ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಬಾಕ್ಸರ್‌ಅನ್ನು ಭಾರತದ ವಿಜಯಲಕ್ಷ್ಮಿ ಸೋಲಿಸಿದ್ದರೆ?

“ದುಬೈನಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿದ್ದ ಪಾಕಿಸ್ತಾನಿ ಮಹಿಳಾ ಬಾಕ್ಸರ್, ತನ್ನನ್ನು ಸೋಲಿಸಲು ಯಾವುದೇ ಭಾರತೀಯ ಮಹಿಳೆ ಮುಂದೆ ಬರಲಿ ಎಂದು ಹೆಮ್ಮೆಯಿಂದ ಸವಾಲು ಹಾಕುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಮಿಳುನಾಡಿನ ತೂತುಕುಡಿಯ ವಿಜಯಲಕ್ಷ್ಮಿ ಸವಾಲು ಸ್ವೀಕರಿಸಿ ಕಣಕ್ಕೆ ಇಳಿದರು. ಶಾಂತ ವರ್ತನೆಯ ನಂತರ ಏನಾಯಿತು ಎಂಬುದನ್ನು ನೀವು ನೋಡಬಹುದು” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಲವು ವಾಟ್ಸಾಪ್ ಗ್ರೂಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ.

2022 ರಲ್ಲಿ ಇದೇ ವಿಡಿಯೊವನ್ನು ಪಾಕ್ ಕುಸ್ತಿ ಪಟುವನ್ನು ಸೋಲಿಸಿದ RSS ಮಹಿಳೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು. 

ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳಾ ಕುಸ್ತಿಪಟು ಒಬ್ಬರು ಅಖಾಡಲ್ಲಿ ನಿಂತು, ಪ್ರೇಕಕ್ಷರ ಗ್ಯಾಲರಿಯ ಕಡೆಗೆ  ಪ್ರೇಕ್ಷಕರಿಗೆ ಸವಾಲು ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೇಸರಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿರುವ ಮಹಿಳೆಯೊಬ್ಬರು ಸವಾಲು ಸ್ವೀಕರಿಸಿ ಕುಸ್ತಿಯಲ್ಲಿ ಮೇಲುಗೈ ಸಾಧಿಸುತ್ತಾರೆ.

ವಿಡಿಯೋದೊಂದಿಗೆ ಹಂಚಿಕೊಂಡಿರುವ ಶೀರ್ಷಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಸೇರಿದ ಭಾರತದ ಕುಸ್ತಿಪಟು ಪಾಕಿಸ್ತಾನಿ ಕುಸ್ತಿಪಟುವನ್ನು ಸೋಲಿಸಿದ್ದಾರೆ ಎಂಬ ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಾ, ಒಬ್ಬ ಹಿಂದೂ ಮಹಿಳೆಯ ಶಕ್ತಿಯನ್ನೊಮ್ಮೆ ನೋಡಿ, ಉಳಿದ ಹಿಂದೂಗಳ ಶಕ್ತಿಯನ್ನು ನೀವೇ ಊಹಿಸಿ. “ದುಬೈನಲ್ಲಿ ಪಾಕಿಸ್ತಾನದ ಫ್ರೀಸ್ಟೈಲ್ ಕುಸ್ತಿಪಟು ಭಾರತೀಯ ಮಹಿಳೆಯರನ್ನು ರಿಗ್‌ಗೆ ಬರುವಂತೆ ನಿಂದಿಸುವ ಮೂಲಕ ರಿಗ್‌ನಲ್ಲಿ ಸವಾಲು ಹಾಕಲು ಪ್ರಾರಂಭಿಸಿದಾಗ, ಸವಾಲನ್ನು ಸ್ವೀಕರಿಸಿದ RSSನ ದುರ್ಗಾ ವಾಹಿನಿಯ ಶಕ್ತಿಯನ್ನೊಮ್ಮೆ, ನೀವೇ ನೋಡಿ” ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು

ದುಬೈನಲ್ಲಿ ನಡೆದ ಪಂದ್ಯವನ್ನು ಗೆದ್ದ ನಂತರ ಪಾಕಿಸ್ತಾನದ ಮಹಿಳಾ ಬಾಕ್ಸರ್ ತನ್ನನ್ನು ಸೋಲಿಸಲು ಭಾರತದ ಯಾರಾದರೂ ಮುಂದೆ ಬರಲಿ ಎಂದು ಹೆಮ್ಮೆಯಿಂದ ಸವಾಲು ಹಾಕಿದರು. ತಮಿಳುನಾಡಿನ ತುತ್ತುಕುಡಿಯ ವೀಕ್ಷಕ ಮಹಿಳೆ ವಿಜಯ ಲಕ್ಷ್ಮಿ ಅವರು ಮುಕ್ತವಾಗಿ ದೃಢಸಂಕಲ್ಪದಿಂದ ಬಾಕ್ಸಿಂಗ್ ರಿಂಗ್‌ಗೆ ತೆರಳಿದರು ಮತ್ತು ರೋರಿಂಗ್ ಸವಾಲನ್ನು ಸ್ವೀಕರಿಸಿದರು. ಎಂದು “ಹಿಂದೂ ಹೆಮ್ಮೆ” ಎಂಬ ಶೀರ್ಷಿಕೆಯೊಂದಿಗೆ  ಬಲಪಂಥಿಯ ಪ್ರತಿಪಾದಕ ಸಾಮಾಜಿಕ ಬಳಕೆದಾರರು ಹಂಚಿಕೊಂಡಿದ್ದಾರೆ.

2021ರಲ್ಲಿ ಇದೇ ವಿಡಿಯೋವನ್ನು ಕೆಲವು ಪೋಸ್ಟ್‌ನಲ್ಲಿ“ ಪಾಕಿಸ್ತಾನಿ ಕುಸ್ತಿ ಪಟು ತನ್ನ ವಿರುದ್ದ ಹೋರಾಡಲು ಸವಾಲು ಹಾಕಿದರು, ಅವರನ್ನು RSSನ ಸ್ವಯಂ ಸೇವಕಿ ಸಂಧ್ಯಾ ಪಡಕೆ ಸೋಲಿಸಿದರು ಎಂದು ಹಂಚಿಕೊಳ್ಳಲಾತ್ತು”

ಹೀಗೆ ಪ್ರತಿ ವರ್ಷ ಬೇರೆ ಬೇರೆ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್ ಮಾಡಿದಾಗ 16 ಜೂನ್ 2016 ರ DNA ಎಂಬ ಇಂಗ್ಲಿಷ್ ಪತ್ರಿಕೆಯ ಸುದ್ದಿ ವರದಿಯು ಲಭ್ಯವಾಗಿದೆ. ವರದಿಯ ಪ್ರಕಾರ, ಕುಸ್ತಿಪಟುಗಳನ್ನು ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬಿಬಿ ಬುಲ್ಬುಲ್ ಮತ್ತು  ಮಾರ್ಷಲ್ ಆರ್ಟ್ಸ್ (ಎಂಎಂಎ) ಚಾಂಪಿಯನ್ ಕವಿತಾ ಎಂದು ಗುರುತಿಸಲಾಗಿದೆ.

ಪಂದ್ಯ ನಡೆದಿದ್ದು ಪಂಜಾಬ್‌ನಲ್ಲಿ, ದುಬೈನಲ್ಲಿ ಅಲ್ಲ

ಬುಲ್ ಬುಲ್ ಪ್ರೇಕ್ಷಕರಿಗೆ ಸವಾಲೆಸೆದಾಗ, ಪ್ರೇಕ್ಷಕರ ಸವಾಲನ್ನೆಸೆದ ಕವಿತಾ ಸವಾಲನ್ನು ಸ್ವೀಕರಿಸಿ ಕಣಕ್ಕೆ ಇಳಿದಿದ್ದಾರೆ. ಈ ಪಂದ್ಯವನ್ನು ಪಂಜಾಬ್ ಮೂಲದ ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (CWE) ಆಯೋಜಿಸಿತ್ತು, ಇದನ್ನು 2015 ರಲ್ಲಿ ಭಾರತೀಯ ಕುಸ್ತಿಪಟು ಖಲಿ ವಹಿಸಿದ್ದರು.  ಈ ಕುಸ್ತಿ ಪಂದ್ಯದ ವೀಡಿಯೊವನ್ನು 16 ಜೂನ್ 2016 ರಂದು CWE ಯ ಪರಿಶೀಲಿಸಿದ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಬುಲ್ ಬುಲ್ ಬಿಬಿ, ಕವಿತಾ ಅವರನ್ನು ಕಪಾಳಮೋಕ್ಷ ಮಾಡುವ ಮೂಲಕ ಕಾರ್ಯವಿಧಾನವನ್ನು ಪ್ರಾರಂಭಿಸಿದರು ಆದರೆ ನಂತರ ಮಾಜಿ ಪೊಲೀಸ್ ಅಧಿಕಾರಿ ಅನುಭವಿ ಕುಸ್ತಿಪಟುವನ್ನು ವೇದಿಕೆಯಲ್ಲಿ ಬಿಬಿ ಬುಲ್ ವುಲ್ ಅವರನ್ನು ಸೋಲಿಸುತ್ತಾರೆ.

ಬಲಪಂಥೀಯ ಪ್ರತಿಪಾದಕ ಟ್ವಿಟರ್ ಬಳಕೆದಾರ ರಿಷಿ ಬಾಗ್ರೀ ಅವರು 2016 ರಲ್ಲಿ ಅದೇ ನಿರೂಪಣೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದರು, ಇದನ್ನು ನಕಲಿ ನಿರೂಪಣೆಗಳೊಂದಿಗೆ ಹಂಚಿಕೊಂಡಿರುವ ವಿಡಿಯೊ ಎಂದು  BOOM ರಿಷಿ ಬಾಗ್ರೀ ಸುಳ್ಳು ಹೇಳಿದ್ದಾರೆ ಎಂದು ಬಹಿರಂಗಪಡಿಸಿತ್ತು. ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪಾಕಿಸ್ತಾನಿ ಮಹಿಳಾ ಕುಸ್ತಿಪಟು ಭಾರತೀಯ ಪ್ರೇಕ್ಷಕರನ್ನು ನಿಂದಿಸಿ, ಸವಾಲು ಹಾಕಿ ಪಂದ್ಯಕ್ಕೆ ಆಹ್ವಾನಿಸಿದರು ಎಂದು ಹಲವು ವರ್ಷಗಳಿಂದ ವಿಡಿಯೊ ವೈರಲ್ ಆಗಿದೆ.

https://twitter.com/koli_leena/status/1417766299715850243

ಸವಾಲು ಹಾಕಿದ ಮಹಿಳೆ ಪಾಕಿಸ್ತಾನದವರಲ್ಲ:

ಮಹಿಳೆಯರ ಕುಸ್ತಿ ಪಂದ್ಯದಲ್ಲಿ ಸವಾಲು ಹಾಕಿದ ಮಹಿಳೆ ಪಾಕಿಸ್ತಾನದವರಲ್ಲ ಅವರ ಭಾರತದ ಮಹಿಳೆಯಾಗಿದ್ದು  ಪಂಜಾಬ್‌ನ ಜಲಂಧರ್‌ನಲ್ಲಿ ತನ್ನ ಕುಸ್ತಿ ತರಬೇತಿಯನ್ನು ಪಡೆದಿರುವುದಾಗಿ ಹೇಳುವುದನ್ನು 101 ಇಂಡಿಯಾದ ಯೂಟ್ಯೂಬ್ ಚಾನೆಲ್‌ ನಡೆಸಿದ ಸಂದರ್ಶನದಲ್ಲಿ ನೋಡಬಹುದು. ಬಿಬಿ ಬುಲ್‌ಬುಲ್ ಅವರ ಸಂದರ್ಶನ ನಡೆಸಿರುವ ವಿಡಿಯೋ ಲಭ್ಯವಾಗಿದ್ದು , ಅದರಲ್ಲಿ ಅವರು ತಮ್ಮ ನಿಜವಾದ ಹೆಸರನ್ನು ಸರಬ್ಜಿತ್ ಕೌರ್ ಎಂದು ಬಹಿರಂಗಪಡಿಸಿದ್ದಾರೆ.

ಕುಸ್ತಿಯಲ್ಲಿ ಗೆದ್ದ ಕೇಸರಿ ಬಟ್ಟೆ ಧರಿಸಿರಿವ ಮಹಿಳೆ ತಮಿಳುನಾಡಿನ ತೂತುಕುಡಿಯ ವಿಜಯಲಕ್ಷ್ಮಿ ಅಲ್ಲ ಅವರ ಹೆಸರು ಕವಿತಾ.  ಕವಿತಾ ಅವರಿಗೂ RSS ಗೂ ಸಂಬಂಧವಿಲ್ಲ. 5 ಸೆಪ್ಟೆಂಬರ್ 2017 ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಎಂಬ ಇಂಗ್ಲಿಷ್ ಪತ್ರಿಕೆ ಪ್ರಕಟಿಸಿದ ಮತ್ತೊಂದು ಲೇಖನದ ಪ್ರಕಾರ, ಕವಿತಾ ದೇವಿ ಈ ಹಿಂದೆ MMA ಚಾಂಪಿಯನ್ ಆಗಿದ್ದರು. ಪ್ರಸ್ತುತ, ಅವರು ವೃತ್ತಿಪರ ಕುಸ್ತಿಪಟು ಮಾತ್ರವಲ್ಲದೆ, ಹರಿಯಾಣ ಪೊಲೀಸ್ ಅಧಿಕಾರಿಯೂ ಆಗಿದ್ದಾರೆ. ಅವರಿಗೂ RSSಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 16 ಜೂನ್ 2016 ರಂದು ಪಂಚಾಬ್‌ನಲ್ಲಿ ನಡೆದ  CWE ಯ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು, ದುಬೈನಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಪಾಕಿಸ್ತಾನದ ಮಹಿಳೆಯನ್ನು (ಬುಲ್ ಬುಲ್ ಬಿಬಿ ಯನ್ನು) ಸೋಲಿಸಿದ ಭಾರತದ RSS ನ ತಮಿಳುನಾಡಿನ ತೂತುಕುಡಿಯ ವಿಜಯಲಕ್ಷ್ಮಿ (ಕವಿತಾ ದೇವಿ ಯನ್ನು) ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಕವಿತಾ ದೇವಿ ಅವರು ಪೊಲೀಸ್‌ ಅಧಿಕಾರಿಯಾಗಿದ್ದು RSSಗೂ ಅವರಿಗೂ ಸಂಬಂಧವಿಲ್ಲ. ವೈರಲ್ ವಿಡಿಯೋ ಸುಮಾರು 5 ವರ್ಷದಂದ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಅಯೋದ್ಯಯಲ್ಲಿ ಮಂಗವೊಂದು ಶ್ರೀರಾಮನ ದರ್ಶನಕ್ಕೆ ಪ್ರತಿದಿನ ಬರುತ್ತದೆಯೇ? 


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights