿಯೊ ಲಡಾಖ್‌ನ ಸಿಕ್ಕಿಂನಿಂದ ಬಂದಿದೆ ಸೇನೆಯ ಮೂಲಗಳು ದೃಢಪಡಿಸಿದೆ.

 

2020ರಲ್ಲಿ ಲಡಾಖ್‌ನ ಪೆಂಗಾಂಗ್ ಸರೋವರದ ಬಳಿ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು.  ಈ ಕಾರಣದಿಂದಾಗಿ ಉಭಯ ದೇಶಗಳ ನಡುವೆ ‘ಫೇಸ್‌ಆಫ್’ ಸನ್ನಿವೇಶ ಸೃಷ್ಟಿಯಾಯಿತು. ನಂತರ ಎರಡೂ ದೇಶಗಳ ಬ್ರಿಗೇಡಿಯರ್ ಮಟ್ಟದ ಸಂವಾದದ ಬಳಿಕ ವಿಷಯವನ್ನು ಬಗೆಹರಿಸಲಾಗಿತ್ತು.

ವಿಡಿಯೊ:2  ಗಾಯಗೊಂಡ ಸೈನಿಕನಿಗೆ ಶುಶ್ರೂಷೆ ಮಾಡುತ್ತಿರುವ ಚೀನಾ ಸೈನಿಕರು

ಎರಡನೇ ವೀಡಿಯೊದಲ್ಲಿ ತೀವ್ರವಾಗಿ ಗಾಯಗೊಂಡ ಸೈನಿಕನನ್ನು ಚೀನಾದ ಸೈನಿಕರು ಆರೈಕೆ ಮಾಡುತ್ತಿರುವುದನ್ನು ತೋರಿಸುತ್ತದೆ. ಈ  ವಿಡಿಯೊ ಕಳೆದ ಫೆಬ್ರವರಿ 2021 ರಿಂದ ಇಂಟರ್ನೆಟ್‌ನಲ್ಲಿ ಪ್ರಸಾರವಾಗುತ್ತಿದೆ.

ಭಾರತ ಮತ್ತು ಚೀನಾ ಸೇನೆಗಳ ನಡುವೆ ಲಡಾಖ್‌ನಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಉಭಯ ದೇಶಗಳ ಸೈನಿಕರು ಹತರಾಗಿದ್ದರು. ಕೆಲವು ತಿಂಗಳ ನಂತರ ಈ ವೀಡಿಯೊವನ್ನು ಚೀನಾ ಸರ್ಕಾರದ ಅಂಗಸಂಸ್ಥೆ ಚಾನೆಲ್ ಚೈನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) 2021 ರಲ್ಲಿ ಈ ವೀಡಿಯೊವನ್ನು ಗಾಲ್ವಾನ್‌ನಿಂದ ಎಂದು ಹೇಳಿಕೊಂಡು ಪ್ರಕಟಿಸಿದೆ. ಈ ಘರ್ಷಣೆಯು 45 ವರ್ಷಗಳಲ್ಲಿ ಅತ್ಯಂತ ಭೀಕರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಡಿಯೊ: 3

ಭಾರತೀಯ ಸೇನೆ ಮತ್ತು ಚೀನಾ ಸೇನಾ ಪಡೆಗಳ ನಡುವೆ ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಡಿಸೆಂಬರ್ 9ರಂದು ನಡೆದ ಹೊಸ ಸಂಘರ್ಷ, ಎರಡೂ ದೇಶಗಳ ಗಡಿ ಬಿಕ್ಕಟ್ಟನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಸುಮಾರು 200ಕ್ಕೂ ಅಧಿಕ ಚೀನೀ ಸೈನಿಕರು ಮುಳ್ಳುತಂತಿ ಸುತ್ತಿದ ದೊಣ್ಣೆ ಹಾಗೂ ಬಡಿಗೆಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಇಲ್ಲಿ ನೋಡಬಹುದು. ಆದರೆ ಈ ವಿಡಿಯೋ ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ನಡೆದ ಘಟನೆಯದ್ದೆ ಎಂಬುದಕ್ಕೆ ಯಾವುದೇ ಅಧಿಕೃತ ಆಧಾರಗಳಿಲ್ಲ.

ಎರಡೂ ಕಡೆಯ ಸೈನಿಕರಿಗೆ ಹೊಡೆದಾಟದಲ್ಲಿ ಗಾಯಗಳಾಗಿವೆ. 2020ರಲ್ಲಿ ನಡೆದ ಗಲ್ವಾನ್ ಕಣಿವೆಯ ಸಂಘರ್ಷದ ರೀತಿಯಲ್ಲಿಯೇ ಈ ಸಂಘರ್ಷ ನಡೆದಿದೆ. ಆದರೆ ಎರಡೂ ಕಡೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಚೀನೀಯರ ತಂಟೆಗೆ ಭಾರತೀಯ ಸೈನಿಕರು ಪ್ರತ್ಯುತ್ತರ ನೀಡಿದ್ದು, ಚೀನೀ ಪಡೆಯಲ್ಲಿ ಹೆಚ್ಚಿನವರಿಗೆ ಗಾಯಗಳಾಗಿವೆ. ಘರ್ಷಣೆಯಲ್ಲಿ ಗಾಯಗೊಂಡ ಕನಿಷ್ಠ ಆರು ಮಂದಿ ಭಾರತೀಯ ಯೋಧರನ್ನು ಗುವಾಹಟಿಗೆ ಚಿಕಿತ್ಸೆಗೆಂದು ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.

17,000 ಅಡಿ ಎತ್ತರದ ಬೆಟ್ಟ ಪ್ರದೇಶವನ್ನು ಅತಿಕ್ರಮಿಸಲು 300ಕ್ಕೂ ಹೆಚ್ಚಿ ಚೀನೀ ಸೈನಿಕರು ಪ್ರಯತ್ನಿಸಿದ್ದರು. ಇದಕ್ಕೆ ಭಾರತೀಯ ಸೇನಾ ಪಡೆಯ ಯೋಧರು ತಕ್ಕ ಪ್ರತಿರೋಧ ಒಡ್ಡಿದ್ದಾರೆ. ಈ ಪ್ರದೇಶ ಪ್ರಸ್ತುತ ಹಿಮಾವೃತವಾಗಿದೆ. ಅಲ್ಲಿನ ಭಾರತೀಯ ಸೇನಾ ನೆಲೆಯನ್ನು ಕಿತ್ತುಹಾಕಲು ಚೀನೀಯರು ಉದ್ದೇಶಿಸಿದ್ದರು. ಆದರೆ ಯೋಧರು ಅದನ್ನು ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ. ಎರಡೂ ಕಡೆಯ ಸೈನಿಕರು ಕೂಡಲೇ ಆ ಪ್ರದೇಶದಿಂದ ದೂರ ಸರಿದಿದ್ದಾರೆ ಎಂದು ವರದಿಯಾಗಿದೆ.

ಡಿಸೆಂಬರ್ 13 ರಂದು ಲೋಕಸಭೆಯಲ್ಲಿ ಈ ವಿಷಯದ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, LAC ಮೇಲಿನ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನವನ್ನು ಭಾರತೀಯ ಸೇನೆಯು ಹಿಮ್ಮೆಟ್ಟಿಸಿದೆ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರನ್ನು ಅವರ ಗಡಿಗೆ ಮರಳುವಂತೆ ಮಾಡಿದೆ ಎಂದು ಹೇಳಿದ್ದಾರೆ. ಘರ್ಷಣೆಯಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ಪ್ರಾಣಾಪಯವಾಗಲಿ ಮತ್ತು ಗಂಭೀರವಾಗಿ ಗಾಯವಾಗಲಿ ಆಗಿಲ್ಲ ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ, ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಶ್ಯಾವಳಿಗಳನ್ನು ಸರ್ಕಾರ ಪ್ರಕಟಿಸಿಲ್ಲವಾದರೂ, ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮೇ 2020 ರಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಚಕಮಕಿಯ ಎರಡು ವರ್ಷದ ಹಳೆಯ ವೀಡಿಯೊವನ್ನು,  ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಚಕಮಕಿ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ಒನ್ ಇಂಡಿಯಾ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಯುವತಿ ಹತ್ಯೆಯನ್ನು ‘ಲವ್‌ ಜಿಹಾದ್‌’ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights